ಬಿಸಿ ಬಿಸಿ ಸುದ್ದಿ

ಪತ್ರಕರ್ತ ವಿಜಯಕುಮಾರ ಜಿಡಗಿಗೆ ಕಾಯಕ ರತ್ನ ಪ್ರಶಸ್ತಿ; ಬಸವರಾಜ ತೋಟದ್

ಕಲಬುರಗಿ: ನಗರದ ಪ್ರತಿಷ್ಟಿತ ಸಂಸ್ಥೆಯಾದ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆ ಕಲಬುರಗಿ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಕಾಯಕ ರತ್ನ ಪ್ರಶಸ್ತಿ ಸಾಮಾಜಿಕ ಹೋರಾಟಗಾರ ಹಾಗು ಯುವ ಪತ್ರಕರ್ತರಾದ ವಿಜಯಕುಮಾರ ಜಿಡಗಿ ರವರಿಗೆ ಕೊಡಲಾಗುತ್ತಿದ್ದು, ನಿಜಕ್ಕೂ ಹೆಮ್ಮೆಯ ಸಂಗತಿ.

ಹೋರಾಟಕ್ಕೆ ಹೆಸರು ವಾಸಿಯಾದ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಜನಸಿದ ವಿಜಯಕುಮಾರ ಅವರು ಚಿಕ್ಕ ವಯಸ್ಸಿನಿಂದಲೂ ಹೋರಾಟದ ಕಿಚ್ಚನ್ನು ಬೆಳೆಸಿಕೊಂಡಿದವರಾಗಿದ್ದಾರೆ.‌ ಬಿ.ಎಸ್.ಸಿ ಪದವಿ ವಿದ್ಯಾಭ್ಯಾಸದ ದಿನಗಳಲ್ಲೆ ಗ್ರಾಮದ ಯುವಕರನ್ನು ಸಂಘಟಿಸಿ ಉಪನ್ಯಾಸ ಮಾಲಿಕೆ, ವಿಚಾರ ಸಂಕಿರಣಗಳು, ಅಧ್ಯಾನ ಶಿಬಿರಗಳನ್ನು ಮಾಡಿ ಜಿಲ್ಲೆಯಲ್ಲಿನ ವಿಶ್ವವಿದ್ಯಾಲಯದ ಪ್ರೋಪೆಸರಗಳು, ಪ್ರಾದ್ಯಾಪಕರು, ಹೋರಾಟಗಾರರು ಹಾಗೂ ಸಾಮಾಜಿಕ ಚಿಂತಕರನ್ನು ಕರೆದುಕೊಂಡು ಬಂದು ಗ್ರಾಮದ ಯುವಕರಿಗೆ ಮಹಾಪುರುಷರ ವಿಚಾರಗಳನ್ನು ತಿಳಿಸುವಂತ ಕಾರ್ಯಗಳನ್ನು ಮಾಡಿದ್ದಾರೆ.

ಶೋಷಿತ ಸಮುದಾಯಗಳ ಮೇಲೆ ಅನ್ಯಾಯ, ಅತ್ಯಾಚಾರ ಘಟನೆಗಳಾದಾಗ ಹೋರಾಟಗಳನ್ನು ಮಾಡಿದ್ದಾರೆ. ಜಿಲ್ಲೆಯ ವಿವಿಧ ಸಮುದಾಯದ ಪ್ರಮುಖರನ್ನು ಮಹಾಪುರುಷರ ವಿಚಾರ ವೇದಿಕೆಯಡೆ ಸೇರಿಸಿ ಕಲಬುರಗಿ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸದ್ದಿಲ್ಲದೆ ಎಲೆ ಮರೆಕಾಯಿಯಂತೆ ದುಡಿಯುತ್ತಿದ್ದಾರೆ. ಅದರಂತೆ ಪತ್ರಿಕೋದ್ಯಮ ಪದವಿ ಪಡೆದಿದ್ದು, ಕಲಬುರಗಿ ಪ್ರಭ ಪತ್ರಿಕೆಯ ಸಂಪಾದಕರಾಗಿ ಒಂದು ದಶಕಗಳ ಕಾಲದಿಂದ ಸೇವೆ ಸಲ್ಲಿಸುತ್ತಿದ್ದು ಸಮಾಜದಲ್ಲಿನ ಮೌಡ್ಯಚಾರಣೆ, ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ವರದಿಗಳನ್ನು ಮಾಡಿ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೆ ಅವರು ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯ, ಶೈಕ್ಷಣಿಕ ವಿಷಯದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ವಿವಿಧ ಗ್ರಾಮಗಳಲ್ಲಿ ಉಚಿತ ಆರೋಗ್ಯ ಶಿಬಿರಗಳು ಸೇರಿದಂತೆ ನಾನಾ ಸಾಮಾಜಿಕ ಕಾರ್ಯಗಳನ್ನು ಕಲಬುರಗಿ ಪ್ರಭ ಪತ್ರಿಕೆಯ ಮೂಲಕ ಮಾಡಿ ನೊಂದವರ ಧ್ವನಿಗೆ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಸಾಮಾಜಿಕ ಕಳವಳಿವುಳ್ಳ ಕಲಬುರಗಿ ಪ್ರಭ ಪತ್ರಿಕೆಯ ಸಂಪಾದಕ ವಿಜಯಕುಮಾರ ಜಿಡಗಿಗೆ ಕಾಯಕರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿರುವದು ಸಂಸ್ಥೆಯ ಕಿರ್ತಿ ಹೆಚ್ಚುಸುವಂತೆ ಮಾಡಿದೆ.

