ಬಿಸಿ ಬಿಸಿ ಸುದ್ದಿ

ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹರಿಸಲು ಶಾಸಕರಿಗೆ ಮನವಿ

ಕಲಬುರಗಿ; ಇಂದು ಗ್ರಾಮಿಣ ಶಾಸಕರಾದ ಬಸವರಾಜ ಮತ್ತಿಮೂಡ್ ರವರಿಗೆ ಬಗರ್ ಹುಕುಂ ರೈತರ ಸಮಸ್ಯೆಗಳ ಕುರಿತು ಮನವಿಪತ್ರ ವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಚಳಿಗಾಲದ ಅಧಿವೇಶನದಲ್ಲಿ ತಮ್ಮ ಭಾಗದ ಬಗರ ಹುಕುಂ ರೈತರ ಕುರಿತು ಚರ್ಚೆ ಮಾಡಲು ಮನವಿ ಮಾಡಿಕೊಳ್ಳಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾನ್ಯ ಶಾಸಕರು ದಿನಾಂಕ 8 ನೇಯ ತಾರೀಖು ಬೆಳಿಗ್ಗೆ 8ಗಂಟೆಗೆ ಮಾನ್ಯ ಶಾಸಕರ ಮನೆಯಲ್ಲಿ ಇರುವ ಕಚೇರಿಯಲ್ಲಿ ರೈತರೊಂದಿಗೆ ತಹಶೀಲ್ದಾರರ ಸಭೆಯನ್ನು ಗೊತ್ತುಡಿಸಿದರು.

ಈ ಸಮಯದಲ್ಲಿ ಗ್ರಾಮೀಣ ಭಾಗದ ರೈತರ ಬಗರ್ ಹುಕುಂ ಸಮಸ್ಯೆಗಳ ಕುರಿತು ಚರ್ಚಿಸೋಣ ಎಂದು ಭರವಸೆ ನೀಡಿದರು. ಹಾಗೂ ಡಿಸೆಂಬರ್‌ 9 ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿಯೂ ಮಾತನಾಡುವುದಾಗಿ ತಿಳಿಸಿದರು.

ಈ ನಿಯೋಗದ ನೇತೃತ್ವವನ್ನು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಹಾಗೂ ಭೂಮಿಯ ಹಕ್ಬಕಿಗಾಗಿ ಬಗರ್‌ ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ಶ್ರೀ ಮಹೇಶ್‌ ಎಸ್.‌ ಬಿ. ಯವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಶಿವಶರಣಪ್ಪ ದೊಡ್ಮನಿ, ದಶರತ್‌ ತೆಗನೂರ, ಕಾಶಿಪತಿ, ಶರಣಪ್ಪ ತಳವಾರ್‌, ರವಿಚಂದ್ರ, ಪರಶುರಾಮ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

emedialine

Recent Posts

ವಿಶ್ವ ವಿಕಲಚೇತನರ ದಿನಾಚರಣೆ: ವಿಶೇಚೇತನರಿಗೆ ಅನುಕಂಪ ಬೇಡ ಅವಕಾಶ ಕೊಡಿ: ಅಲ್ಲಮಪ್ರಭು ಪಾಟೀಲ

  ಕಲಬುರಗಿ: ಡಿ.3 ವಿಕಲಚೇತನರನ್ನು ಇತರರಂತೆ ಕಾಣಬೇಕು. ಅನುಕಂಪಕ್ಕೆ ಸೀಮಿತವಾಗಿಸದೆ ಅವರಿಗೆ ಅವಕಾಶ ನೀಡಿ ಸಬಲರನ್ನಾಗಿಸುವ ಜವಾಬ್ದಾರಿ ಸಮಾಜದ ಮೇಲಿದೆ…

17 hours ago

ಅಂಗವಿಕಲರಿಗೆ ಅನುಕಂಪ ಬೇಡ ಅವಕಾಶ ನೀಡಿ

ಕಲಬುರಗಿ: ಇಂದು ಪ್ರಗತಿ ಕಾಲೋನಿಯ ಬಸವರಾಜ್ ಮಗಲಿ ಅವರ ಮಗಳು ಕುಮಾರಿ ಸ್ವಾತಿ 20 ವರ್ಷದಿಂದ ಅಂಗವಿಕಲತೆಯಿಂದ ಬಳಲುತ್ತಿದ್ದು ಆಕೆ…

18 hours ago

ರಸ್ತೆ ಅಪಘಾತದಿಂದ ದೇಶದಲ್ಲಿ ಪ್ರತಿ ಐದು ನಿಮಿಷಕ್ಕೊಂದು ಸಾವು; ಸಿದ್ದಪ್ಪ ಕಲ್ಲೇರ ಕಳವಳ

ಕಲಬುರಗಿ: ಇಂದಿನ ಯುಗದಲ್ಲಿ ಎಲ್ಲರೂ ವಾಹನ ಹೊಂದಿದ್ದಾರೆ. ರಸ್ತೆಯಲ್ಲಿ ನಿಧಾನವಾಗಿ, ವಿವೇಕದೊಂದಿಗೆ ವಾಹನ ಚಾಲನೆ ಮಾಡಬೇಕು. ವಾಹನ ಸವಾರರ ತಪ್ಪಿನಿಂದ…

19 hours ago

ದೇಹ – ನೇತ್ರದಾನ ಮಾಡಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೆ ಡಾ.ಪೆರ್ಲ ಅಭಿನಂದನೆ

ಕಲಬುರಗಿ: ಸೇವಾನಿವೃತ್ತಿಯ ದಿನ ತನ್ನ ದೇಹ ಮತ್ತು ನೇತ್ರವನ್ನು ದಾನ ಮಾಡಿದ ಕೆ ಎಸ್ ಆರ್ ಪಿ ಕಲಬುರಗಿ ಘಟಕದ…

21 hours ago

ಪ್ರೊ. ಜಿ.ಎಸ್ ಅಮೂರ ಜನ್ಮ ದಿನಾಚರಣೆ

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್…

2 days ago

ಕನ್ನಡ ಕಂಪು ಪಸರಿಸಲು ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಶ್ರಮಿಸಲಿ: ಪ್ರಕಾಶ್‌ಮೂರ್ತಿ

ಆನೇಕಲ್, ಡಿ.2: ಗಡಿ ಭಾಗಗಳಲ್ಲಿ ಕನ್ನಡ ಕಂಪನ್ನು ಪಸರಿಸುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಒಟ್ಟಾಗಿ ಶ್ರಮಿಸಬೇಕಾದ ಅಗತ್ಯವಿದೆ ಎಂದು ಕನ್ನಡ…

2 days ago