ಬಿಸಿ ಬಿಸಿ ಸುದ್ದಿ

ರಸ್ತೆ ಅಪಘಾತದಿಂದ ದೇಶದಲ್ಲಿ ಪ್ರತಿ ಐದು ನಿಮಿಷಕ್ಕೊಂದು ಸಾವು; ಸಿದ್ದಪ್ಪ ಕಲ್ಲೇರ ಕಳವಳ

ಕಲಬುರಗಿ: ಇಂದಿನ ಯುಗದಲ್ಲಿ ಎಲ್ಲರೂ ವಾಹನ ಹೊಂದಿದ್ದಾರೆ. ರಸ್ತೆಯಲ್ಲಿ ನಿಧಾನವಾಗಿ, ವಿವೇಕದೊಂದಿಗೆ ವಾಹನ ಚಾಲನೆ ಮಾಡಬೇಕು. ವಾಹನ ಸವಾರರ ತಪ್ಪಿನಿಂದ ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಪ್ರತಿ ಐದು ನಿಮಿಷಕ್ಕೊಂದು ಸಾವು ಸಂಭವಿಸುತ್ತಿದೆ ಎಂದು ಕಲಬುರಗಿ ಪ್ರಾದೇಶಿಕ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಸಿದ್ದಪ್ಪ ಕಲ್ಲೇರ ಕಳವಳ ವ್ಯಕ್ತಪಡಿಸಿದರು.

ಶರಣಬಸವ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ನಿಕಾಯ, ಲಿಂಡೆ ಅನಿಲ ಮತ್ತು ಇಂಜಿನಿಯರಿಂಗ್ ಕಂಪನಿ ಹಾಗೂ ಲಾಜಿಸ್ಟಿಕ್ಸ್ ಸ್ಕಿಲ್ ಕೌನ್ಸಿಲ್ ಸಹಯೋಗದೊಂದಿಗೆ ವಿವಿಯ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಮಂಗಳವಾರದಂದು “ವಾಹನ ಸವಾರರಿಗೆ ಜಾಗೃತಿ ಕಾರ್ಯಕ್ರಮ” ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾಹನ ಚಾಲನೆ ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ. 2000ನೇ ಇಸವಿಯಿಂದ ಇಲ್ಲಿಯವರೆಗೆ ಮೊಬೈಲ್ ಮತ್ತು ಆಟೊಮೊಬೈಲ್ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗಿದೆ. ಇವೆರಡೂ ಎಲ್ಲರಲ್ಲಿಯೂ ಕಡ್ಡಾಯಗಿ ಸಿಗುವಂತಾಗಿದೆ. ನಮ್ಮ ತಪ್ಪಿನಿಂದ ಹಾಗೂ ಅಡ್ಡಾದಿಡ್ಡಿ ವಾಹನ ಚಲಾಯಿಸುವುದರಿಂದ ಇಂದು ರಸ್ತೆ ಅಪಘಾತಗಳ ಸಂಖ್ಯೆ ಗಗನಕ್ಕೇರುತ್ತಿದೆ. ತಾವೆಲ್ಲರೂ “ವೇಗದ ಚಾಲನೆ ರೋಮಾಂಚನಗೊಳಿಸುತ್ತದೆ ಆದರೆ ಅದು ಜೀವ ತೆಗೆಯುತ್ತದೆ” ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ವಾಹನ ಸವಾರರು ಯಾವಾಗಲೂ ತಮ್ಮ ಜೊತೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು. ರಸ್ತೆ ಮೇಲೆ ವಾಹನ ಚಲಾಯಿಸುವಾಗ ವ್ಯವಸ್ಥಿತವಾಗಿ ನಿಯಮದಂತೆ ಚಾಲನೆ ಮಾಡಬೇಕು. ವಾಹನ ಚಾಲನೆ ಪ್ರದರ್ಶನಕಲ್ಲ ಅದು ನಮ್ಮ ಅವಶ್ಯಕತೆ. ವಾಹನವು ನಮ್ಮನ್ನು ನಿಯಂತ್ರಿಸಬಾರದು ನಾವು ವಾಹನವನ್ನು ನಿಯಂತ್ರಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದ ಸಿದ್ದಪ್ಪ ಕಲ್ಲೇರ ಅವರು, ಇಂದು ರಸ್ತೆ ಅಪಘಾತದಲ್ಲಿ 16 ರಿಂದ 35 ವರ್ಷದ ವಯಸ್ಸಿನವರ ಮರಣದ ಅನುಪಾತವೇ ಹೆಚ್ಚಾಗಿದೆ. 2020ರಲ್ಲಿ ರಸ್ತೆ ಅಪಘಾತದಲ್ಲಿ 1,58,964 ಜನರು ಮರಣ ಹೊಂದಿದ್ದಾರೆ, 2023ರಲ್ಲಿ ಸುಮಾರು 3,71,000 ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವುದು ವಿಷಾದನೀಯ ಎಂದು ಅಂಕಿ ಅಂಶಗಳೊಂದಿಗೆ ತಿಳಿಸಿದರು.

ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅನಿಲಕುಮಾರ ಬಿಡವೆ ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿ, ನಿಮ್ಮ ಅಮೂಲ್ಯವಾದ ಜೀವನದ ಸುರಕ್ಷತಾ ಕ್ರಮಗಳನ್ನು ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ. ನಮ್ಮ ವಿವಿಯಲ್ಲಿ ಹತ್ತು ನಿಮಿಷ ತಡವಾಗಿ ಕಾಲೇಜಿಗೆ ಬಂದರೆ ಅದು ಅಪರಾಧವಲ್ಲ ಆದರೆ ವಿದ್ಯಾರ್ಥಿಗಳು ವೇಗವಾಗಿ ವಾಹನವನ್ನು ಚಲಾಯಿಸಬೇಡಿ. ಯುವ ಪೀಳಿಗೆಯ ಯಾವುದೇ ಒಂದು ಅಪಘಾತ ಅವರ ಕುಟುಂಬದ ಮೇಲೆ ಮಾತ್ರವಲ್ಲ ರಾಷ್ಟ್ರದ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಪ್ರಾದೇಶಿಕ ಸಾರಿಗೆ ಇಲಾಖೆಯ ಉಪ ಆಯುಕ್ತ ಆನಂದ ಪಾರ್ಥನಳ್ಳಿ, ಎಲ್.ಎಸ್.ಸಿ.ಯ ವಿನೋದ ಬಿ., ಪ್ರಶಾಂತ ಹಾಗೂ ವಿವಿಯ ಕುಲಸಚಿವ (ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ ಸೇರಿದಂತೆ ಇತರರಿದ್ದರು. ಕಾರ್ಯಕ್ರಮವನ್ನು ಮೈನಾಶ್ರೀ ಹಾಗೂ ಹರ್ಷಿತಾ ನಿರೂಪಿಸಿದರೆ, ವಿದ್ಯಾರ್ಥಿನಿ ವರ್ಷಾ ರೆಡ್ಡಿ ಸ್ವಾಗತಿಸಿದರು.

emedialine

Recent Posts

ವಿಶ್ವ ವಿಕಲಚೇತನರ ದಿನಾಚರಣೆ: ವಿಶೇಚೇತನರಿಗೆ ಅನುಕಂಪ ಬೇಡ ಅವಕಾಶ ಕೊಡಿ: ಅಲ್ಲಮಪ್ರಭು ಪಾಟೀಲ

  ಕಲಬುರಗಿ: ಡಿ.3 ವಿಕಲಚೇತನರನ್ನು ಇತರರಂತೆ ಕಾಣಬೇಕು. ಅನುಕಂಪಕ್ಕೆ ಸೀಮಿತವಾಗಿಸದೆ ಅವರಿಗೆ ಅವಕಾಶ ನೀಡಿ ಸಬಲರನ್ನಾಗಿಸುವ ಜವಾಬ್ದಾರಿ ಸಮಾಜದ ಮೇಲಿದೆ…

17 hours ago

ಅಂಗವಿಕಲರಿಗೆ ಅನುಕಂಪ ಬೇಡ ಅವಕಾಶ ನೀಡಿ

ಕಲಬುರಗಿ: ಇಂದು ಪ್ರಗತಿ ಕಾಲೋನಿಯ ಬಸವರಾಜ್ ಮಗಲಿ ಅವರ ಮಗಳು ಕುಮಾರಿ ಸ್ವಾತಿ 20 ವರ್ಷದಿಂದ ಅಂಗವಿಕಲತೆಯಿಂದ ಬಳಲುತ್ತಿದ್ದು ಆಕೆ…

18 hours ago

ದೇಹ – ನೇತ್ರದಾನ ಮಾಡಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೆ ಡಾ.ಪೆರ್ಲ ಅಭಿನಂದನೆ

ಕಲಬುರಗಿ: ಸೇವಾನಿವೃತ್ತಿಯ ದಿನ ತನ್ನ ದೇಹ ಮತ್ತು ನೇತ್ರವನ್ನು ದಾನ ಮಾಡಿದ ಕೆ ಎಸ್ ಆರ್ ಪಿ ಕಲಬುರಗಿ ಘಟಕದ…

22 hours ago

ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹರಿಸಲು ಶಾಸಕರಿಗೆ ಮನವಿ

ಕಲಬುರಗಿ; ಇಂದು ಗ್ರಾಮಿಣ ಶಾಸಕರಾದ ಬಸವರಾಜ ಮತ್ತಿಮೂಡ್ ರವರಿಗೆ ಬಗರ್ ಹುಕುಂ ರೈತರ ಸಮಸ್ಯೆಗಳ ಕುರಿತು ಮನವಿಪತ್ರ ವನ್ನು ಸಲ್ಲಿಸಲಾಯಿತು.…

22 hours ago

ಪ್ರೊ. ಜಿ.ಎಸ್ ಅಮೂರ ಜನ್ಮ ದಿನಾಚರಣೆ

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್…

2 days ago

ಕನ್ನಡ ಕಂಪು ಪಸರಿಸಲು ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಶ್ರಮಿಸಲಿ: ಪ್ರಕಾಶ್‌ಮೂರ್ತಿ

ಆನೇಕಲ್, ಡಿ.2: ಗಡಿ ಭಾಗಗಳಲ್ಲಿ ಕನ್ನಡ ಕಂಪನ್ನು ಪಸರಿಸುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಒಟ್ಟಾಗಿ ಶ್ರಮಿಸಬೇಕಾದ ಅಗತ್ಯವಿದೆ ಎಂದು ಕನ್ನಡ…

2 days ago