ಬಿಸಿ ಬಿಸಿ ಸುದ್ದಿ

ಜಾಲಿಬೆಂಚಿ:ಸಮಯಕ್ಕೆ ಬಾರದ ಬಸ್;ಗ್ರಾಮಸ್ಥರ ಆಕ್ರೋಶ

ಸುರಪುರ:ತಾಲ್ಲೂಕಿನ ಜಾಲಿಬೆಂಚಿ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಬಾರದ ಕಾರಣ ಗ್ರಾಮದ ಜನರು ಸಾರಿಗೆ ಇಲಾಖೆ ವಿರುದ್ಧ ನಿತ್ಯವು ಹಿಡಿಶಾಪ ಹಾಕುವಂತಾಗಿದೆ ಎಂದು ಗ್ರಾಮದ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಗುರುವಾರ ಬೆಳಿಗ್ಗೆ ಗ್ರಾಮದ ಬಸ್ ನಿಲ್ದಾಣದ ಬಳಿಯಲ್ಲಿ ಬಸ್‍ಗಾಗಿ ಅನೇಕ ವಿದ್ಯಾರ್ಥಿಗಳು ಕಾಯುತ್ತಾ ನಿಂತು ಸಮಯಕ್ಕೆ ಸರಿಯಾಗಿ ಬಸ್ ಬಾರದ ಕಾರಣ ಬೇಸರ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡರು,ಒಂದು ದಿನವೂ ಕೂಡ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ.ವಿದ್ಯಾರ್ಥಿನಿಯರು,ವಯೋ ವೃದ್ಧರು,ಮಹಿಳೆಯರು,ಕಾಯಿಲೆ ಬಿದ್ದವರು ಗ್ರಾಮ ದಿಂದ ಒಂದು ಕಿಲೋ ಮೀಟರ್ ದೂರ ಕ್ರಾಸ್‍ವರೆಗೆ ನಡೆದುಕೊಂಡು ಹೋದರೆ ಅಲ್ಲಿಯೂ ಸಮಯಕ್ಕೆ ಬಸ್ ಬರುವುದಿಲ್ಲ.

ಯಾವಾಗೋ ಒಂದು ಬಸ್ ಬಂದರೆ ಅದು ಕೂಡ ಬೈಚಬಾಳ,ಕೂಡ್ಲಿಗಿ,ಕನ್ನೆಳ್ಳಿ,ಮಂಗಳೂರು ಗ್ರಾಮಗಳಿಂದ ತುಂಬಿಕೊಂಡು ಬರುತ್ತದೆ ಇದರಿಂದ ಜಾಲಿಬೆಂಚಿ ಗ್ರಾಮದ ವಿದ್ಯಾರ್ಥಿಗಳು ಬಸ್ ಒಳಗಡೆ ಹತ್ತಲು ಆಗದಷ್ಟು ಬಸ್ ತುಂಬಿರುತ್ತದೆ.ಇದರಿಂದ ಜನರು ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಗೆ ಹಿಡಿಶಾಪ ಹಾಕುತ್ತಾ ಮನೆಗೆ ಮರಳಿ ಬರುವ ಸ್ಥಿತಿ ಇದೆ.ಬಸ್ ಸಮಯಕ್ಕೆ ಬಾರದ ಕಾರಣ ಅನೇಕ ಬಾರಿ ವಿದ್ಯಾರ್ಥಿಗಳು ಶಾಲಾ,ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ.

ನಿತ್ಯವು ಖಾಸಗಿ ವಾಹನಗಳಿ ಹಣ ಕೊಟ್ಟು ಹೋಗಿ ಬರಲು ವಿದ್ಯಾರ್ಥಿಗಳಿಗೆ ಸಾಧ್ಯವಾಗದು,ಇದರ ಕುರಿತು ಅನೇಕ ಬಾರಿ ಘಟಕ ವ್ಯವಸ್ಥಾಪಕರಿಗೆ ಮನವಿ ಕೊಟ್ಟರು ಪ್ರಯೋಜನೆಯಾಗುತ್ತಿಲ್ಲ.ಬೆಳಿಗಿನ ಸಮಯದಲ್ಲಿ ಆಸ್ಪತ್ರೆಗೆ ಹೋಗಬೇಕೆಂದರು ಬಸ್ ಇಲ್ಲದೆ ಜನರು ನರಳುವ ಸ್ಥಿತಿ ಇದೆ ಕೂಡಲೆ ಸಾರಿಗೆ ಇಲಾಖೆ ಜಾಲಿಬೆಂಚಿ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಓಡಿಸಬೇಕು ಮತ್ತು ಕೂಡ್ಲಿಗಿ,ಬೈಚಬಾಳ,ಕನ್ನೆಳ್ಳಿ ಹೋಗುವ ಎಲ್ಲಾ ಬಸ್‍ಗಳು ಗ್ರಾಮದೊಳಗೆ ವಾಯಾ ಮಾಡಿಕೊಂಡು ಹೋಗಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಕುಂಬಾರಪೇಟ ವೃತ್ತದಲ್ಲಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರಸ್ತೆ ತಡೆದು ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ಗ್ರಾಮದ ಅನೇಕ ಮುಖಂಡರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

