ಶಹಾಬಾದ: ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮ ಪಂಚಾಯತಿ ವಾರ್ಡ. 5ರ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಶುಕ್ರವಾರ ಶೃತಿ ಶ್ರೀಕಾಂತ ಕಟ್ಟಿಮನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಏವiನಾಥ ರಾಠೋಡ ಹಾಗೂ ಸಹಾಯಕ ಚುನಾವಣಾಧಿಕಾರಿ ನಿಂಗಪ್ಪ ಕೆಂಭಾವಿ ತಿಳಿಸಿದ್ದಾರೆ.
ತೊನಸನಹಳ್ಳಿ(ಎಸ್) ಗ್ರಾಪಂಯ ವಾರ್ಡ ನಂ. 5ರ ಸದಸ್ಯರಾಗಿದ್ದ ಸಂತೋಷ ಅವರ ಮರಣದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಿಗದಿಯಾಗಿತ್ತು. ಸಾಮನ್ಯ ವರ್ಗಕ್ಕೆ ಮೀಸಲಾದ ಸ್ಥಾನಕ್ಕೆ ಶೃತಿ ಶ್ರೀಕಾಂತ ಕಟ್ಟಿಮನಿ ಹಾಗೂ ಮಲ್ಲಿಕಾರ್ಜುನ ಕಟ್ಟಿಮನಿ ನಾಮಪತ್ರ ಸಲ್ಲಿಸಿದ್ದರು. ನಂತರ ನಾಮಪತ್ರ ಪರಿಶೀಲನೆ ಕೈಗೊಂಡಾಗ ಮಲ್ಲಿಕಾರ್ಜುನ ಕಟ್ಟಿಮನಿ ಅವರ ನಾಮಪತ್ರ ರದ್ದುಗೊಂಡಿದ್ದರಿಂದ ಶೃತಿ ಕಟ್ಟಿಮನಿ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಅವಿರೋಧವಾಗಿ ಆಯ್ಕೆಯಾದ ಶೃತಿ ಕಟ್ಟಿಮನಿ ಅವರಿಗೆ ಚುನಾವಣಾ ಪ್ರಮಾಣ ಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಫಯಾಜ್, ಸಿದ್ಧಾರ್ಥ ಮಲ್ಲಿಕಾರ್ಜುನ ತಳವಾರ, ವಿಜಯಕುಮಾರೆ ಹಳ್ಳಿ,ಶಂಕರ ಅಳ್ಳೊಳ್ಳಿ, ಮಾಣಿಕ್‍ಗೌಡ, ಕೃಷ್ಣಪ್ಪ ಕರಣಿಕ್, ವೀರಯ್ಯಸ್ವಾಮಿ ತರನಳ್ಳಿ, ಹರಿಶ್ಚಂದ್ರ ಕೋಬಾಳಕರ್, ಶರಣಪ್ಪ ದೊಡ್ಡಮನಿ, ಮೈನೋದ್ದಿನ್ ಕರದಳ್ಳಿ, ಮಹಾದೇವ ತರನಳ್ಳಿ,ನೂರ್ ಅಹ್ಮದ್, ಹೈಯಾಳಪ್ಪ ಹಿರೇನೂರ ಇತರರು ಇದ್ದರು.
ಆನೇಕಲ್: ಮಂಡ್ಯ ಟೈಮ್ಸ್ ಪತ್ರಿಕೆ ಸಂಪಾದಕರಾದ ಎಸ್. ಎಂ ಕುಮಾರಸ್ವಾಮಿ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ರಾಜ್ಯ ಬೆಂಗಳೂರು…
ಕಲಬುರಗಿ: ಪ್ರವಾಸದಲ್ಲಿರುವ ಕರ್ನಾಟಕ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ಅವರು ಶುಕ್ರವಾರ ದಿನವಿಡೀ ಸಾರ್ವಜನಿಕರ ಅಹವಾಲು ಸ್ಚೀಕರಿಸಿದದ ನಂತರ ರಾತ್ರಿ…
ಕಲಬುರಗಿ: ಕಳೆದ 2023-24ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯ ಆಧಾರದ ಮೇಲೆ ಪ್ರಸಕ್ತ 2024-25ನೇ…
ಕಲಬುರಗಿ: ಸಂತ ಶ್ರೇಷ್ಠ ಕನಕದಾಸರ 537ನೇ ಜಯಂತಿಯನ್ನು ನವೆಂಬರ್ 18ರಂದು ಕಲಬುರಗಿಯಲ್ಲಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಪ್ರದೇಶ…
ಕಲಬುರಗಿ: ಇಲ್ಲಿನ ಎಸ್ ಆರ್ ಎನ್ ಮೆಹೆತಾ ಶಾಲೆಯ ವಿದ್ಯಾರ್ಥಿಗಳು ನೂತನ ಆವಿಷ್ಕಾರವೊಂದನ್ನು ಮಾಡುವ ಮೂಲಕ ಗೋವಾದಲ್ಲಿ ನಡೆದ ವಾರ್ಷಿಕ…
ಶಹಾಬಾದ: ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಿಸೆಂಬರ ತಿಂಗಳಲ್ಲಿ ಆಯೋಜಿಸಲು ಉದ್ದೇಶಿಸಿರುವ ಶಹಾಬಾದ ತಾಲೂಕ ಪ್ರಥಮ ಕನ್ನಡ ಸಾಹಿತ್ಯ…