ಕಲಬುರಗಿ: ನಗರದ ಜೆಸ್ಟ್ ಕ್ಲಬ್ ನಲ್ಲಿ ಡಿಸೆಂಬರ್ 31ರಂದು ಸಂಜೆ 6.30ಕ್ಕೆ ಹೊಸ ವರ್ಷದ ಈವೆಂಟ್ ಫ್ಯಾಷನ್ ಶೋ ಮತ್ತು ನೃತ್ಯ ಪ್ರತಿಭಾ ಪ್ರದರ್ಶನ ಆಯೋಜನೆ ಮಾಡಲಾಗಿದೆ ಎಂದು ಆಯೋಜಕರಾದ ಪವಿತ್ರ ಶೆಟ್ಟಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನವೆಂಬರ್ 17ರಂದು ಜೆಸ್ಟ್ ಕ್ಲಬ್ ಓ ಸಾಕಿ ಡಿಸ್ಕೊದಲ್ಲಿ ಸಂಜೆ 5 ಗಂಟೆಯಿಂದ ಆಡಿಶನ್ ನಡೆಯಲಿದ್ದು, ಮುಂಬೈ ಆಂಕರ್ ನಿತಿಶ್ ಕಾಲಿಯಾ ಮತ್ತು ಪುಣೆಯ ಡಿಜೆ ಅಭಿಷೇಕ ಆಗಮಿಸಲಿದ್ದು, ಆಡಿಷನ್ ನಲ್ಲಿ ಆಯ್ಕೆಯಾದವರು ಡಿಸೆಂಬರ್ 31ರಂದು ಫೈನಲ್ ಪ್ರವೇಶಿಸುತ್ತಾರೆ. ಅಲ್ಲದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಫ್ಯಾಶನ್ ಶೋ ಮಾಡೆಲ್ ವೃತ್ತಿಪರ ಸ್ಪೆಷೆಲಿಸ್ಟ್ ಗಳಿಂದ ವಿಶೇಷ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಡ್ಯಾನ್ಸ್ ಟ್ಯಾಲೆಂಟ್ ಶೋನಲ್ಲಿ ಭಾಗವಹಿಸುವವರು ಗುಂಪು ಪ್ರದರ್ಶನಕ್ಕಾಗಿ ನೃತ್ಯ ಸಂಯೋಜಕರಿಂದ ಉಚಿತ ತರಬೇತಿ ನೀಡಲಾಗುವುದು. ಅಲ್ಲದೆ ವಿಜೇತ ಅಭ್ಯಥಿಗಳಿಗೆ ನಗದು ಬಹುಮಾನ ಮತ್ತು ಭವಿಷ್ಯ ಅವಕಾಶಗಳಿಗೆ ಅರ್ಹರಾಗಿರುತ್ತಾರೆ. ಎಂದು ಪವಿತ್ರ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪಲ್ಲವಿ, ಸಾಯಿಪ್ರಸಾದ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…