ಕಲಬುರಗಿ: ಜಿಲ್ಲೆಯ ಭೀಮಾ ತೀರದಲ್ಲಿರುವ ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಮಣ್ಣೂರಲ್ಲಿ ನ.6 ರಿಂದ 9ರ ವರೆಗೆ 4 ದಿನಗಳ ಕಾಲ ಉತ್ತರಾದಿ ಮಠಾಧೀಶರಾದಂತಹ ವೇದೇಶತೀರ್ಥರ 400ನೇ ಆರಾಧನೆ ಮಹೋತ್ಸವ ಹಾಗೂ ಅಲ್ಲಿರುವ ವೇದೇಶತೀರ್ಥ ವಿದ್ಯಾಪೀಠದಲ್ಲಿದ್ದು ಶಾಸ್ತ್ರಾಧ್ಯಯನ ಪೂರೈಸಿರುವ 11 ವಿದ್ಯಾರ್ಥಿಗಳ ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ ಹಾಗೂ ಶ್ರೀ ಮಹಾಭಾರತ ತಾತ್ಪರ್ಯ ನಿರ್ಣಯ ಮಂಗಳ ಮಹೋತ್ಸವದ ಸಮಾರಂಭ ನಡೆಯುತ್ತಿದೆ.
ಈಗಾಗಲೇ 6 ಸುಧಾ ಮಂಗಳ ಮಹೋತ್ಸವ ನೆರವೇರಿಸಿರುವ ಖ್ಯಾತಿಯ ಇಲ್ಲಿನ ವಿದೇಶತೀರ್ಥ ಸಂಸ್ಕೃತ ವಿದ್ಯಾಪೀಠದಿಂದ ಇದೀಗ 7ನೇ ಸುಧಾ ಮಂಗಳ ನಡೆಯುತ್ತಿದ್ದು, ಇದರಲ್ಲಿ ಅಲ್ಲಿಯೇ ಇದ್ದು ಗುರುಕಲ ಮಾದರಿಯಲ್ಲಿ ಪಾಠ ಪವಚನ ಮಾಡಿಕೊಂಡು ನ್ಯಾಯಸುಧಾ ಗ್ರಂಥ ಅಧ್ಯಯನ ಮಾಡಿರುವಂತಹ ಜಯತೀರ್ಥ, ಅಶ್ವತ್ಥ, ಶ್ರೀಪಾದ, ಕಿರಣ ರೋಹಿತ್, ನರಸಿಂಹ ಮೂರ್ತಿ, ಆದಿಶೇಷ, ವಿಷ್ಣು, ಶಶಾಂಕ್, ಸಂಪತ್ ಹಾಗೂ ದೀಪಕ್ ಇವರೆಲ್ಲ ಗುರುಗಳ ಸನ್ನಿಧಾನದಲ್ಲಿ ತಾವು ಕಲಿತ ಸುಧಾ ಪಾಠ, ಅನುವಾದ ಪರೀಕ್ಷೆಗಳನ್ನು ನೀಡಲಿದ್ದಾರೆ.
ನ.6ರಿಂದಲೇ ಶುರುವಾಗುವ ಆರಾಧನೆ ಹಾಗೂ ಮಂಗಳ ಮಹೋತ್ಸವದ ಸಮಾರಂಭಗಳಲ್ಲಿ ಅಂದು ಸುಪ್ರಭಾತ, ಅಷ್ಟೋತ್ತರ, ಸ್ವಸ್ತಿವಾಚನ, ಮಲ್ಲಕ್ಕಿ ಸೇವೆ, ವಿದ್ಯಾರ್ಥಿಗಳಿಂದ ಅನುವಾದ, ಹಸ್ತೋದಕ, ತೀರ್ಥ ಪ್ರಸಾದ ನಡೆಯಲಿವೆ.
ನ.7ರಂದು ಬೆಳಗ್ಗೆ 6 ಗಂಟೆಗೆ ಸುಪ್ರಭಾತ, ಪಂಚಾಮೃತ ಅಭಿಷೇಕದೊಂದಿಗೆ ಶುರುವಾಗುವ ಸಮಾರಂಭದಲ್ಲಿ ಗುರುಗಳಿಂದ ನ್ಯಾಯಸುಧಾ ಪಾಠ, ನಂತರ ಮುದ್ರಾಧಾರಣೆ, ವಿದ್ಯಾರ್ಥಿಗಳ ಅನುವಾದ, ಸಂಸ್ಥಾನ ಪೂಜೆ, ಮುಂಬೈನ ಮುಲುಂಡ ಸತ್ಯಧ್ಯಾನ ವಿದ್ಯಾಪೀಠದ ಪಂ. ವಿದ್ಯಾಸಿಂಹಾಚಾರ್ಯರಿಂದ ವೇದೇಶತೀರ್ಥರ ಮಹಿಮೆ ಉಪನ್ಯಾಸ, ನಂತರ ಶ್ರೀಗಳ ಅನುಗ್ರಹ ಸಂದೇಶಗಳು ನಡೆಯಲಿವೆ.
