ಶಹಾಬಾದ: ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಿಸೆಂಬರ ತಿಂಗಳಲ್ಲಿ ಆಯೋಜಿಸಲು ಉದ್ದೇಶಿಸಿರುವ ಶಹಾಬಾದ ತಾಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರನ್ನು ಬೆಂಗಳೂರಿನ ಸಚಿವರ ಕಚೇರಿಯಲ್ಲಿ ಕಸಾಪ ಮುಖಂಡರು ಬೇಟಿ ನೀಡಿ ಸತ್ಕರಿಸಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ಮರೆಪ್ಪ ಹಳ್ಳಿ ಹಾಗೂ ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಿಸೆಂಬರ ತಿಂಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.ಈಗಾಗಲೇ ಸರ್ವಾಧ್ಯಕ್ಷರಾಗಿ ಮಕ್ಕಳ ಸಾಹಿತಿ ಎಚ್.ಬಿ.ತೀರ್ಥೆ ಅವರನ್ನು ಕಸಾಪ ಸಮ್ಮೇಳನ ಸಮಿತಿ ಸದಸ್ಯರೆಲ್ಲರೂ ಒಮ್ಮತದ ನಿರ್ಧಾರದಿಂದ ಆಯ್ಕೆ ಮಾಡಲಾಗಿದೆ ತಿಳಿಸಿದರು.
ಆದ್ದರಿಂದ ತಾವು ಬಿಡುವು ಮಾಡಿಕೊಂಡು ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಸ್ಥಾನವನ್ನು ಅಲಂಕರಿಸಬೇಕೆಂದು ಮನವಿ ಮಾಡಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಡಿಸೆಂಬರ್ 2,3,4 ದಿನಾಂಕದಂದು ಸಮ್ಮೇಳನ ನಿಗದಿಪಡಿಸಿದರೇ ಸಮ್ಮೇಳನದಲ್ಲಿ ನಾನು ಉಪಸ್ಥಿತರಿರುತ್ತೆನೆ ಎಂದು ತಿಳಿಸಿದರು.
ಅಣವೀರ ಇಂಗಿನಶೆಟ್ಟಿ, ಡಾ.ರಶೀದ್ ಮರ್ಚಂಟ್, ಮೃತ್ಯುಂಜಯ ಸ್ವಾಮಿ ಹಿರೇಮಠ, ಮಾಣಿಕ್ ಗೌಡ, ಶರಣಗೌಡ ಪಾಟೀಲ ಗೋಳಾ(ಕೆ), ಪ್ರಶಾಂತ ಮರಗೋಳ,ಸಾಹೇಬಗೌಡ ಬೋಗುಂಡಿ, ವಿಶ್ವರಾಧ್ಯ ಬೀರಾಳ, ಭೀಮುಗೌಡ ಖೇಣಿ, ಪೀರಪಾಶಾ, ದೇವೆಂದ್ರ ಕಾರೊಳ್ಳಿ,ಹಾಷಮ್ ಖಾನ್, ಶರಣಬಸಪ್ಪ ಧನ್ನಾ, ರುದ್ರಗೌಡ ಪಾಟೀಲ, ಮುಜಾಹಿದ್ ಹುಸೇನ್, ಅಜೀಮ ಸೇಠ,ಮಹ್ಮದ್ ಜಾಕೀರ್ ಇತರರು ಇದ್ದರು.
ಆನೇಕಲ್: ಮಂಡ್ಯ ಟೈಮ್ಸ್ ಪತ್ರಿಕೆ ಸಂಪಾದಕರಾದ ಎಸ್. ಎಂ ಕುಮಾರಸ್ವಾಮಿ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ರಾಜ್ಯ ಬೆಂಗಳೂರು…
ಕಲಬುರಗಿ: ಪ್ರವಾಸದಲ್ಲಿರುವ ಕರ್ನಾಟಕ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ಅವರು ಶುಕ್ರವಾರ ದಿನವಿಡೀ ಸಾರ್ವಜನಿಕರ ಅಹವಾಲು ಸ್ಚೀಕರಿಸಿದದ ನಂತರ ರಾತ್ರಿ…
ಕಲಬುರಗಿ: ಕಳೆದ 2023-24ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯ ಆಧಾರದ ಮೇಲೆ ಪ್ರಸಕ್ತ 2024-25ನೇ…
ಕಲಬುರಗಿ: ಸಂತ ಶ್ರೇಷ್ಠ ಕನಕದಾಸರ 537ನೇ ಜಯಂತಿಯನ್ನು ನವೆಂಬರ್ 18ರಂದು ಕಲಬುರಗಿಯಲ್ಲಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಪ್ರದೇಶ…
ಕಲಬುರಗಿ: ಇಲ್ಲಿನ ಎಸ್ ಆರ್ ಎನ್ ಮೆಹೆತಾ ಶಾಲೆಯ ವಿದ್ಯಾರ್ಥಿಗಳು ನೂತನ ಆವಿಷ್ಕಾರವೊಂದನ್ನು ಮಾಡುವ ಮೂಲಕ ಗೋವಾದಲ್ಲಿ ನಡೆದ ವಾರ್ಷಿಕ…
ಶಹಾಬಾದ: ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮ ಪಂಚಾಯತಿ ವಾರ್ಡ. 5ರ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಶುಕ್ರವಾರ ಶೃತಿ ಶ್ರೀಕಾಂತ ಕಟ್ಟಿಮನಿ…