ಬಿಸಿ ಬಿಸಿ ಸುದ್ದಿ

ಬಾಬಾಸಾಹೇಬ್ ರವರು ವಾಡಿ ರೈಲ್ವೆ ಜಂಕ್ಷನ್ ಗೆ ಬಂದಿರುವ ಬಗ್ಗೆ ಛಾಯಾ ಚಿತ್ರ ಲಭ್ಯ

ವಾಡಿ: ಬಾಬಾಸಾಹೇಬ್ ಅಂಬೇಡ್ಕರ್ ರವರು ರೈಲ್ವೆಯಲ್ಲಿ ಹೈದರಬಾದ್ ಗೆ ಪ್ರಯಾಣ ಮಾಡುತ್ತಿರುವಾಗ ಗುಲಬರ್ಗಾದ ವಾಡಿ ಜಂಕ್ಷನ್ ಹತ್ತಿರ ಬಾಬಾಸಾಹೇಬರು 45 ನಿಮಿಷಗಳ ಕಾಲ ರೈಲ್ ನಿಲ್ಲಿಸಲಾಗಿತ್ತು.

ಅವರು ಕೆಳಗೆ ಇಳಿಯುವುದನ್ನು (ಒಬ್ಬ ಮುಸ್ಲಿಂ ವ್ಯಕ್ತಿ ಆತನ ಹೆಸರು ಮುಲಾಲಾ ಸಾಬ ಅಂತ ಈತ ಹೋಟೆಲ್ ನಲ್ಲಿ ಚಾಹಮಾಡುತ್ತಿದ.) ನೋಡಿ ಬಾಬಾಸಾಹೇಬ್ ಅಂಬೇಡ್ಕರ್ ರವನ್ನು ಕಂಡು  ಆ ಸಂತೋಷದಲ್ಲೆ ಅವರ ಬಳಿ ಬಂದ ಅವರನ್ನು ಕರೆದುಕೊಂಡು ಬಂದು ಚಹಾ ನೀಡಿ ಅವರನ್ನು ಮಾತಾನಾಡಿಸುತ್ತಾ, ಆಗ ಬಾಬಾಸಾಹೇಬ್ ಅಂಬೇಡ್ಕರ ರವರು ಬಂದಿರುವ ವಿಷಯವನ್ನು ತಿಳಿದು ವಾಡಿ ಜನರು ಅವರನ್ನು ನೋಡಿಲು ಬಹಳಷ್ಟು ಜನ ಸಮೂಹವೇ ಸೇರಿದರು.

ಅಂದು ಅಂಬೇಡ್ಕರ್ ವಾಡಿಗೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿದ ಪ್ರದೇಶದಲ್ಲಿ  ಸ್ಥಾಪಿತವಾಗಿರುವ ಅಂಬೇಡ್ಕರ್ ಸ್ಟಾಚು

ಆ ಜನಗಳುನ್ನು ಕಂಡ ಬಾಬಾಸಾಹೇಬರು ಅವರನ್ನು ಮಾತಾನಾಡಿಸುತ್ತಾರೆ. ಇನ್ನೊಂದು ಪ್ರಮುಖವಾದ ವಿಷಯವೆಂದರೆ ಆ ಸಂದರ್ಭದಲ್ಲಿ ಬಾಬಾಸಾಹೇಬರು ವಾಡಿ ಜನತೆ ಹೇಗಿದ್ದೀರಾ? ಎಂದು ಬಾಬಾಸಾಹೇಬರು ಕೇಳಿದಾಗ ವಾಡಿ ಜನರ ಪರವಾಗಿ ನಮ್ಮದೇ ಆದ ಸ್ವಂತ ಮನೆ ನಮಗೆ ಇಲ್ಲಾ ಮುಲಾಲಾ ಸಾಬ ಎಂದು ಹೇಳಿದ
(ಮುಲಾಲಾ ಸಾಬ ಅಂತ ಈತ ಹೋಟೆಲ್ ನಲ್ಲಿ ಚಾಹಮಾಡುತ್ತಿದ) ಆಗ ಬಾಬಾಸಾಹೇಬರು ಆ ಊರಿಗೆ ಸಂಬಂಧಿಸಿದ ತಹಶೀಲ್ದಾರ ಮತ್ತು ಜಿಲ್ಲಾಧಿಕಾರಿ ರವರಿಗೆ ಒಂದು ಪತ್ರವನ್ನು ಬರೆದು ತಮ್ಮ ಸ್ವಯಂ ಹಣದಿಂದ 34 ಎಕೆರೆ ಭೂಮಿಯನ್ನು ವಾಡಿ ಜನರಿಗೆ ಮನೆಗಳನ್ನು ಕಟ್ಟಿಕೊಳ್ಳಳು ಸಹಾಯ ಮಾಡಿದರು.