ನ.8 ಬೆಳಗ್ಗೆ ಗಜವಾಹನ ಉತ್ಸವ: ವೇದೇಶತೀರ್ಥರ ಆರಾಧನೆ ಅಂಗವಾಗಿ ಉತ್ತರಾರಾಧನೆ ದಿನದ ವಿಶೇಷವಾಗಿ ಗಜವಾಹನ ಉತ್ಸವ ಎಲ್ಲರ ಗಮನ ಸೆಳೆಯಲಿದೆ. ಇಂದೂ ಕೂಡಾ ನ್ಯಾಯಸುಧಾ ಪಾಠ, ಅಷ್ಟೋತ್ತರ, ಸ್ವಸ್ತಿವಾಚನ, ಸಂಸ್ಥಾನ ಪೂಜೆಗಳು ಮಠದಲ್ಲಿಯೇ ನಡೆಯಲಿವೆ.
ಇದೇ ದಿನ ರಾತ್ರಿಯ ಸಭಾ ಕಾರ್ಯಕ್ರಮಕ್ಕೂ ಮೊದಲು ಸಂಜೆ ನ್ಯಾಯಸುಧಾ ಗ್ರಂಥದ ಭವ್ಯ ಮೆರವಣಿಗೆ ನಡಯಲಿದ್ದು ಸನ್ನಾಮನ ಸಮಾರಂಭ ಗಮನ ಸೆಳೆಯಲಿದೆ. ಇದೇ ಸಂದರ್ಭದಲ್ಲಿ ಗ್ರಂಥಗಳ ಬಿಡುಗಡೆಯೂ ನಡೆಯಲಿದೆ. ಇದೇ ಸಮಯದಲ್ಲಿ ಪಂ. ವಿಶ್ವಪ್ರಜ್ಞಾಚಾರ್ಯರಿಂದ ವಿಶೇಷ ಉಫನ್ಯಾಸ ನಡೆಯಲಿದೆ. ಶೌರ್ಯಚಕ್ರ ಪುರಸ್ಕೃತ ಎಂವಿ ಪ್ರಾಂಜಲ್ ಸ್ಮರಣಾರ್ಥ ಯೋಧ ನಮನಂ ರಾಷ್ಟ್ರ ನಮನಂ ಕಾರ್ಯಕ್ರಮವೂ ಆಯೋಜಿಸಲಾಗಿದೆ. ನಂತರ ಸತ್ಯಾತ್ಮ ತೀರ್ಥರಿಂದ ಅನುಗ್ರಹ ಸಂದೇಶ, ಮೈಸೂರು ರಾಮಚಂದ್ರ ಆಚಾರ್ ಇವರಿಂದ ಸಚಿತ್ರ ದಾಸವಾಣಿ ಅಂದಿನ ಆಕರ್ಷಣೆಯಾಗಿರಲಿದೆ.
ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ ಸಮಾರಂಭದಲ್ಲಿ ಕೂಡ್ಲಿ ಆರ್ಯ ಅಕ್ಷೋಭ್ಯ ತೀರ್ಥ ಮಠದ ಶ್ರೀ ರಘುವಿಜಯ ತೀರ್ಥರು, ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು, ಪಲಿಮಾರು ಮಠ ಕಿರಿಯ ಪಟ್ಟ ವಿದ್ಯಾರಾಜೇಶ್ವರ ತೀರ್ಥರು ವಿಶೇಷವಾಗಿ ಉಪಸ್ಥಿತರಿರಲಿದ್ದಾರೆ.
ಮಣ್ಣೂರಲ್ಲಿ ನ.6 ರಿಂದ ನ.9ರ ವರೆಗಿನ ಎಲ್ಲಾ ಸಮಾರಂಭಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಬೇಕಾಗಿ ವಿದ್ಯಾಪೀಠದ ಕುಲಪತಿಗಳಾದ ಪಂ.ಅನಂತಾಚಾರ್ಯ ಅಕಮಂಚಿಯವರು ಮನವಿ ಮಾಡಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…