ಜಾಗತಿಕ ದಾರ್ಶನಿಕರ ವಿಚಾರಗಳು ಒಂದೇ ಬಗೆಯಾಗಿರುತ್ತವೆ

ಕಲಬುರಗಿ: ಲಿಂ.ಮಾತೋಶ್ರೀ ಮಹಾದೇವಿಯಮ್ಮ ಮತ್ತು ಲಿಂ.ಗುರುಪಾದಪ್ಪ ಮಾಲಿಪಾಟೀಲ ಸ್ಮರಣಾರ್ಥಅರಿವಿನ ಮನೆ ೬೧೩ನೆಯ ದತ್ತಿಕಾರ್ಯಕ್ರಮ ಹಾಗೂ ಡಾ.ಜಯಶ್ರೀ ವೀ. ದಂಡೆ ವಿಶೇಷ ಸಂಚಿಕೆಕವಿಮಾರ್ಗ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಯಿತು.

ಮುಖ್ಯ ಅತಿಥಿಗಳಾಗಿದ ಕಲಬುರಗಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು ಮತ್ತುಅಪರಜಿಲ್ಲಾ ದಂಡಾಧಿಕಾರಿಗಳು ಆದಡಾ. ಬಿ. ಶರಣಪ್ಪ ಸತ್ಯಂಪೇಟೆ ಅವರು ಪತ್ರಿಕೆ ಬಿಡುಗಡೆ ಮಾಡಿ ಮಾತನಾಡುತ್ತ, ಕವಿ ಮಾರ್ಗ ಪತ್ರಿಕೆಯನ್ನು ಮೂರು ದಶಕಗಳ ಹಿಂದೆಡಾ. ವೀರಣ್ಣದಂಡೆಯವರು ಪ್ರಾರಂಭಿಸಿ, ಅದನ್ನುಅತ್ಯುತ್ತಮ ಸಾಹಿತ್ಯಿಕ ಪತ್ರಿಕೆಯನ್ನಾಗಿ ರೂಪಿಸಿದ್ದರು.ಇಂದಿನ ಸಂಕೀರ್ಣ ಕಾಲಮಾನದಲ್ಲಿ ಪತ್ರಿಕೆ ನಡೆಸುವುದುಅದರಲ್ಲಿಯೂ ಸಾಹಿತ್ಯಿಕ ಪತ್ರಿಕೆ ನಡೆಸುವುದುತುಂಬ ಕಷ್ಟದ ಮತ್ತುಜವಾಬ್ದಾರಿಯುತ ಕೆಲಸವಾಗಿದೆ.ಅದನ್ನು ಈಗಲೂ ಡಾ.ಕಲ್ಯಾಣರಾವ ಜಿ. ಪಾಟೀಲ ಅವರು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯಎಂದರು.ಮುಂದುವರೆದು,ಜಗತ್ತಿನೆಲ್ಲೆಡೆ ನಡೆದ ಮಾನವೀಯ ಅಂತಃಕರಣಗಳ ಚಟುವಟಿಕೆಗಳಿಗೆ ೧೨ನೆಯ ಶತಮಾಮನದ ಶರಣರೇ ಮೂಲ ಪ್ರೇರಕರು.ಅವರ ವಚನಗಳಲ್ಲಿಯೇ ಕಲ್ಯಾಣದ ವೈಚಾರಿಕಕ್ರಾಂತಿಯ ಸುಳುಹುಗಳು ಸಿಗುತ್ತವೆ. ಬೇರೆಲ್ಲಿಯೂ ಹುಡುಕದೇ ವಚನಗಳನ್ನೇ ಮುಖ್ಯ ಆಕರಗಳನ್ನಾಗಿಇಟ್ಟುಕೊಂಡು ಶರಣರಚರಿತ್ರೆಯನ್ನುಕಟ್ಟುವುದುಅಗತ್ಯವಾಗಿದೆಎಂದರು.

