ಬಿಸಿ ಬಿಸಿ ಸುದ್ದಿ

ವಾಡಿ: ಬಿಜೆಪಿ ಕಛೇರಿಯಲ್ಲಿ 75 ನೇ ಸಂವಿಧಾನ ಸಮರ್ಪಣಾ ದಿನಾಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ತಾಲ್ಲೂಕು ಎಸ್‌ ಸಿ ಮೂರ್ಚಾ ಅಧ್ಯಕ್ಷ ರಾಜು ಮುಕ್ಕಣ್ಣ ಮಾತನಾಡಿ ಭಾರತವು ಆಗಸ್ಟ್ 15,1947 ರಂದು ತನ್ನ ಸ್ವಾತಂತ್ರ್ಯವನ್ನು ಪಡೆದರೂ, 1949 ರವರೆಗೆ ಅದು ತನ್ನದೇ ಆದ ಶಾಶ್ವತ ಸಂವಿಧಾನವನ್ನು ಹೊಂದಿರಲಿಲ್ಲ,ನಂತರ ಕ್ರಾಂತಿಕಾರಿ ಬಾಬಾ ಸಾಹೇಬ ಅಂಬೇಡ್ಕರ್ ಮಂಡಿಸಿದ ಸಂವಿಧಾನದ ಕರಡನ್ನು ನವೆಂಬರ್ 26, 1949 ರಂದು ಅಂಗೀಕರಿಸಲಾಯಿತು. ಅದು ಜನವರಿ 26, 1950 ರಂದು ಜಾರಿಗೆ ಬಂದಿತು. ಭಾರತದ ಇತಿಹಾಸದಲ್ಲಿ ಹೊಸ ಯುಗ. ವಾಸ್ತವವಾಗಿ ಅದು ಭಾರತದ ಸಂವಿಧಾನ ಜಾರಿಗೆ ಬಂದ ದಿನವಾಯಿತು.

ಭಾರತದ ಪ್ರಖ್ಯಾತ ವಕೀಲರಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಆಗಸ್ಟ್ 1947 ರಲ್ಲಿ ಭಾರತದ ಸಂವಿಧಾನವನ್ನು ರೂಪಿಸಲು ಸಂವಿಧಾನ ಸಭೆಯು ರಚಿಸಿದ ಕರಡು ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ಎಲ್ಲಾ ಜನರ ಹಕ್ಕುಗಳನ್ನು ಸಮಾನವಾಗಿ ಹಂಚಿಕೊಳ್ಳಲು ದೊಡ್ಡ ಪರ್ವತವನ್ನು ಕೆತ್ತಿಸುವುದು ಸರಳವಾದ ಕೆಲಸವಾಗಿದಿದ್ದಲ್ಲ. ಅವರ ಕ್ರಾಂತಿಕಾರಿ ವಿಚಾರಗಳು ಮತ್ತು ಚಿಂತನೆಗಳಿಂದ ಭಾರತೀಯ ಸಂವಿಧಾನವು ಹೆಚ್ಚು ಪ್ರಭಾವಿತವಾಗಿದೆ ಎಂದರು.

ಸಂವಿಧಾನವನ್ನು ಮತ್ತು ಡಾ ಬಿ ಆರ್ ಅಂಬೇಡ್ಕರ್ ಅವರನ್ನು ಅವಮಾನಿಸುವುದು ಕಾಂಗ್ರೆಸ್‌ನ ಜಾಯಮಾನವಾಗಿದೆ,ಅದಕ್ಕೆ ಉದಾಹರಣೆ ನಮ್ಮ ವಾಡಿ ಕಾಂಗ್ರೆಸ್ ಕಛೇರಿಯಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಆಚರಿಸದೆ ಇರುವುದೇ ಸಾಕ್ಷಿ.
ಇಂದು ಇಡೀ ದೇಶದಲ್ಲಿ ಸಂವಿಧಾನ ಅಂಗೀಕಾರವಾದ ಪವಿತ್ರ ದಿನವಾದರೂ ಇವರಿಗೆ ಗೌರವ ಕೊಡುವ ಪರಿಜ್ಞಾನ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನವರಿಗೆ ಸಂವಿಧಾನ ಜೇಬಿನಲ್ಲಿ ಬೇಕು ಆದರೆ ಆ ಒಂದು ಸಂವಿಧಾನ ದಿಂದಲೇ ನಮ್ಮ ಬದುಕು ನಾವು ಅದಕ್ಕೆ ಬದ್ದರಾಗಿ ಬದುಕಬೇಕೆಂಬ ಅಂತ ಅರಿವು ಅವರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಪಕ್ಷ ಮತ್ತು ನಾವು ಸಂವಿಧಾನವನ್ನು ಮತ್ತು ಡಾ ಬಿ ಆರ್ ಅಂಬೇಡ್ಕರ್ ಅವರನ್ನು ಆರಾಧಿಸುವವರು ಮತ್ತು ಪಾಲಿಸುವವರು ಎಂದು ಹೇಳಿದರು.

ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿದರು.ಈ ಸಂಧರ್ಬದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸರಾಜ ಪಂಚಾಳ,ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ರಾಮಚಂದ್ರ ರಡ್ಡಿ,ಗಿರಿಮಲ್ಲಪ್ಪ ಕಟ್ಟಿಮನಿ,ಸಿದ್ದಣ್ಣ ಕಲ್ಲಶೆಟ್ಟಿ,ಶಿವಶಂಕರ ಕಾಶೆಟ್ಟಿ,ಕಿಶನ ಜಾಧವ್, ಅಂಬದಾಸ ಜಾಧವ,ರಿಚರ್ಡ್ ಮಾರೆಡ್ಡಿ,ಹರಿ ಗಲಾಂಡೆ,ಆನಂದರಾವ ಡೌವಳೆ

ಆನಂದ ಇಂಗಳಗಿ, ಮಲ್ಲಿಕಾರ್ಜುನ ಸಾತಖೇಡ,ಸತೀಶ್ ನಾಯಕ,ಪ್ರೇಮ ರಾಠೊಡ,ನಾರಯಣ ರಾಠೊಡ,ನಾಗಣ್ಣ ಕಮರವಾಡಿ ಸೇರಿದಂತೆ ಇತರರು ಇದ್ದರು.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

52 mins ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

54 mins ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

58 mins ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

1 hour ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

1 hour ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

1 hour ago