ಜೇವರ್ಗಿ: ನರೇಗಾ ಯೋಜನೆಯಡಿ ಕಾಮಗಾರಿಗಳ ಬೇಡಿಕೆ ಸಂಗ್ರಹ ಅಭಿಯಾನ ಪ್ರಾರಂಭವಾಗಿದ್ದು, ಮೋಬೈಲ್ ಅಪ್ಲಿಕೇಷನ್ ಅಥವಾ ಕ್ಯೂ ಆರ್ ಕೋಡ್ ಮೂಲಕ ರೈತರು ಹಾಗೂ ಕೂಲಿ ಕಾರ್ಮಿಕರು ಕಾಮಗಾರಿ ಬೇಡಿಕೆ ಅರ್ಜಿ ಸಲ್ಲಿಸಬೇಕು ಎಂದು ತಾ.ಪಂ ಮಾಹಿತಿ ಶಿಕ್ಷಣ ಮತ್ತು ಸಂಹನ ಸಂಯೋಜಕ ಚಿದಂಬರ ಪಾಟೀಲ ಅವರು ಹೇಳಿದರು.
ತಾಲೂಕಿನ ಗ್ರಾಮ ಪಂಚಾಯತ ಆಂದೋಲಾ ಗ್ರಾಮದ ಹನುಮಾನ ಮಂದಿರ ಹತ್ತಿರ ಬುಧವಾರ ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು “ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ” ನಡೆಸಿ ಬಳಿಕ ವಾರ್ಡ್ ಸಭೆಯಲ್ಲಿ ಅವರು ಮಾತನಾಡಿದರು. ಕಾಮಗಾರಿಗಳ ಪೂರ್ವ ದತ್ತಾಂಶಗಳ ಕೊರತೆಯಿಂದ ದುರುಪಯೋಗ ಆಗುತ್ತಿದ್ದು, ಇದನ್ನು ತಡೆದು ಸರಳಿಕರಣಗೊಳಿಸಲು ಆನಲೈನ್ ಮೂಲಕ ಕ್ರಿಯಾಯೋಜನೆ ಸಿದ್ದಪಡಿಸುವ ವ್ಯವಸ್ಥೆ ಸರ್ಕಾರ ಜಾರಿಗೆ ತಂದಿದೆ ಎಂದರು.
ಕಾರ್ಮಿಕ ಆಯವ್ಯಯವನ್ನು ಪ್ರತಿ ಆರ್ಥಿಕ ವರ್ಷ ಆ.2 ರಿಂದ ನವೆಂಬರ್ ಮಾಹೆಯವರೆಗೆ ಸಿದ್ದಪಡಿಸಲಾಗುತ್ತದೆ. ಈಗಾಗಲೇ ಎಲ್ಲಾ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಗ್ರಾಮದ ಮನೆ ಮನೆಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಬಹುದಾದ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬಗ್ಗೆ ತಿಳಿಸಿ “ಕಾಮಗಾರಿ ಬೇಡಿಕೆ ಪೆಟ್ಟಿಗೆ ಹಾಗೂ ಮೋಬೈಲ್ ಅಪ್ಲಿಕೇಷನ್ ತಂತ್ರಾಶದ” ಮೂಲಕ ರೈತು ಹಾಗೂ ಕೂಲಿ ಕಾರ್ಮಿಕರಿಂದ ಬೇಡಿಕೆ ಪಡೆಯಲಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರಾಸ್ಥವಿಕವಾಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯರುದ್ರಪ್ಪ ನವಣಿ ಅವರು, ಮಾತನಾಡಿದರು. ಗ್ರಾಮ ಪಂಚಾಯತಿ ಅಷ್ಟೇ ಅಲ್ಲದೆ, ತೋಟಗಾರಿಕೆ ಇಲಾಖೆ ಕೃಷಿ ಇಲಾಖೆ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆ ಸೇರಿದಂತೆ ವಿವಿಧ ಅನುಷ್ಠಾನ ಇಲಾಖೆಗಳಿಗೆ ಕೆಲಸಗಳನ್ನು ಹಂಚಿಕೆ ಮಾಡಿ ಅನುಷ್ಠಾನಿಸಲಾಗುತ್ತಿದ್ದು, ರೇಷ್ಮೆ, ಬಾಳೆ, ದನದ ಶೆಡ್, , ಹೂವು ಬೇಸಾಯ, ಕುರಿ ಶೆಡ್, ಕೋಳಿ ಶೆಡ್, ಇರುಳ್ಳಿ ಶೇಡ್, ಬದು ನಿರ್ಮಾಣ, ಕೃಷಿ ಹೋಂಡಾ, ಬಚ್ಚಲು ಗುಂಡಿ, ಮತ್ತು ನಮ್ಮ ಹೊಲ – ನಮ್ಮ ದಾರಿ ಸೇರಿದಂತೆ ವೈಯಕ್ತಿಕ ಹಾಗೂ ಸಮುದಾಯ ಕಾಮಗರಿಗಳ ಬೇಡಿಕೆ ಸಲ್ಲಿಸಿದ್ದಲ್ಲಿ. ಕಾಮಗಾರಿಗಳ ಗುಚ್ಛ ಸಿದ್ದಪಡಿಸಿ ಅವುಗಳನ್ನು ಪರಿಶೀಲಿಸಿ, ಗ್ರಾಮ ಸಭಾ ನಡುವಳಿಯೊಂದಿಗೆ ಕ್ರಿಯಾಯೋಜನೆಯಲ್ಲಿಟ್ಟು ಜಿಲ್ಲಾ ಪಂಚಾಯತಿಯಿಂದ ಅನುಮೊದನೆ ಪಡೆದು ಅನುಷ್ಠಾನಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮೊದಲ ಗ್ರಾಮದ ಪ್ರಮುಖ ಬೀದಿಯಲ್ಲಿ ಉದ್ಯೋಗ ವಾಹಿನಿ ರಥ ಮೂಲಕ ಜಾಗೃತಿ ಮೂಡಿಸಿ ಕರಪತ್ರಗಳನ್ನು ಹಂಚಲಾಯಿತು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶರಬಯ್ಯ ನಾಯಕಲ್ ವಾರ್ಡ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ದೊಡ್ಡಪ್ಪ ಅಂಗಡಿ, ಭೀಮಾಶಂಕರ ಸುಣಗಾರ, ಗುರು ಶಹಾಪೂರ, ಚಂದ್ರಶೇಖರ, ಗ್ರಾ.ಪಂ ಲೆಕ್ಕ ಸಹಾಯಕ ಮಡಿವಾಳಪ್ಪ ಪಾಟೀಲ ಮತ್ತು ಕಂಪ್ಯೂಟರ್ ಆಪರೇಟರ್ ಚಂದ್ರಶೇಖರ ಸುಂಬಡ ಸೇರಿದಂತೆ ಗ್ರಾಮಸ್ಥರು ಮತ್ತು ಪಂಚಾಯತಿ ಸಿಬ್ಬಂದಿಗಳು ಭಾಗವಹಿಸದ್ದರು.
ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ಒಂದು ಆಥಿಕ ವರ್ಷದಲ್ಲಿ ನರೇಗಾದಡಿ 100 ದಿನ ಉದ್ಯೋಗ ಖಾತರಿಯಾಗಿದೆ. ಸಮಾನ ಕೆಲಸಕ್ಕೆ ಸಮಾನ ಕೂಲಿ, ಪ್ರತಿ ದಿನ ಕೆಲಸಕ್ಕೆ 349/- ಕೂಲಿ ಮೊತ್ತ., ಮಹಿಳೆಯರು ಕನಿಷ್ಠ ಶೇ. 60ರಷ್ಟು ಭಾಗವಹಿಸುವಿಕೆಗೆ ಒತ್ತು, ಹಿರಿಯ ನಾಗರಿಕರು, ವಿಶೇಷ ಚೇತನರು, ಗರ್ಭಿಣಿಯರು, ವಯೋವೃದ್ಧರಿಗೆ ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿ. ಮತ್ತು ಲಿಂಗತ್ವ ಅಲ್ಪ ಸಂಖ್ಯಾತರಿಗೆ ಕೆಲಸದ ಪ್ರಮಾಣದಲ್ಲಿ ಶೇ.10 ರಷ್ಟು ರಿಯಾಯಿತಿ, ಮತ್ತು ಕಾಮಾಗಾರಿ ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಶುದ್ಧವಾದ ಕುಡಿಯುವ ನೀರು, ನೇರಳಿನ ವ್ಯವಸ್ಥೆ ಮಾಡಲಾಗುತ್ತದೆ.
ಡಿಸೆಂಬರ್ 4ಕ್ಕೆ ಮತದಾನ,ಅಂದೇ ಫಲಿತಾಂಶ ಪ್ರಕಟ ಕಲಬುರಗಿ,ನ.16: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ 2024-29…
ಕಲಬುರಗಿ: ಕಾವ್ಯ ಅನ್ನುವುದು ಸುಲಭವಾಗಿ ಒಲಿಯುವುದಿಲ್ಲ. ಅದು ತಪಸ್ಸು ಇದ್ದ ಹಾಗೆ. ಕವಿಗಳಿಗೆ ಅಧ್ಯಯನ ಹಾಗೂ ಶಬ್ದ ಭಂಡಾರ ಅಗತ್ಯ…
ಕಲಬುರಗಿ: ನಗರದ ರಂಗಾಯಣದಲ್ಲಿ ಮನಸ್ವಿ ಸಾಂಸ್ಕøತಿಕ ಹಾಗೂ ನಾಟ್ಯ ಕಲಾವಿದರ ಸಂಘದ ವತಿಯಿಂದ ಜನಪದ ನೃತ್ಯೋತ್ಸವ ಕಾರ್ಯಕ್ರಮವನ್ನು ನೃತ್ಯಕಲಾವಿದ ಚಾಂದ…
ಕಲಬುರಗಿ: ನಗರದ ಶಾಹಬಜಾರಲ್ಲಿರುವ ಶುಕ್ಲಾ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಷಾ ಎಜುಕೇಶನಲ್ ಅಂಡ್ ಚಾರಿಟೇಬಲ್…
ಕಲಬುರಗಿ; ನವೆಂಬರ್ 20 ರಂದು ಕರ್ನಾಟಕದಲ್ಲಿ ಮಧ್ಯ ಮಾರಾಟ ಮಳಿಗೆಗಳ ಬಂದ ಕರೆಗೆ ಬೆಂಬಲವಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್…
ಕಲಬುರಗಿ: ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವದಂಗವಾಗಿ ಕವಿಗೋಷ್ಠಿ,…