emedialine

Recent Posts

ಕಲಬುರಗಿ : ಸಮಾಜ ಬದಲಾಗದ ಹೊರತು ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ: ನ್ಯಾ.ಬಿ.ವೀರಪ್ಪ

ಸುಳ್ಳು ದೂರು ಕೊಟ್ಟಲ್ಲಿ 3 ವರ್ಷ ಜೈಲು ಶಿಕ್ಷೆ ಕಲಬುರಗಿ: ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತೊಗೆಯಬೇಕಾದರೆ…

20 mins ago

ಶ್ರೀ ಡಾ. ಶರಣಬಸವಪ್ಪ ಅಪ್ಪಾ ನಡೆದಾಡುವ ದೇವರು: ಬಸವರಾಜ ದೇಶಮುಖ

ಕಲಬುರಗಿ: ಕಲಬುರಗಿ ಜಿಲ್ಲೆ ಶರಣರ ಹೆಬ್ಬಾಗಿಲು. ಇಲ್ಲಿ ಅನೇಕ ಶರಣರು, ದಾಸರು ಬಾಳಿ ಬದುಕಿದ ನೆಲ. ಶಿಕ್ಷಣ ಮತ್ತು ದಾಸೋಹ…

26 mins ago

ನಿರಂತರ ರಂಗಕ್ರಿಯೆಗೆ ರಂಗಾಯಣ ಬದ್ಧ: ರಾಜು ತಾಳಿಕೋಟೆ

ಧಾರವಾಡ: ಉತ್ತರ ಕರ್ನಾಟಕದಾದ್ಯಂತ ನಾಟಕ ಚಟುವಟಿಕೆಗಳನ್ನು ನಿರಂತರ ನಡೆಸಿ ರಂಗಲೋಕವನ್ನು ಜೀವಂತವಾಗಿರಿಸಲು ಬದ್ಧವಾಗಿದ್ದೇನೆಂದು ಖ್ಯಾತ ನಟ, ನಿರ್ದೇಶಕ ರಾಜು ತಾಳಿಕೋಟೆ…

34 mins ago

ಅಂಕದ ಜೊತೆಗೆ ಕ್ರೀಡೆಯು ಇರಲಿ: ಡಾ. ಸದಾನಂದ ಪೆರ್ಲ

ಕಲಬುರಗಿ : ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಕೇವಲ ಅಂಕದ ಬೆನ್ನ ಹಿಂದೆ…

44 mins ago

ಕಲಬುರಗಿ: ಅದ್ಧೂರಿಯಾಗಿ ಜರುಗಿದ ಪೂಜ್ಯ ಡಾ ಅಪ್ಪಾಜಿಯವರ ಜನ್ಮದಿನಾಚರಣೆ

ಕಲಬುರಗಿ; ನಗರದ ಶ್ರೀ ಶರಣಬಸವೇಶ್ವರ ಪುಣ್ಯಕ್ಷೇತ್ರದ ದಾಸೋಹ ಮಹಾಮನೆಯಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿ…

6 hours ago

ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಫಾರೂಕ್ ಮನ್ನೂರ್ ಮಕ್ಕಳೊಂದಿಗೆ ಜನ್ಮದಿನಾಚರಣೆ

ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಇಂದು ಸಂಜು ನಗರದಲ್ಲಿರುವ ಕಲಿಕಾ ಕೇಂದ್ರದಲ್ಲಿ ಮನ್ನೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಫಾರೂಕ್ ಮನ್ನೂರ್…

23 hours ago