ಸೋಮವಾರ ಕಲಬುರಗಿಯ ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುವದು ಎಂದು ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆ ಮುಖಂಡರಾದ ಬಸವರಾಜ ತೋಟದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

emedialine

Recent Posts

ಶಿವಣ್ಣನ `ಭೈರತಿ ರಣಗಲ್’ ಸಿನಿಮಾದಲ್ಲಿ ರೆಡ್ಡಿ ನಟನೆ

ಕಲಬುರಗಿ: ನಾಟ್ಯಸಾರ್ವಭೌಮ ಡಾ.ಶಿವರಾಜಕುಮಾರ ಅವರ ಅಭಿನಯದ ಅದ್ದೂರಿ ಆ್ಯಕ್ಷನ್, ಥ್ರಿಲ್ಲರ್ ಇರುವ `ಭೈರತಿ ರಣಗಲ್’ ಸಿನಿಮಾದಲ್ಲಿ ಲೇಖಕ, ಪತ್ರಕರ್ತ, ರಂಗ…

32 mins ago

ಮಾರುತಿ ಅರೇನಾ ಕಂಪನಿಯ ದಿ ಡಾಸ್ಲಿಂಗ್ ನ್ಯೂ ಡಿಸೈರ್ ಕಾರ್ ಮಾರುಕಟ್ಟೆಗೆ ಬಿಡುಗಡೆ

ಕಲಬುರಗಿ ನಗರದ ಗಂಜ್ ಪ್ರದೇಶದಲ್ಲಿರುವ ಲಾಹೋಟಿ ಮೋಟಾರ್ಸ್ ಶೋರೂಂನಲ್ಲಿ ಮಾರುತಿ ಅರೇನಾ ಕಂಪನಿಯ ದಿ ಡಾಸ್ಲಿಂಗ್ ನ್ಯೂ ಡಿಸೈರ್ ಕಾರ್…

15 hours ago

ಜೈ ಕನ್ನಡಿಗರ ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಕಲಬುರಗಿ: ನಗರದ ಜೀಮ್ಸ್ ಆಸ್ಪತ್ರೆಯಲ್ಲಿರುವ ಇಂದಿರಾ ಕ್ಯಾಂಟಿನ್‍ನಲ್ಲಿ ಕಳಪೆ ಆಹಾರ ವಿತರಣೆ ಮಾಡುತ್ತಿರುವುದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಜೈ ಕನ್ನಡಿಗರ ಸೇನೆಯಿಂದ…

15 hours ago

ಶರಣರ ಕೃಪೆಗೆ ಪಾತ್ರರಾಗಿಯೆಂದು ಮನವಿ: ನಾಗನಹಳ್ಳಿ, ಪಾಟೀಲ್

ಕಲಬುರಗಿ: ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾ ಸಮಿತಿವತಿಯಿಂದ ನವೆಂಬರ್ 14ರಂದು 8ನೇ ಪೀಠಾಧಿಪತಿಗಳು ಪೂಜ್ಯ ಡಾ. ಶ್ರೀ ಶರಣಬಸಪ್ಪ…

15 hours ago

ವಿಜಯನಗರ ಜಿಲ್ಲೆ ಅಭಿವೃದ್ದಿಗೆ ಕೆಕೆಆರ್ ಡಿಬಿಯಿಂದ 348 ಕೋಟಿ ರೂ ಅನುದಾನ: ಡಾ.ಅಜಯ್ ಸಿಂಗ್‌

ವಿಜಯನಗರ (ಹೊಸಪೇಟೆ):ಪ್ರಸಕ್ತ ವರ್ಷದಲ್ಲಿ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಕೆಆರ್ ಡಿಬಿಯಿಂದ ರೂ. 348 ಕೋಟಿ ನೀಡಲಾಗಿದೆ ಎಂದು ಕಲ್ಯಾಣ…

15 hours ago

ಮೌನ ಶಾಂತಿ ಸಮೃದ್ಧಿಯ ಸಂಕೇತ; ಗಿರೆಗೋಳ

ಕಲಬುರಗಿ; ಮೌನವಾಗಿರುವವರೆಲ್ಲ ದಡ್ಡರಲ್ಲ, ತುಂಬಾ ಮಾತನಾಡುವವರೆಲ್ಲ ಬುದ್ಧಿವಂತರಲ್ಲ, ಮಾತಿಗೆ ಒಂದರ್ಥವಿದ್ದರೆ, ಮೌನಕ್ಕೆ ಸಾವಿರ ಅರ್ಥವಿದೆ, ಅದರಂತೆ ಬಬಲಾದ ಗುರುಪಾದಲಿಂಗ ಪೂಜ್ಯರು…

15 hours ago