ಕಲಬುರಗಿ: ಅ. 28 ರಂದು ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ಮಾಡದೇ ಸಿದ್ರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು ಮೊದಲು ಸದಾಶಿವ ಆಯೋಗ ಸುಮಾರು ವರ್ಷಗಳಿಂದ ನೇಮಕ ಮಾಡಲಾಗಿತ್ತು.
ಒಂದು ಆಯೋಗ ವರದಿ ನೀಡಿದೆ. ಅದು ಸರಿಯಿಲ್ಲ ಅಂತಾ ಒಳಮೀಸಲಾತಿಯನ್ನು ಕಾರ್ಯರೂಪಕ್ಕೆ ಬಂತ್ತು. ಇದನ್ನು ನಿಮ್ಮ ಪಕ್ಷದಲ್ಲಿರುವ ರಾಜಕೀಯವರ ಒತ್ತಡಕ್ಕೆ ಮಣಿದು ಒಳ ಮೀಸಲಾತಿ ಜಾರಿಗೆ ತರದೇ ದಾರಿ ತಪ್ಪಿಸುವ ಕೆಲಸ ಮಾಡಿದ್ದಿರಿ. ಒಂದು ವೇಳೆ ಒಳಮೀಸಲಾತಿ ಜಾರಿ ಮಾಡದೆ ಆಗದಿದ್ದರೆ ನೈತಿಕ ಹೊಣೆ ಹೊತ್ತಿ, ಸಿದ್ರಾಮಯ್ಯನವರೆ ತಾವುಗಳು ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಭಾರತೀಯ ಜನತಾ ಪಕ್ಷದ ಎಸ್.ಸಿ.ಮೋರ್ಚಾ ನಗರ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಜಿನಕೇರಿ ಅವರು ತಿಳಿಸಿದ್ದಾರೆ.
ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಸದಾಶಿವ ಆಯೋಗ ವರದಿ ತಯಾರಿಸಲು ಈ ಆಯೋಗಕ್ಕೆ ಬಿಜೆಪಿ ಸರ್ಕಾರ ಅನುದಾನ ಮಂಜೂರು ಮಾಡಲಾಗಿತ್ತು. ಈಗ ತಾನೆ ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಒಳಮಿಸಲಾತಿಯು ಜಾರಿ ಮಾಡಿದೆ. ಇದೊಂದು ಉದಾಹರಣೆ ಇಟ್ಟುಕೊಂಡು ನಮ್ಮ ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡಬಹುದಾಗಿತ್ತು.
ಆದರೆ ನೀವು ಹೈಕೋರ್ಟ ನಿವೃತ್ತ ನ್ಯಾಯಧೀಶರು ಆಯೋಗ ರಚನೆ ಮಾಡುವುದು ಏನು ಅವಶ್ಯಕತೆ ಇದೆನಾ? ತಾವು ಮರು ಉಪ ಚುನಾವಣೆ ನಿಮಿತ್ಯವಾಗಿ (ಗಿಮಿಕ್) ಮಾಡಿದ್ದಿರಿ. ಇದರಿಂದ ಮಾದಿಗರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಿರಿ ಮಾನ್ಯ ಸಿದ್ರಾಮಯ್ಯನವರೇ. ನೀವು ಒಬ್ಬ ಹಿಂದುಳಿದ ವ್ಯಕ್ತಿಯಾಗಿ, ಬಡವರಾಗಿದ್ದುಕೊಂಡು ಹಸಿವು ಏನೆಂಬುವುದನ್ನು ಕಂಡಂತ ವ್ಯಕ್ತಿ ನಮ್ಮ ಸಮಾಜಕ್ಕೆ ಏಕೆ ಹೀಗೆ ಅನ್ಯಾಯ ಮಾಡುತ್ತಿದ್ದಿರಿ.
ಈ ರಾಜ್ಯ ಸರ್ಕಾರಕ್ಕೆ ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿರುತ್ತೇವೆ. ತಮ್ಮ ರಾಜ್ಯದ ಅನುಗುಣವಾಗಿ ಒಳಮೀಸಲಾತಿ ಜಾರಿ ಮಾಡಬಹುದು ಎಂದು ಸಂವಿಧಾನ ನಿಯಮಗಳ ಪ್ರಕಾರ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದ ಸಮಾಜದವರಿಗೆ ಅಭಿವೃದ್ಧಿ ಹೊಂದಬೇಕೆಂದು ಡಾ.ಬಿ.ಆರ್. ಅಂಬೇಡ್ಕರ್ ರವರ ಆಸೆಯಾಗಿತ್ತು. ಇದನ್ನು ಅರಿತುಕೊಂಡು ಸುಪ್ರಿಂ ಕೋರ್ಟ ಮಹತ್ವವಾದ ತೀರ್ಪು ನೀಡಿದೆ.
