ಕಲಬುರಗಿ: ಜಿಲ್ಲಾ ಪ್ರಥಮ ಜನಪದ ಸಾಹಿತ್ಯ ಸಮ್ಮೇಳನ ಇದೇ 10 ರಂದು ನಗರದ ಕನ್ನಡ ಭವನದಲ್ಲಿ ಜರುಗಲಿದೆ. ಈ ಕುರಿತು ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ ಹಾಗೂ ಜನಪದರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಜನಪದ ಕಲೆ ಮತ್ತು ಸಾಹಿತ್ಯ ಒಬ್ಬರಿಂದ ಒಬ್ಬರಿಗೆ ಹರಿದು ಬಂದಿವೆ. ಅವು ನಮ್ಮ ಸಾಂಸ್ಕøತಿಕ ಜೀವನಕ್ಕೆ ಬುನಾದಿಯಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಮಾಹಿತಿ ನೀಡಿದ ತೇಗಲತಿಪ್ಪಿ, ಎಲ್ಲಾ ಸಾಹಿತ್ಯದ ಪ್ರಕಾರಗಳಿಗೆ ಜನಪದ ಸಾಹಿತ್ಯವೇ ತಾಯಿ ಬೇರಾಗಿದೆ. ಇಂದು ಜನಸಾಮಾನ್ಯರ ಜೀವನ ಮಟ್ಟ ಎತ್ತರಿಸಲು ಮತ್ತು ಸಾಂಸ್ಕøತಿಕ ಬದುಕನ್ನು ಕಟ್ಟಿಕೊಳ್ಳಲು ಜನಪದ ಸಾಹಿತ್ಯ ತುಂಬಾ ಪರಿಣಾಮಕಾರಿಯಾಗಿದೆ. ಆಧುನಿಕ ಜೀವನ ಶೈಲಿಯಿಂದ ನಮ್ಮ ಜನಪದ ಕಲೆ ಮತ್ತು ಸಂಸ್ಕøತಿ ಮರೀಚಿಕೆಯಾಗುತ್ತಿದೆ. ಅದನ್ನು ಉಳಿಸಿ ಬೆಳೆಸುವಲ್ಲಿ ಇಂಥ ಸಮ್ಮೇಳನ ಆಯೋಜಿಸಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಜನಪದ ಕಲಾವಿದರು, ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಜನಪದ ಸಾಹಿತ್ಯ ಸಮ್ಮೇಳನದ ಮೂಲಕ ಇಂದಿನ ಯುವ ಪೀಳಿಗೆಗೆ ಜನಪದ ಸಾಹಿತ್ಯದ ಮೌಲ್ಯಗಳನ್ನು ತಿಳಿಸಿ ಕೊಡಬೇಕಾಗಿದೆ. ಈ ಹಿನ್ನೆಲೆಯಾಗಿ ಪ್ರಪ್ರಥಮ ಬಾರಿಗೆ ಜನಪದ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ. ಜನಪದ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸಲು ಇಂಥ ಸಮ್ಮೇಳನಗಳು ಅವಶ್ಯಕವಾಗಿವೆ ಎಂದರು.
ಅಂದು ಬೆಳಗ್ಗೆ 9.30 ಕ್ಕೆ ನಗರದ ಮಿನಿ ವಿಧಾನ ಸೌಧದಿಂದ ಕನ್ನಡ ಭವನದವರೆಗೆ ಸಮ್ಮೇಳನಾಧ್ಯಕ್ಷರ ಸಾಂಸ್ಕøತಿಕ ಮೆರವಣಿಗೆ ನಡೆಯಲಿದ್ದು, ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಚಾಲನೆ ನೀಡಲಿದ್ದಾರೆ. ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಗದ ಜಿಲ್ಲಾಧ್ಯಕ್ಷ ಧರ್ಮರಾಜ ಜವಳಿ ನೇತೃತ್ವ ವಹಿಸಲಿದ್ದಾರೆ. ಕಸಾಪ ದ ವಿವಿಧ ತಾಲೂಕಾಧ್ಯಕ್ಷರುಗಳು ಉಪಸ್ಥಿತರಿರುವರು.