ಬೆಳಗಾವಿ ಜಿಲ್ಲೆಯ ಸವದತ್ತಿತಾಲ್ಲೂಕಿನಯರಗಟ್ಟಿಯಸರಕಾರಿ ಮಹಾವಿದ್ಯಾಲಯದಕನ್ನಡ ಪ್ರಾಧ್ಯಾಪಕರಾದ ಪ್ರೊ.ರಾಜಶೇಖರ ಬಿರಾದಾರಅವರು ಬಸವಣ್ಣನವವರು ಮತ್ತುಜಾಗತಿಕದಾರ್ಶನಿಕರು ವಿಷಯಕುರಿತು ವಿಶೇಷ ಅನುಭಾವ ನೀಡಿದರು.ಬಸವಣ್ಣನವರ ಮತ್ತು ವಿಶ್ವದ ಮಹಾನ್‌ದಾರ್ಶನಿಕರ ವಿಚಾರಧಾರೆಗಳಲ್ಲಿ ಬಹಳಷ್ಟು ಸಾಮ್ಯತೆಇದೆಎಂದು ಹಂತಹಂತವಾಗಿತೌಲನಿಕವಾಗಿ ವಿವರಿಸಿದರು. ಮಹಾತ್ಮಗೌತಮ ಬುದ್ಧರ ವೈಚಾರಿಕತೆ; ಮಾನವೀಯತೆ, ಮಹಾವೀರರ ಅಹಿಂಸೆ; ಮಹಮ್ಮದ್ ಪೈಗಂಬರ್‌ಅವರ ಶಾಂತಿ ಮತ್ತುಕಾಯಕ ನಿಷೆ, ಸಮಾನತೆ;ಏಸೂಕ್ರಿಸ್ತರ ಸಹನೆ, ಸಹಾನುಭೂತಿ; ಸಾಕ್ರೆಟಿಸ್‌ಅವರತ್ಯಾಗ, ಪ್ಲೇಟೋ ಅವರ ಆದರ್ಶ ರಾಜ್ಯ ಕಲ್ಪನೆ, ಅರಿಸ್ಟಾಟಲ್‌ ಅವರ ವೈಚಾರಿಕೆ,  ಕಾರ್ಲಮಾರ್ಕ್ಸಅವರ ಸಮಸಮಾಜ ನಿರ್ಮಾಣ, ಶ್ರಮಗೌರವ, ನೆಲ್ಸನ್ ಮಂಡೇಲಾಅವರ ವರ್ಣ-ವರ್ಗ ಸಮಾನತೆ, ಮಾರ್ಟಿನ್ ಲೂಥರ್‌ಕಿಂಗ್‌ಅವರದ್ವೇಷರಹಿತ ಪರಿವರ್ತನೆ, ಐನಸ್ಟೈನ್‌ಅವರ ವೈಜ್ಞಾನಿಕತೆ ಮತು ಮಾನವೀಯತೆಇವೆಲ್ಲವೂ ಬಸವಣ್ಣನವರ ವಿಚಾರಗಳಲ್ಲಿ ಹಾಸು ಹೊಕ್ಕಾಗಿವೆ ಎಂದು ವಿವರಿಸಿದರು.ಎಲ್ಲದಾರ್ಶನಿಕರಒಟ್ಟು ವಿಚಾರಧಾರೆಯಲ್ಲಿ ಮಾನವೀಯತೆಯೆ ಮುಖ್ಯವಾಗಿದೆ.ಅದನ್ನು ನಾವು ತಿಳಿದು ಅನುಸರಿಸಿದರೆ ಪ್ರತಿಯೊಬ್ಬರಜೀವನ ಸಾರ್ಥಕವಾಗುತ್ತದೆಎಂದರು.

