ಬಿಸಿ ಬಿಸಿ ಸುದ್ದಿ

ಪ್ರೊ. ಜಿ.ಎಸ್ ಅಮೂರ ಜನ್ಮ ದಿನಾಚರಣೆ

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಪ್ರೊ. ಜಿ.ಎಸ್ ಅಮೂರ ಜನ್ಮ ದಿನಾಚರಣೆ ಆಚರಿಸಲಾಯಿತು.

ಡಾ. ಗೋವಿಂದರಾವ್ ತಳಕೋಡ ಡಾ. ಜಿ ಎಸ್ ಅಮೂರ ಕುರಿತು ಉಪನ್ಯಾಸ ನೀಡಿ ಪ್ರೊ. ಅಮೂರ ಅವರು ಹೆಸರಾಂತ ವಿಮರ್ಶಕರು ಹಾಗೂ ಇಂಗ್ಲಿಷ್ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿರುವ ವ್ಯಕ್ತಿ ಎಂದರು. ಪ್ರೊ. ಜಿ ಎಸ್ ಅಮೂರ ಅವರನ್ನು ನೆನೆಪು ಮಾಡಿಕೊಳ್ಳುವದು ಅತ್ಯಂತ ಸೂಕ್ತ ಎಂದು ತಿಳಿಸಿದರು.‌

ಡಾ. ಅಮೂರ ಅವರ ವಿಮರ್ಶೆ ವಸ್ತು ನಿಷ್ಠ ಮತ್ತು ಕೃತಿ ನಿಷ್ಠ ಸಿದ್ಧಾಂತಕ್ಕೆ ಬದ್ಧರಾಗಿ ವಿಮರ್ಶಾ ಲೋಕಕ್ಕೆ ಮಾದರಿ ಆಗಿದ್ದಾರೆ ಎಂದು ತಿಳಿಸಿದರು.

ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೊ. ಕೆ ಎಸ್ ಕೌಜಲಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಸ್ ಎಸ್ ದೊಡಮನಿ ನಿರೂಪಿಸಿದರು. ಡಾ. ಜಿನದತ್ ಹಡಗಲಿ ವಂದಿಸಿದರು. ವೇದಿಕೆ ಮೇಲೆ ಮಹಾಂತೇಶ ನರೇಗಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಂತವೀರ ಬೆಟಗೇರಿ, ಎಸ್ ಎಮ್ ದಾನಪ್ಪಗೌಡರ, ಸೋಮಶೇಖರ್ ಇಟಗಿ, ವೆಂಕನಗೌಡ ಪಾಟೀಲ,ಎಸ್ ಎಚ್ ಪ್ರತಾಪ್, ಪ್ರಮೀಳಾ ಜಕ್ಕನ್ನವರ, ಗೀತಾ ಕುಲಕರ್ಣಿ, ಸುನಂದಾ ಯಡಾಲ್, ಸುವರ್ಣ ಸುರಕೋಡ ಮುಂತಾದವರು ಉಪಸ್ಥಿತರಿದ್ದರು.

emedialine

Recent Posts

ವಿಶ್ವ ವಿಕಲಚೇತನರ ದಿನಾಚರಣೆ: ವಿಶೇಚೇತನರಿಗೆ ಅನುಕಂಪ ಬೇಡ ಅವಕಾಶ ಕೊಡಿ: ಅಲ್ಲಮಪ್ರಭು ಪಾಟೀಲ

  ಕಲಬುರಗಿ: ಡಿ.3 ವಿಕಲಚೇತನರನ್ನು ಇತರರಂತೆ ಕಾಣಬೇಕು. ಅನುಕಂಪಕ್ಕೆ ಸೀಮಿತವಾಗಿಸದೆ ಅವರಿಗೆ ಅವಕಾಶ ನೀಡಿ ಸಬಲರನ್ನಾಗಿಸುವ ಜವಾಬ್ದಾರಿ ಸಮಾಜದ ಮೇಲಿದೆ…

17 hours ago

ಅಂಗವಿಕಲರಿಗೆ ಅನುಕಂಪ ಬೇಡ ಅವಕಾಶ ನೀಡಿ

ಕಲಬುರಗಿ: ಇಂದು ಪ್ರಗತಿ ಕಾಲೋನಿಯ ಬಸವರಾಜ್ ಮಗಲಿ ಅವರ ಮಗಳು ಕುಮಾರಿ ಸ್ವಾತಿ 20 ವರ್ಷದಿಂದ ಅಂಗವಿಕಲತೆಯಿಂದ ಬಳಲುತ್ತಿದ್ದು ಆಕೆ…

18 hours ago

ರಸ್ತೆ ಅಪಘಾತದಿಂದ ದೇಶದಲ್ಲಿ ಪ್ರತಿ ಐದು ನಿಮಿಷಕ್ಕೊಂದು ಸಾವು; ಸಿದ್ದಪ್ಪ ಕಲ್ಲೇರ ಕಳವಳ

ಕಲಬುರಗಿ: ಇಂದಿನ ಯುಗದಲ್ಲಿ ಎಲ್ಲರೂ ವಾಹನ ಹೊಂದಿದ್ದಾರೆ. ರಸ್ತೆಯಲ್ಲಿ ನಿಧಾನವಾಗಿ, ವಿವೇಕದೊಂದಿಗೆ ವಾಹನ ಚಾಲನೆ ಮಾಡಬೇಕು. ವಾಹನ ಸವಾರರ ತಪ್ಪಿನಿಂದ…

19 hours ago

ದೇಹ – ನೇತ್ರದಾನ ಮಾಡಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೆ ಡಾ.ಪೆರ್ಲ ಅಭಿನಂದನೆ

ಕಲಬುರಗಿ: ಸೇವಾನಿವೃತ್ತಿಯ ದಿನ ತನ್ನ ದೇಹ ಮತ್ತು ನೇತ್ರವನ್ನು ದಾನ ಮಾಡಿದ ಕೆ ಎಸ್ ಆರ್ ಪಿ ಕಲಬುರಗಿ ಘಟಕದ…

21 hours ago

ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹರಿಸಲು ಶಾಸಕರಿಗೆ ಮನವಿ

ಕಲಬುರಗಿ; ಇಂದು ಗ್ರಾಮಿಣ ಶಾಸಕರಾದ ಬಸವರಾಜ ಮತ್ತಿಮೂಡ್ ರವರಿಗೆ ಬಗರ್ ಹುಕುಂ ರೈತರ ಸಮಸ್ಯೆಗಳ ಕುರಿತು ಮನವಿಪತ್ರ ವನ್ನು ಸಲ್ಲಿಸಲಾಯಿತು.…

22 hours ago

ಕನ್ನಡ ಕಂಪು ಪಸರಿಸಲು ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಶ್ರಮಿಸಲಿ: ಪ್ರಕಾಶ್‌ಮೂರ್ತಿ

ಆನೇಕಲ್, ಡಿ.2: ಗಡಿ ಭಾಗಗಳಲ್ಲಿ ಕನ್ನಡ ಕಂಪನ್ನು ಪಸರಿಸುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಒಟ್ಟಾಗಿ ಶ್ರಮಿಸಬೇಕಾದ ಅಗತ್ಯವಿದೆ ಎಂದು ಕನ್ನಡ…

2 days ago