ಸಂಗೀತ ಕಲಾವಿದ ಭಗವಂತಪ್ಪ ಹೂಗಾರ ದೇಸಾಯಿ ಕಲ್ಲೂರ ವೇದಿಕೆಯಡಿಯಲ್ಲಿ ಬೆಳಗ್ಗೆ 10.45 ಕ್ಕೆ ಜರಗಲಿರುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಉದ್ಘಾಟಕರಾಗಿ ಆಗಮಿಸಲಿದ್ದು, ಹಿರಿಯ ಲೇಖಕಿ ಪ್ರೊ. ಶೋಭಾದೇವಿ ಚೆಕ್ಕಿ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಕಜಾಪ ರಾಜ್ಯ ಕಾರ್ಯಾಧ್ಯಕ್ಷ ಡಾ. ಎಸ್ ಬಾಲಾಜಿ, ಬೆಂಗಳೂರಿನ ಸಿ.ಸಿ.ಬಿ. ವಿಭಾಗದ ಸಿಪಿಐ ಹಾಗೂ ಜಾನಪದ ಗಾಯಕ ಜ್ಯೋತಿರ್ಲಿಂಗ ಹೊನಕಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜನಪದ ಕ್ಷೇತ್ರದಲ್ಲಿ ಕೃಷಿಗೈದ ಪ್ರಮುಖರಾದ ಡಾ. ಬಿ.ಎಸ್. ಪೊಲೀಸ್ ಪಾಟೀಲ, ಡಾ. ಸ್ವಾಮಿರಾವ ಕುಲಕರ್ಣಿ, ಡಾ. ಹನುಂತರಾವ ದೊಡ್ಮನಿ, ಬಾಬುರಾವ ಜಮಾದಾರ, ಡಾ. ಶಾರದಾದೇವಿ ಜಾಧವ, ಡಾ. ಸುರೇಂದ್ರಕುಮಾರ ಕೆರಮಗಿ, ಡಾ. ಸಂಗೀತಾ ಹಿರೇಮಠ ಅವರನ್ನು ಸತ್ಕರಿಸಲಾಗುವುದು.
ಮಧ್ಯಾಹ್ನ 12.15 ಕ್ಕೆ ನಡೆಯುವ ಚಿಂತನಾಗೋಷ್ಠಿಯಲ್ಲಿ ಜನಪದ ಸಾಹಿತ್ಯದ ತತ್ವ-ಸತ್ವ-ಮಹತ್ವ ಎಂಬ ವಿಷಯದ ಕುರಿತು ಡಾ. ರಾಜೇಂದ್ರ ಯರನಾಳೆ, ಜಿಲ್ಲೆಯ ಜನಪದ ಸಾಹಿತ್ಯದ ವೈವಿಧ್ಯತೆ ಕುರಿತು ಡಾ. ಚಿತ್ಕಳಾ ಮಠಪತಿ, ಸಮ್ಮೇಳನಾಧ್ಯಕ್ಷರ ಬದುಕು-ಬರಹ ಕುರಿತು ಡಾ. ಸುರೇಶ ಜಾಧವ ಮಾತನಾಡಲಿದ್ದಾರೆ. ವೈದ್ಯ ಸಾಹಿತಿ ಡಾ. ಎಸ್.ಎಸ್. ಪಾಟೀಲ ಮಂದರವಾಡ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಸ್. ಮಾಲಿಪಾಟೀಲ ಆಶಯ ನುಡಿಗಳನ್ನಾಡುವರು. ನವೀನ್ ಕಲಬುರಗಿ ಹೆಬ್ಬಾಳ, ಕೆ.ಪಿ. ಗಿರಿಧರ, ಗಿರೀಜಾ ಕರ್ಪೂರ, ಸುನೀಲ ಚೌಧರಿ ಉಪಸ್ಥಿತರಿರುವರು.
ಮಧ್ಯಾಹ್ನ 2.15 ಕ್ಕೆ ನಡೆಯುವ ಹಾಡು ಹೆಜ್ಜೆಗಳ ಸಂಭ್ರಮದಲ್ಲಿ ಅನೇಕ ಕಲಾ ತಂಡಗಳು, ವಿವಿಧ ಶಾಲಾ ಮಕ್ಕಳಿಂದ ಜಾನಪದ ಸಾಂಸ್ಕøತಿಕ ಸಂಭ್ರಮ ಜರುಗುವುದು.