ಕಾಯಕ್ರಮದಅಧ್ಯಕ್ಷತೆ ವಹಿಸಿದ ಡಾ.ಈಶ್ವರಯ್ಯ ಮಠಅವರು ಮಾತನಾಡುತ್ತಕಲ್ಯಾಣರಾವ ಪಾಟೀಲ ಅವರುಅವರ ತಂದೆತಾಯಿಗಳ ಮೇಲೆ ಇಟ್ಟಿರುವಗೌರವ, ಬಂಧುಮಿತ್ರರ ಮೇಲೆ ಇರುವ ಪ್ರೀತಿಯೇಅವರ ಮಾದರಿ ವ್ಯಕ್ತಿತ್ವಕ್ಕೆಕಾರಣ.ಅವರು ಕವಿಮಾರ್ಗ ವಿಶೇಷ ಸಂಚಿಕೆಯನ್ನುರೂಪಿಸುವುದರ ಮೂಲಕ ಡಾ. ವೀರಣ್ಣದಂಡೆ ಮತ್ತುಡಾ.ಜಯಶ್ರೀದಂಡೆ ಗುರುಗಳ ಋಣ ತೀರಿಸಿದ್ದಾರೆ. ಜೊತೆಗೆ ಸುರಪುರಜಿಲ್ಲೆಯವರೇಅಗಿರುವತಾವು, ಡಾ. ಶರಣಪ್ಪ ಸತ್ಯಂಪೇಟೆಯವರು ಮತ್ತು ಪ್ರೊ.ರಾಜಶೇಖರ ಬಿರಾದಾರಅವರು ಸತತ ಪರಿಶ್ರಮ, ಪ್ರಾಮಾಣಿಕ ಪ್ರಯತ್ನದಿಂದಲೇ ಬೆಳೆದವರು ಎಂದುತಮ್ಮ ಸಾಧನೆಯ ಹೆಜ್ಜೆಗಳನ್ನು ಮೆಲುಕು ಹಾಕಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿದತ್ತಿದಾಸೋಹಿಗಳಾದಡಾ.ಕಲ್ಯಾಣರಾವ ಜಿ. ಪಾಟೀಲ ಅವರು ಸ್ವಾಗತಿಸಿ, ಅತಿಥಿಗಳ ಪರಿಚಯ ಮಾಡಿದರು.ಶ್ರೀ ಎಚ್.ಕೆ.ಉದ್ದಂಡಯ್ಯಅವರು ನಿರೂಪಿಸಿ, ಶರಣು ಸಮರ್ಪಣೆ ಸಲ್ಲಿಸಿದರು.ಶ್ರೀಮತಿ ಅಶ್ವಿನಿ ಮತ್ತು ಶ್ರೀ ರಾಜಕುಮಾರ ಹಿರೇಮಠಅವರು ವಚನ ಗಾಯನ ಮಾಡಿದರು.ಸಂಶೋದನಕೇಂದ್ರದ ನಿರ್ದೇಶಕರಾದಡಾ.ವೀರಣ್ಣದಂಡೆ, ಬಸವ ಸಮಿತಿಅಧ್ಯಕ್ಷರಾದಡಾ. ವಿಲಾಸವತಿ ಖೂಬಾ ಅವರು ಹಾಗೂ ದತ್ತಿ ದಾಸೋಹಿಗಳ ಕುಟುಂಬದ ಸದಸ್ಯರು, ಅವರಅಪಾರ ಬಂಧುಗಳು ಮತ್ತು ಮಿತ್ರರುಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

emedialine

Recent Posts

ಕೆಬಿಎನ ಆಸ್ಪತ್ರೆಯಲ್ಲಿ ಉಚಿತ ಇಸಿಜಿ ತಪಾಸಣೆ

ಕಲಬುರಗಿ: ವಿಶ್ವ ಹೃದಯದ ದಿನದ ಅಂಗವಾಗಿ ಸ್ಥಳೀಯ ಖಾಜಾ ಬಂದಾನವಾಜ ವಿವಿಯ ಖಾಜಾ ಬಂದಾನವಾಜ ಆಸ್ಪತ್ರೆಯ ಜನರಲ ಮೆಡಿಸಿನ್ ವಿಭಾಗದಲ್ಲಿ…

5 mins ago

ವಿದ್ಯಾರ್ಥಿಗಳ ಕೌಶಲ್ಯ ಉತ್ತೇಜನ ಕಾರ್ಯಕ್ರಮ (Technical event)

ಕಲಬುರಗಿ: ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅನಿಲ್ ಕಲಾಸ್ಕರ್ ಅವರು "ಸಾಫ್ಟ್‌ವೇರ್ ಇಂಜಿನಿಯರಿಂಗ್ ಮತ್ತು AI" ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.…

35 mins ago

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

14 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

14 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

14 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

14 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420