ಕಲಬುರಗಿ: ಹನ್ನೇರಡನೇ ಶತಮಾನದಲ್ಲಿ ಸಮಾನತೆಗಾಗಿ ಆ ಮೂಲಕ ಸಮಾಜದ ಸುಧಾರಣೆಗಾಗಿ ಹೋರಾಡಿದ ಬಸವಣ್ಣ ನವರು ಅಂಧಕಾರ, ಕಂದಾಚಾರ, ಜಾತಿ ಬೇಧ, ರಾಜಪ್ರಭುತ್ವಗಳ ಕತ್ತಲೆಯನ್ನು ಕಳೆಯಲು ವಚನಜ್ಯೋತಿಯನ್ನು ಬೆಳಗಿದ್ದಾರೆ. ಮಾನವೀಯ ಮತಿಯಿಂದ ಬೆಳಗಿದ ಜ್ಯೋತಿ ಇಂದಿಗೂ ಬಸವ ಬೆಳಕಾಗಿ ಹೊಸ ದಿಕ್ಕಿಗೆ ದೀವಿಗೆ ಹಚ್ಚಿದಂತಿದೆ ಎಂದು ಕಾರವಾರ ಜಿಲ್ಲೆಯ ಅತ್ತಿವೇರಿಯ ಪೂಜ್ಯ ಶ್ರೀ ಬಸವೇಶ್ವರಿ ಮಾತಾಜಿ ನುಡಿದರು.
ಇಲ್ಲಿನ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಅತ್ತಿವೇರಿಯ ಬಸವ ದಿವ್ಯ ಜ್ಞಾನ ಮಂದಿರದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಚಿಂತನ ಚೇತನ’ ವಿಶೇಷ ಶಿಬಿರಕ್ಕೆ ಚಾಲನೆ ನೀಡಿದ ಅವರು, ಶರಣರು ಬರೆದಿರುವ ವಚನಗಳು ಸಕಲ ಜೀವಾತ್ಮರ ಲೇಸನ್ನೇ ಬಯಸುವಂಥವುಗಳಾಗಿವೆ ಎಂದು ಮಾರ್ಮಿಕವಾಗಿ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಪ್ರಸ್ತುತ ಸಮಾಜದಲ್ಲಿ ತಾಂಡವವಾಡುತ್ತಿದ್ದ ಹೀನ ಆಚರಣೆಗಳನ್ನು ಮುಕ್ತ ಮಾಡಲು ಜಗದ ಬೆಳಕಿನಂತಿರುವ ಬುದ್ದ, ಬಸವ, ಡಾ.ಅಂಬೇಡ್ಕರ್ ಸೇರಿ ಅನೇಕ ಮಹಾತ್ಮರು-ಸಂತರು, ಶರಣರ ದಿಟ್ಟ ವಿಚಾರಗಳಿಂದ ಸಮಾಜದಲ್ಲಿನ ಕೆಲವು ಕೆಟ್ಟ ಸಂಪ್ರದಾಯಗಳು ಸುಟ್ಟು ಹೋಗಿವೆ ಎಂದ ಅವರು, ಕಾಯಕ-ಪ್ರಸಾದ ಮತ್ತು ದಾಸೋಹ ತತ್ವದ ಮೂಲಕ ವಿಶ್ವಗುರು ಬಸವಣ್ಣನವರು ಈ ಲೋಕ ಸುಸ್ಥಿರವಾಗಿ ಬದುಕುವಂತೆ ಮಾಡಿದ್ದಾರೆ ಎಂದರು.
ಪ್ರಮುಖರಾದ ಜಗದೀಶ ಮರಪಳ್ಳಿ ಚಿಮ್ಮನಚೋಡ, ರವೀಂದ್ರಕುಮಾರ ಭಂಟನಳ್ಳಿ, ಬಿ.ಎಂ.ಪಾಟೀಲ ಕಲ್ಲೂರ, ಪ್ರಭುಲಿಂಗ ಮೂಲಗೆ, ನಾಗೇಂದ್ರಪ್ಪ ಮಾಡ್ಯಾಳೆ ಸರಸಂಬಿ, ಪ್ರಭುದೇವ ಯಳವಂತಗಿ, ಪರಮೇಶ್ವರ ಶಟಕಾರ, ವಿದ್ಯಾಸಾಗರ ದೇಶಮುಖ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಹೊನ್ನಕಿರಣಗಿ, ಸವಿತಾ ಪಾಟೀಲ ಸೊಂತ, ಮೀನಾಕ್ಷಿ, ಲಕ್ಷ್ಮೀ, ಸವಿತಾ ಜಾಧವ ಸೇರಿ ಅನೇಕ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…