ಸಾಯಂಕಾಲ 4.30 ಕ್ಕೆ ಸಮಾರೋಪ ಹಾಗೂ ಸತ್ಕಾರ ಸಂಭ್ರಮದಲ್ಲಿ ಹಿರಿಯ ಲೇಖಕಿ ಡಾ. ವಿಶಾಲಾಕ್ಷಿ ಕರೆಡ್ಡಿ ಸಮಾರೋಪ ನುಡಿಗಳನ್ನಾಡುವರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಚಂದ್ರಕಲಾ ಬಿದರಿ, ನಾಟಕ ಅಕಾಡೆಮಿಯ ಮಾಜಿ ಸದಸ್ಯ ಬಿ. ಸಂದೀಪ, ಆಕಾಶವಾಣಿ ಕೇಂದ್ರದ ಉದ್ಘೋಷಕ ಶಾರದಾ ಜಂಬಲದಿನ್ನಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕೇಂದ್ರ ಪರಿಷತ್ತಿನಿಂದ ಇಂಥ ವಿಶೇಷ ಸಾಹಿತ್ಯ ಸಮ್ಮೇಳನಗಳಿಗೆ ಯಾವುದೇ ಅನುದಾನ ಇರುವುದಿಲ್ಲ. ಬದಲಾಗಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಇಂಥ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದ್ದು, ಜಿಲ್ಲೆಯ ಪ್ರಮುಖರ ಸಹಕಾರದಿಂದ ನಿರಂತರವಾಗಿ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ಎಂ ಎನ್ ಸುಗಂಧಿ, ಸ್ವಾಗತ ಸಮಿತಿಯ ಅಧ್ಯಕ್ಷ ಮಹ್ಮದ್ ಇಬ್ರಾಹಿಂ, ಗೌರವಾಧ್ಯಕ್ಷ ಕಾಶಿನಾಥ ಪಲ್ಲೇರಿ, ಕಾರ್ಯಾಧ್ಯಕ್ಷ ಬಿ.ಎನ್. ಪುಣ್ಯಶೆಟ್ಟಿ ಇತರರಿದ್ದರು.
ರಂಗದಂಗಳದಲ್ಲಿ ಮಾತುಕತೆಯಲ್ಲಿ ರಂಗಕರ್ಮಿ ಸಾಂಬಶಿವ ದಳವಾಯಿ ಹೇಳಿಕೆ ಕಲಬುರಗಿ: ಕೋವಿಡ್‌ನಿಂದ ರಂಗ ಚಟುವಟಿಕೆಗಳು ಮಂಕಾಗಿದ್ದವು. ಇದೀಗ ನಿಧಾನಗತಿಯಲ್ಲಿ ಅವು ಚೇತರಿಕೆ…
ಕಲಬುರಗಿ: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಸಾಧಕ-ಬಾಧಕಗಳನ್ನು ನಾಗರಿಕರಿಗೆ ಮುಟ್ಟಿಸುವ ಕಾರ್ಯ ಮಾಡುವ ಪತ್ರಿಕಾ ರಂಗವು ನಾಲ್ಕನೇ ರಂಗವಾಗಿ ಕಾರ್ಯನಿರ್ವಹಿಸುತ್ತಿದ್ದೆ.…
ಕಲಬುರಗಿ : ಭಾರತ ದೇಶ ಪ್ರಗತಿಯಲ್ಲಿ ಯುವಶಕ್ತಿ ಸಹಭಾಗಿತ್ವ ಬಹಳ ಮುಖ್ಯ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕನಸಾಗಿತ್ತು.…
ಕಲಬುರಗಿ: ನಗರದ ಪತ್ರಿಕಾ ಭವನದಲ್ಲಿ ಜ್ಞಾನದೀಪ ನೃತ್ಯ ಕಲಾ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಂಸ್ಕøತಿಕ ಸಂಜೆ ಕಾರ್ಯಕ್ರಮದಲ್ಲಿ…
ಕಲಬುರಗಿ: ನಗರದ ಮಾತಾ ಮಾಣಿಕೇಶ್ವರಿ ಕಾಲೋನಿಯಲ್ಲಿರುವ ಶ್ರೀ ಕೋಕಿಲ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ನವಚೇತನ ಸಾಂಸ್ಕøತಿಕ ಕಲಾ ಸಂಸ್ಥೆ ವತಿಯಿಂದ …
ಕಲಬುರಗಿ: ನಮ್ಮ ತಾಲೂಕಿನ ಹೆಮ್ಮೆಯ ಹೋರಾಟಗಾರ,ಕವಿ,ಸಾಹಿತಿಯಾದ ಡಾ.ಹನುಮಂತರಾವ ಅವರಿಗೆ ಪ್ರಶಸ್ತಿ ಲಭಿಸಿದ್ದು ಸಂತೋಷ ತಂದಿದೆ ಅವರಿಗೆ ಪ್ರಶಸ್ತಿ ದೊರಕಿದ್ದು ಸರ…