ಬಿಸಿ ಬಿಸಿ ಸುದ್ದಿ

ರಾಷ್ಟ್ರ ರಕ್ಷಣಾ ಪಡೆಯ ಘಟಕದಿಂದ ರಾಜ್ಯಪಾಲರಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ರೈತರ ಜಮೀನುಗಳ ಪಹಣಿಯ ಕಾಲಂ ನಂ. 11ರಲ್ಲಿ ವಕ್ ಬೋರ್ಡ ಆಸ್ತಿಯೆಂದು ಮತ್ತು ಮಠ, ಮಂದಿರಗಳ ಆಸ್ತಿಗಳ ದಾಖಲೆಗಳಲ್ಲಿ ವಕ್ಸ್ ಬೋರ್ಡ ಆಸ್ತಿಯನ್ನು ಅನಧಕೃತವಾಗಿ ನಮೂದಿಸಿರುವುದನ್ನು ತಕ್ಷಣವೇ ತೆಗೆದು ಹಾಕುವುದು ಮತ್ತು ವಕ್ಸ್ 1974ರ ಕಾಯ್ದೆಯನ್ನು ರದ್ದುಪಡಿಸಬೇಕೆಂದು ರಾಷ್ಟ್ರ ರಕ್ಷಣಾ ಪಡೆಯ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಮುಖಾಂತರ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ರೈತರ ಜಮೀನುಗಳ ಪಹಣಿಯ ಕಲಂ ನಂ. 11ರಲ್ಲಿ ವಕ್ಸ್ ಬೋರ್ಡ ಆಸ್ತಿಯೆಂದು ನಮೂದಿಸಲಾಗಿರುತ್ತದೆ ಅಲ್ಲದೇ ನಮ್ಮ ಹಿಂದು ಧರ್ಮದ ಮಠ, ಮಂದಿರಗಳ ಆಸ್ತಿಗಳ ದಾಖಲೆಗಳಲ್ಲಿಯೂ ಕೂಡಾ ವಕ್ಸ್ ಬೋರ್ಡ ಆಸ್ತಿಯನ್ನು ಅನಧಕೃತವಾಗಿ ನಮೂದಿಸಲಾಗಿರುತ್ತದೆ. ಸದರಿ ವಕ್ಸ್ ಬೋರ್ಡ ನಮ್ಮ ಹಿಂದು ಧರ್ಮದ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿರುವುದು ಅಲ್ಲದೇ ರೈತರ ಜಮೀನುಗಳನ್ನು ಅತಿಕ್ರಮಸುವುದಕ್ಕೆ ಪ್ರಯತ್ನಿಸುತ್ತಿದೆ.

ಆದ್ದರಿಂದ ಮಾನ್ಯರಾದ ತಾವುಗಳು ತಕ್ಷಣವೇ ರೈತರ ಹೆಸರಿನಲ್ಲಿರುವ ಜಮೀನುಗಳ ಪಹಣಿಯ ಕಾಲಂ. 11ರಲ್ಲಿರುವ ವಕ್ಸ್ ಬೋರ್ಡ ಹೆಸರನ್ನು ನಮೂದಿಸಿರುವುದನ್ನು ತಕ್ಷಣವೇ ತೆಗೆದು ಹಾಕಬೇಕು ಮತ್ತು ಸದರಿ ವಕ್ಸ್ 1974ರ ಕಾಯ್ದೆಯನ್ನು ರದ್ದುಪಡಿಸಬೇಕೆಂದು.
ಒಂದು ವೇಳೆ ನಿಗಧಿತ 30 ದಿನಗಳ ಅವಧಿಯೊಳಗೆ ಸದರಿ ಜಮೀನುಗಳ ಪಹಣಿಯ ಕಾಲಂ ನಂ. 11 ರಲ್ಲಿರುವ ವಕ್ಸ್ ಬೋರ್ಡ ಹೆಸರನ್ನು ತೆಗೆದು ಹಾಕದೇ ಇದ್ದ ಪಕ್ಷದಲ್ಲಿ ನಮ್ಮ ಸಂಘಟನೆ. ಹಿಂದು ಸಂಘಟನೆಗಳು ಮತ್ತು ಮಠಾಧೀಶರು ಒಟ್ಟುಗೂಡಿ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಹವಾಗುತ್ತದೆ ಇದರಿಂದ ನಷ್ಟ ಉಂಟಾದಲ್ಲಿ ತಾವುಗಳೇ ನೇರ ಹೊಣೆಗಾರರಾಗುವಿರೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಪಡೆಯ ಜಿಲ್ಲಾ ಅಧ್ಯಕ್ಷ ಮಡಿವಾಳಪ್ಪ ಅಮರಾವತಿ, ನಾಲ್ಕು ಚಕ್ರ ತಂಡದ ಮುಖ್ಯಸ್ಥೆ ಮಾಲಾ ಕಣ್ಣಿ, ಉಪಾಧ್ಯಕ್ಷ ಗಂಗಾಧರ ಹಲಬಾ, ಜಂಟಿ ಕಾರ್ಯದರ್ಶಿ ನಾರಾಯಣ ಜಾಗೀರದಾರ, ಕಾರ್ಯದರ್ಶಿ ಪ್ರಜ್ವಲ ಮಾಲೀಪಾಟೀಲ, ಜೇವರ್ಗಿ ತಾಲೂಕಾ ಅಧ್ಯಕ್ಷ ಸಿದ್ದು ಪಾಟೀಲ, ಕಾರ್ಯಕಾರಿಣಿ ಸಮಿತಿ ಸದಸ್ಯ ಅಂಬರೀಶ ಪಾಟೀಲ, ನಿಂಗರಾಜ ಡಾಂಗೆ, ಈಶ್ವರ ಹಿಪ್ಪರಗಿ, ಜೈಭೀಮ, ರಮೇಶ ಬಿದರಕರ್ ಇದ್ದರು.