ಆದರೂ ಕೂಡ ಆವಾಗಾವಾಗ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಾಗ ನಮ್ಮ ಸಮಾಜದವರು ಹಲವಾರು ಮನವಿ ಪತ್ರಗಳನ್ನು ಸಲ್ಲಿಸಿರುತ್ತೇವೆ. ಆದರೂ ಕೂಡ ಕಾಂಗ್ರೇಸ್ ಪಕ್ಷವು ಉದ್ದೇಶಪೂರ್ವಕವಾಗಿ ಇವರು ನಮ್ಮ ಜನಾಂಗಕ್ಕೆ ಆಗಿನ ಕಾಲದಿಂದ ಇಲ್ಲಿಯವರೆಗೂ ನಮ್ಮ ಮಾದಿಗ ಸಮಾಜದ ಮತಗಳನ್ನು ಪಡೆದುಕೊಂಡು ನಮಗೆ ಪದೇ ಪದೇ ಅನ್ಯಾಯ ಮತ್ತು ಪಿತೂರಿ ಮಾಡುತ್ತಾ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ದಾರಿ ತಪ್ಪಿಸಿದ್ದಾರೆ. ಉದಾಹರಣೆಗೆ ಕಲಬುರಗಿ ಜಿಲ್ಲೆಯಲ್ಲಿ ಮಹಾನಗರ ಪಾಲಿಕೆಯಲ್ಲಿ ಬರತ್ತಕಂತಹ ಮಿಸಲಾತಿ ಕ್ಷೇತ್ರಗಳು 8 ಇದ್ದಿದ್ದವು. ಇದರಲ್ಲಿ ಒಂದು ಸ್ಥಾನ ಮಾತ್ರ ಮಾದಿಗರಿಗೆ ಬಿಟ್ಟುಕೊಟ್ಟಿರುತ್ತಾರೆ.
ಈಗ ಸರ್ಕಾರ ಇದೆ ನಾಮನಿರ್ದೇಶನಗಳು ನಮ್ಮ ಮಾದಿಗ ಸಮಾಜದವರಿಗೆ ಸುಮಾರು 9 ಕ್ಷೇತ್ರಗಳಿದ್ದು, ಇದರಲ್ಲಿ ಯಾವ ಕ್ಷೇತ್ರಗಳಲ್ಲಿ ನಮ್ಮ ಮಾದಿಗ ಸಮಾಜದವರಿಗೆ ನಾಮನಿರ್ದೇಶನ ಮಾಡಿದ್ದಾರೆ. ಇದರಿಂದ ನಮ್ಮ ಸಮಾಜದವರಿಗೆ ಕಾಂಗ್ರೇಸ್ ಪಕ್ಷವು ಹೀಗೆ ಮೋಸ ಮಾಡುತ್ತಿದೆ ಎಂದು ಅರಿಯುವುದು ಯಾವಾಗ, ಇನ್ನೂ ಮುಂದೆ ನಮ್ಮ ಮಾದಿಗ ಸಮಾಜದವರು ಎಚ್ಚೆತ್ತುಕೊಳ್ಳಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಡಿಸೆಂಬರ್ 4ಕ್ಕೆ ಮತದಾನ,ಅಂದೇ ಫಲಿತಾಂಶ ಪ್ರಕಟ ಕಲಬುರಗಿ,ನ.16: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ 2024-29…
ಕಲಬುರಗಿ: ಕಾವ್ಯ ಅನ್ನುವುದು ಸುಲಭವಾಗಿ ಒಲಿಯುವುದಿಲ್ಲ. ಅದು ತಪಸ್ಸು ಇದ್ದ ಹಾಗೆ. ಕವಿಗಳಿಗೆ ಅಧ್ಯಯನ ಹಾಗೂ ಶಬ್ದ ಭಂಡಾರ ಅಗತ್ಯ…
ಕಲಬುರಗಿ: ನಗರದ ರಂಗಾಯಣದಲ್ಲಿ ಮನಸ್ವಿ ಸಾಂಸ್ಕøತಿಕ ಹಾಗೂ ನಾಟ್ಯ ಕಲಾವಿದರ ಸಂಘದ ವತಿಯಿಂದ ಜನಪದ ನೃತ್ಯೋತ್ಸವ ಕಾರ್ಯಕ್ರಮವನ್ನು ನೃತ್ಯಕಲಾವಿದ ಚಾಂದ…
ಕಲಬುರಗಿ: ನಗರದ ಶಾಹಬಜಾರಲ್ಲಿರುವ ಶುಕ್ಲಾ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಷಾ ಎಜುಕೇಶನಲ್ ಅಂಡ್ ಚಾರಿಟೇಬಲ್…
ಕಲಬುರಗಿ; ನವೆಂಬರ್ 20 ರಂದು ಕರ್ನಾಟಕದಲ್ಲಿ ಮಧ್ಯ ಮಾರಾಟ ಮಳಿಗೆಗಳ ಬಂದ ಕರೆಗೆ ಬೆಂಬಲವಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್…
ಕಲಬುರಗಿ: ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವದಂಗವಾಗಿ ಕವಿಗೋಷ್ಠಿ,…