ವಾಡಿ: ಬಾಬಾಸಾಹೇಬ್ ಅಂಬೇಡ್ಕರ್ ರವರು ರೈಲ್ವೆಯಲ್ಲಿ ಹೈದರಬಾದ್ ಗೆ ಪ್ರಯಾಣ ಮಾಡುತ್ತಿರುವಾಗ ಗುಲಬರ್ಗಾದ ವಾಡಿ ಜಂಕ್ಷನ್ ಹತ್ತಿರ ಬಾಬಾಸಾಹೇಬರು 45 ನಿಮಿಷಗಳ ಕಾಲ ರೈಲ್ ನಿಲ್ಲಿಸಲಾಗಿತ್ತು.
ಅವರು ಕೆಳಗೆ ಇಳಿಯುವುದನ್ನು (ಒಬ್ಬ ಮುಸ್ಲಿಂ ವ್ಯಕ್ತಿ ಆತನ ಹೆಸರು ಮುಲಾಲಾ ಸಾಬ ಅಂತ ಈತ ಹೋಟೆಲ್ ನಲ್ಲಿ ಚಾಹಮಾಡುತ್ತಿದ.) ನೋಡಿ ಬಾಬಾಸಾಹೇಬ್ ಅಂಬೇಡ್ಕರ್ ರವನ್ನು ಕಂಡು ಆ ಸಂತೋಷದಲ್ಲೆ ಅವರ ಬಳಿ ಬಂದ ಅವರನ್ನು ಕರೆದುಕೊಂಡು ಬಂದು ಚಹಾ ನೀಡಿ ಅವರನ್ನು ಮಾತಾನಾಡಿಸುತ್ತಾ, ಆಗ ಬಾಬಾಸಾಹೇಬ್ ಅಂಬೇಡ್ಕರ ರವರು ಬಂದಿರುವ ವಿಷಯವನ್ನು ತಿಳಿದು ವಾಡಿ ಜನರು ಅವರನ್ನು ನೋಡಿಲು ಬಹಳಷ್ಟು ಜನ ಸಮೂಹವೇ ಸೇರಿದರು.
ಅಂದು ಅಂಬೇಡ್ಕರ್ ವಾಡಿಗೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿದ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಅಂಬೇಡ್ಕರ್ ಸ್ಟಾಚು
ಆ ಜನಗಳುನ್ನು ಕಂಡ ಬಾಬಾಸಾಹೇಬರು ಅವರನ್ನು ಮಾತಾನಾಡಿಸುತ್ತಾರೆ. ಇನ್ನೊಂದು ಪ್ರಮುಖವಾದ ವಿಷಯವೆಂದರೆ ಆ ಸಂದರ್ಭದಲ್ಲಿ ಬಾಬಾಸಾಹೇಬರು ವಾಡಿ ಜನತೆ ಹೇಗಿದ್ದೀರಾ? ಎಂದು ಬಾಬಾಸಾಹೇಬರು ಕೇಳಿದಾಗ ವಾಡಿ ಜನರ ಪರವಾಗಿ ನಮ್ಮದೇ ಆದ ಸ್ವಂತ ಮನೆ ನಮಗೆ ಇಲ್ಲಾ ಮುಲಾಲಾ ಸಾಬ ಎಂದು ಹೇಳಿದ
(ಮುಲಾಲಾ ಸಾಬ ಅಂತ ಈತ ಹೋಟೆಲ್ ನಲ್ಲಿ ಚಾಹಮಾಡುತ್ತಿದ) ಆಗ ಬಾಬಾಸಾಹೇಬರು ಆ ಊರಿಗೆ ಸಂಬಂಧಿಸಿದ ತಹಶೀಲ್ದಾರ ಮತ್ತು ಜಿಲ್ಲಾಧಿಕಾರಿ ರವರಿಗೆ ಒಂದು ಪತ್ರವನ್ನು ಬರೆದು ತಮ್ಮ ಸ್ವಯಂ ಹಣದಿಂದ 34 ಎಕೆರೆ ಭೂಮಿಯನ್ನು ವಾಡಿ ಜನರಿಗೆ ಮನೆಗಳನ್ನು ಕಟ್ಟಿಕೊಳ್ಳಳು ಸಹಾಯ ಮಾಡಿದರು.
ಅಂಬೇಡ್ಕರ್ ಅವರು ವಾಡಿಗೆ ಬಂದಿದ್ದಾಗ ಮುಲಾಲಾ ಸಾಬ ಎಂಬ ಟೀ ಮಾರುವ ವ್ಯಕ್ತಿ ಅವರನ್ನು ಗುರುತಿಸಿ ಕರೆದು ಮಾತನಾಡಿಸಿದ, ಜನರಿಗೆ ಇದರ ಮಾಹಿತಿ ತಿಳಿದ್ದಾಗ ಗ್ರಾಮದ ಜನರು ಅಂಬೇಡ್ಕರ್ ಅವರಿಗೆ ನೋಡಲು ಜನ ಸೇರುತ್ತಾರೆ. ಜನರ ಸೇರುವಿಕೆ ಕಂಡ ಅಂಬೇಡ್ಕರ್ ಅವರೊಂದಿಗೆ ಸುಮಾರು 45 ನಿಮಿಷ ಕಾಲ ಕಳೆದ್ದಿದ್ದಾರೆ. – ರಾಣಪ್ಪ ಡಿ ಪಾಳಾ, ಮಾಹಿತಿ ಸಂಗ್ರಹ
ತಹಶೀಲ್ದಾರ ಮತ್ತು ಜಿಲ್ಲಾಧಿಕಾರಿಯ ರವರಿಂದ ಅನುಮತಿ ಕೋಡಿಸಿದರು. ಬಾಬಾಸಾಹೇಬ್ ಅಂಬೇಡ್ಕರ ರವರ ಮರಳಿ ಹೈದರಬಾದ್ ಕಡೆಗೆ ತಮ್ಮ ಪ್ರಯಾಣ ಮಾಡಿದರು, ಆ ಎರಡು ವರ್ಷದ ಮೇಲೆ ಬಾಬಾಸಾಹೇಬ್ ಅಂಬೇಡ್ಕರ ರವರ ಮತ್ತೆ 1952 ಏಪ್ರಿಲ್ 28 ರಂದು ವಾಡಿ ಬಂದಾಗ ವಾಡಿ ಜನರೋಂದಿಗೆ ಪ್ರೀತಿಯಿಂದ ಈ ಪೋಟೋವನ್ನು ತೆಗೆದುಕೊಂಡರು.
ಬಾಬಾಸಾಹೇಬ್ ಅಂಬೇಡ್ಕರ ಬಂದು ಕೂತ ಜಾಗದಲ್ಲಿಯೇ ಬಾಬಾಸಾಹೇಬ್ ಅಂಬೇಡ್ಕರ ರವರು ಮೂರ್ತಿಯನ್ನು ಸ್ಥಾಪನೆ ಮಾಡಲಾಯಿತು . ಪ್ರತಿವರ್ಷದಂತೆ ಇದೀಗೂ ಕೂಡ ಅದೆ ದಿನದಿಂದೆ ವಾಡಿಯಲ್ಲಿ ಏಪ್ರಿಲ್ 28 ರಂದು ಅಂಬೇಡ್ಕರ ಜಯಂತಿಯನ್ನು ಆಚರಣೆಯನ್ನು ಚಾಲನೆಯಲ್ಲಿದೆ ಎಂದು ಹೇಳಬಹುದು.