ಬಿಸಿ ಬಿಸಿ ಸುದ್ದಿ

ಭಯ ಬೇಡ- ಅರಿವು ಅಗತ್ಯ. ಡಾ.ಶಾಂತಲಿಂಗ ನಿಗ್ಗುಡಗಿ

ಇ-ಮೀಡಿಯಾ ಲೈನ್ ನ್ಯೂಸ್

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಇ.ಪಿ.ಎಫ್ ಕ್ಷೇತ್ರೀಯ ಕಾರ್ಯಾಲಯದಲ್ಲಿ ಗುರುವಾರ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ನಗರದ ಎಚ್.ಸಿ.ಜಿ ಆಸ್ಪತ್ರೆಯ ಖ್ಯಾತ ಕ್ಯಾನ್ಸರ್ ತಜ್ಞ ಡಾ. ಶಾಂತಲಿಂಗ ನಿಗ್ಗುಡಗಿ ಮಾತನಾಡಿ ಕ್ಯಾನ್ಸರ್‌ ಎಂದರೆ ದೇಹದಲ್ಲಿ ಜೀವಕೋಶಗಳ ಅಸಹಜ ಬೆಳವಣಿಗೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್‌ ಗುರುತಿಸುವಿಕೆ ಹಾಗೂ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡಿದಲ್ಲಿ ಗುಣವಾಗುವ ಪ್ರಮಾಣ ಅಧಿಕ. ಹೀಗಾಗಿ ಕ್ಯಾನ್ಸರ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಅಗತ್ಯವಾಗಿದೆ. ಕ್ಯಾನ್ಸರ್‌ ಕುರಿತು ಭಯವೇ ಹೆಚ್ಚು; ಅರಿವು ಕಡಿಮೆಯಾಗಿದೆ. ತಂಬಾಕು, ಗುಟ್ಕಾ, ಬೀಡಿ, ಸಿಗರೇಟ್‌ ಸೇವನೆಯಿಂದ ದೂರವಿರಬೇಕು. ಕ್ಯಾನ್ಸರ್ ಮುಂಜಾಗ್ರತಾ ಕ್ರಮವಾಗಿ ದಿನನಿತ್ಯ ಕನಿಷ್ಠ ಅರ್ಧ ಗಂಟೆಗಳ ಕಾಲ ನಿಯಮಿತ ವ್ಯಾಯಾಮ, ಯೋಗ ಹಾಗೂ ವಾಕಿಂಗ್ ಮಾಡುವುದು ಅಗತ್ಯವಿದೆ. ಅದೇ ರೀತಿಯಾಗಿ ದಿನನಿತ್ಯ ಹಸಿರು ತರಕಾರಿ‌ ಹಾಗೂ ಕಾಲೋಚಿತ ಹಣ್ಣುಗಳನ್ನು ಉಪಯೋಗಿಸುವ ಉತ್ತಮ ಎಂದರು. ಕಾರ್ಯಕ್ರಮದಲ್ಲಿ ಇ.ಪಿ.ಎಫ್ ಮನೋರಂಜನಾ ಸಂಘದ ಪರವಾಗಿ ವೈದ್ಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ರವಿ ಯಾದವ, ವಿಠ್ಠಲ್, ಅರ್ಸ್ಲಾನ್ ಕಿತ್ತೂರ, ಬಸವರಾಜ ಹೆಳವರ, ಮದನ ಕುಲಕರ್ಣಿ, ಜಗನ್ನಾಥ, ಕಲ್ಪನಾ ಮಧಬಾವಿ, ಕೇಶವರಾವ ಕುಲಕರ್ಣಿ, ಮೊಹ್ಮದ್ ಯೂಸುಫ್, ಪ್ರತಿಭಾ, ಶಿವಶರಣಪ್ಪ ಶಿವಕೇರಿ ಹಾಗೂ ಇನ್ನಿತರ ಸಿಬ್ಬಂದಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ವಿರೇಶ ಭಾಗವಹಿಸಿದ್ದರು.

emedialine

Recent Posts

ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರತಿಕೃತಿ ದಹಿಸಿ ಡಿಎಸ್‌ಎಸ್ ಪ್ರತಿಭಟನೆ ಅಂಬೇಡ್ಕರ್‌ರನ್ನು ಅವಮಾನಿಸಿದ ಅಮಿತ್ ಷಾ ಗಡಿಪಾರು ಮಾಡಿ-ಕ್ರಾಂತಿ

ಸುರಪುರ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು…

21 hours ago

ಮಹಿಳಾ ಸಾಧಕರಿಗೆ ಸನ್ಮಾನ

ಕಲಬುರಗಿ: ನಗರದ ಹ್ಯಾಪಿ ಫಂಕ್ಷನ್ ಹಾಲ್‌ನಲ್ಲಿ ರಂಗಾAತರAಗ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ "ಕನ್ನಡಂ ಗೆಲ್ಗೆ…

22 hours ago

ಕನ್ನಡ ಸೈನ್ಯದ ಕನ್ನಡ ಉತ್ಸವ

ಕಲಬುರಗಿ: ನಗರದ ಸಿದ್ದಾರ್ಥ ವೃತ್ತ (ಗೋವಾ ಹೊಟೇಲ್) ಟ್ಯಾಂಕ್ ಬಂಡ್ ಮುಖ್ಯ ರಸ್ತೆಯ ಆವರಣ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮಹಾಮಂಟಪದಲ್ಲಿ…

22 hours ago

ಜಿಲ್ಲಾಧಿಕಾರಿ ಡಾ. ಫೌಜಿಯಾ ತರನ್ನುಮ್ ಸೇರಿ ಸನ್ಮಾನ

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಕಲಬುರಗಿ ವತಿಯಿಂದ ಕಲಬುರಗಿ ಜಿಲ್ಲಾಧಿಕಾರಿ ಡಾ.ಫೌಜಿಯಾ ತರನ್ನುಮ್, ಜಿಲ್ಲಾ…

22 hours ago

ಸಂಸತ್ತಿನಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಹೇಳಿಕೆಗೆ ದಿನೇಶ ದೊಡ್ಡಮನಿ ಖಂಡನೆ

ಕಲಬುರಗಿ: ಸಂಸತ್ತ ಅಧಿವೇಶನದಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಮಾತನಾಡಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ ಆರ್…

1 day ago

ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪಿಂಚಣಿ ಹೋರಾಟಕ್ಕೆ ಹೈ ಕ ಶಿಕ್ಷಣ ಸಂಸ್ಥೆಯ ನೌಕರರ ಬೆಂಬಲ

ಬೆಳಗಾವಿ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ (ರಿ ) *ಪ್ರಾಣ ಬಿಟ್ಟೇವು ಪಿಂಚಣಿ…

2 days ago