emedialine

Recent Posts

ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಫಾರೂಕ್ ಮನ್ನೂರ್ ಮಕ್ಕಳೊಂದಿಗೆ ಜನ್ಮದಿನಾಚರಣೆ

ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಇಂದು ಸಂಜು ನಗರದಲ್ಲಿರುವ ಕಲಿಕಾ ಕೇಂದ್ರದಲ್ಲಿ ಮನ್ನೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಫಾರೂಕ್ ಮನ್ನೂರ್…

9 hours ago

ಜಾನಪದದಲ್ಲಿ ಮಾನವೀಯ ಮೌಲ್ಯಗಳು ಒಳಗೊಂಡಿದೆ: ಯಲ್ಲಪ್ಪ ನಾಯ್ಕೋಡಿ

ಕಲಬುರಗಿ: ಜಾನಪದ ಸಾಹಿತ್ಯ ಸಂಸ್ಕೃತಿ ಹಾಗೂ ಜಾನಪದ ಕಲೆ ಪ್ರಕಾರಗಳಲ್ಲಿ ಮಾನವಿಯ ಮೌಲ್ಯ ಅಡಕವಾಗಿದೆ ಎಂದು ಮಹಾಪೌರರಾದ ಯಲ್ಲಪ್ಪ ನಾಯ್ಕೊಡಿ…

10 hours ago

ಕಲಬುರಗಿ ಸ್ಮಾರ್ಟ್ ಸಿಟೀ ಎನ್ನುವುದು ಸಿಎಂ ತೋರಿಸುವ ಹಗಲ ನಕ್ಷತ್ರ

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲ್ಯಾಣ ಕರ್ನಾಟಕದ ಜನರ ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಾ ಬಂದಿದ್ದಾರೆ, ಅದರ ಮುಂದುವರೆದ ಭಾಗವಾಗಿ…

10 hours ago

ರವಿ ಎನ್ ದೇಗಾಂವ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ

ಕಲಬುರಗಿ: ಕೆ ಪಿ ಆರ್ ಸಕ್ಕರೆ ಕಾರ್ಖಾನೆಯಿಂದ ಹೊರಬಿಡುತ್ತಿರುವ ಕಲುಷಿತ ನೀರು ಮತ್ತು ಕಲುಷಿತ ಗಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರ ಜಮೀನುಗಳಿಗೆ…

10 hours ago

ಕಲಬುರಗಿ; 10 ಕೃತಿಗಳಿಗೆ `ಅಮ್ಮ ಪ್ರಶಸ್ತಿ’

ಕಲಬುರಗಿ; ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ವಿದ್ಯಾರಶ್ಮಿ…

10 hours ago

ವಾಡಿ; ಮಕ್ಕಳ ದಿನಾಚರಣೆ ಸಂಭ್ರಮ

ವಾಡಿ: ಮಾಜಿ ಪ್ರಧಾನಿ ಪಂಡೀತ್ ಜವಾಹರಲಾಲ್ ನೆಹರು ಅವರ ಜನ್ಮದಿನ ಪ್ರಯುಕ್ತ ಪಟ್ಟಣದ ವಿವಿಧ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.…

10 hours ago