ಅಂಬೇಡ್ಕರ್ ಅವರು ವಾಡಿಗೆ ಬಂದಿದ್ದಾಗ ಮುಲಾಲಾ ಸಾಬ ಎಂಬ ಟೀ ಮಾರುವ ವ್ಯಕ್ತಿ ಅವರನ್ನು ಗುರುತಿಸಿ ಕರೆದು  ಮಾತನಾಡಿಸಿದ, ಜನರಿಗೆ ಇದರ ಮಾಹಿತಿ ತಿಳಿದ್ದಾಗ ಗ್ರಾಮದ ಜನರು ಅಂಬೇಡ್ಕರ್ ಅವರಿಗೆ ನೋಡಲು ಜನ ಸೇರುತ್ತಾರೆ. ಜನರ ಸೇರುವಿಕೆ ಕಂಡ ಅಂಬೇಡ್ಕರ್ ಅವರೊಂದಿಗೆ ಸುಮಾರು 45 ನಿಮಿಷ ಕಾಲ ಕಳೆದ್ದಿದ್ದಾರೆ.                                                                        –  ರಾಣಪ್ಪ ಡಿ ಪಾಳಾ, ಮಾಹಿತಿ ಸಂಗ್ರಹ

ತಹಶೀಲ್ದಾರ ಮತ್ತು ಜಿಲ್ಲಾಧಿಕಾರಿಯ ರವರಿಂದ ಅನುಮತಿ ಕೋಡಿಸಿದರು. ಬಾಬಾಸಾಹೇಬ್ ಅಂಬೇಡ್ಕರ ರವರ ಮರಳಿ ಹೈದರಬಾದ್ ಕಡೆಗೆ ತಮ್ಮ ಪ್ರಯಾಣ ಮಾಡಿದರು, ಆ ಎರಡು ವರ್ಷದ ಮೇಲೆ ಬಾಬಾಸಾಹೇಬ್ ಅಂಬೇಡ್ಕರ ರವರ ಮತ್ತೆ 1952 ಏಪ್ರಿಲ್ 28 ರಂದು ವಾಡಿ ಬಂದಾಗ ವಾಡಿ ಜನರೋಂದಿಗೆ ಪ್ರೀತಿಯಿಂದ ಈ ಪೋಟೋವನ್ನು ತೆಗೆದುಕೊಂಡರು.

ಬಾಬಾಸಾಹೇಬ್ ಅಂಬೇಡ್ಕರ ಬಂದು ಕೂತ ಜಾಗದಲ್ಲಿಯೇ ಬಾಬಾಸಾಹೇಬ್ ಅಂಬೇಡ್ಕರ ರವರು ಮೂರ್ತಿಯನ್ನು ಸ್ಥಾಪನೆ ಮಾಡಲಾಯಿತು . ಪ್ರತಿವರ್ಷದಂತೆ ಇದೀಗೂ ಕೂಡ ಅದೆ ದಿನದಿಂದೆ ವಾಡಿಯಲ್ಲಿ ಏಪ್ರಿಲ್ 28 ರಂದು ಅಂಬೇಡ್ಕರ ಜಯಂತಿಯನ್ನು ಆಚರಣೆಯನ್ನು ಚಾಲನೆಯಲ್ಲಿದೆ ಎಂದು ಹೇಳಬಹುದು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

54 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

56 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

58 mins ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

17 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago