ಬಿಸಿ ಬಿಸಿ ಸುದ್ದಿ

ನೆನಪಿನ ಅಲೆಯಲಿ ಹೈಕು ಸಂಕಲನ ಜನಾರ್ಪಣೆ

ಇ-ಮೀಡಿಯಾ ಲೈನ್ ನ್ಯೂಸ್
ಕಲಬುರಗಿ: ಜಪಾನಿಗರು ಎಲ್ಲದರಲ್ಲೂ ದೂರದೃಷ್ಟಿ ಹೊಂದಿದವರು ಎಂದು ಚಿತ್ರ ನಿರ್ದೇಶಕ, ನಟ ಮದನ್ ಪಟೇಲ್ ಹೇಳಿದರು.

ಜಿಲ್ಲಾ ಕಸಾಪ ಆಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಶನಿವಾರ ಸಂಜೆ ಧರ್ಮಣ್ಣ ಎಚ್. ಧನ್ನಿ ರಚಿಸಿದ ನೆನಪಿನ ಅಲೆಯಲ್ಲಿ ಹೈಕು ಸಂಕಲನ ಜನಾರ್ಪಣೆಗೊಳಿಸಿ ಮಾತನಾಡಿದ ಅವರು, ಇಂದಿನ 21ನೇ ಶತಮಾನದ ಸಂಕೇತ. 5+7+5 ಸಾಲುಗಳಲ್ಲಿ ಬರೆದು ಜನರಿಗೆ ಮುಟ್ಟಿಸುವ ಕೆಲಸ‌ ಇಂದಿನ ಜರೂರತ್ತು ಎಂದು ಅವರು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಕಲಬುರಗಿಯಲ್ಲಿ ಸಾಕಷ್ಟು ಪ್ರತಿಭಾವಂತ ಸಾಹಿತಿ, ಕಲಾವಿದರಿದ್ದಾರೆ ಅವರಿಗೆ ಉತ್ತಮ ವೇದಿಕೆ ಸಿಗಬೇಕು ಎಂದು ತಿಳಿಸಿದರು.

ಮೂರು ಸಾಲು, 17 ಸಾಲುಗಳಲ್ಲಿ ವಿಚಾರ, ವಿಷಯವನ್ನು, ಸಂದೇಶವನ್ನು ಕೊಡುವ ಹೈಕುಗಳು ಪ್ರಸ್ತುತ ದಿನಮಾನಗಳಲ್ಲಿ ಪ್ರಸಿದ್ಧಿ ಪಡೆಯಲಿ ಎಂದು ಹಾರೈಸಿದರು.

ಪುಸ್ತಕ ಕುರಿತು ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ ಮಾತನಾಡಿ, ಹೈಕು 16ನೇ ಶತಮಾನಕ್ಕಿಂತ ಹಿಂದೆ ಹುಟ್ಟಿಕೊಂಡ ಜಪಾನಿ ಕಾವ್ಯ ಪ್ರಕಾರವಾಗಿದ್ದು, ಇದಕ್ಕೊಂದು ಮಾತ್ರಾಗಣವಿದೆ. ಒಂದು ಲೆಕ್ಕಾಚಾರವಿದೆ ಎಂದರು.

ಬುದ್ಧನ ತತ್ವ, ಸಂದೇಶಗಳನ್ನು ತಿಳಿಸುವ ಉದ್ದೇಶದಿಂದ ಹುಟ್ಟಿಕೊಂಡ ಹೈಕುವಿಗೆ ಒಂದು ಘನವಾದ ಉದ್ದೇಶವಿರುತ್ತದೆ.‌ ರವೀಂದ್ರ ನಾಥ ಟ್ಯಾಗೋರ್ ಅವರು ಭಾರತದಲ್ಲಿ ಹೆಚ್ಚು ಪ್ರಚುರ ಪಡಿಸಿದರು ಎಂದು ವಿವರಿಸಿದರು.

ಹೇಳಿಕೆ ಅನ್ನಿಸಿಕೊಳ್ಳದ, ವಾಕ್ಯ ರಚನೆಯಾಗಿರದ, ಸ್ಟೇಟ್ ಮೆಂಟ್ ಆಗಿರದ ಹೈಕುಗಳು, ಮೊದಲ ಸಾಲಿನಲ್ಲಿ ವಿಷಯ, ಎರಡನೆ ಸಾಲಿನಲ್ಲಿ ವಿಸ್ತಾರ, ಮೂರನೆ ಸಾಲಿನಲ್ಲಿ ಬೆಳಕು ಕಾಣಿಸುತ್ತದೆ ಎಂದು ತಿಳಿಸಿದರು.

230ಕ್ಕೂ ಹೆಚ್ಚು ಹೈಕುಗಳಿರುವ ಧರ್ಮಣ್ಣ ಧನ್ನಿ ಅವರ ಈ ಕೃತಿ ತುಂಬಾ ರಸವತ್ತಾಗಿದೆ. ಹೈಕು ಪ್ರಕಾರದ ವಿರಳ ಕವಿಗಳಲ್ಲಿ ಧನ್ನಿ ಕೂಡ ಒಬ್ಬರಾಗಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ವಾಣಿಶ್ರೀ ಸಗರಕರ್ ಮಾತನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಹಾಗೂ ಕವಿ ಧರ್ಮಣ್ಣ ಧನ್ನಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ನಿರೂಪಿಸಿದರು. ಖಜಾಂಚಿ ಡಾ.‌ ಶರಣರಾಜ ಚಪ್ಪರಬಂದಿ ವಂದಿಸಿದರು.

ಶಾಮರಾವ ಸೂರನ್, ಮಹಾಂತೇಶ ನವಲಕಲ್, ಡಾ. ಶಿವರಂಜನ ಸತ್ಯಂಪೇಟೆ, ಪ್ರಕಾಶ ಜಂಗ್ಲೆ, ಸಿ.ಎಸ್. ಮಾಲಿಪಾಟೀಲ, ಸಿದ್ಧಲಿಂಗ ರಾವೂರ, ಬಾಬುರಾವ ಪಾಟೀಲ ಚಿತಕೋಟೆ, ಸಿದ್ಧರಾಮ ರಾಜಮಾನೆ, ವಿನೋದ ಜೆನೆವೇರಿ, ಮಾಲಾ ಕಣ್ಣಿ ಇತರರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಜ್ಯೋತಿ ಪಾಟೀಲ‌, ಶರಣಮ್ಮ ಅರಳಿ, ಕರಬಸಪ್ಪ ಮೂಲಗೆ, ಬಸವರಾಜ ಬಿಜಲ್ವಾಡಿ ಹಾಗೂ ಆಳಂದ ತಾಲ್ಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಧರ್ಮಣ್ಣ ಎಚ್. ಧನ್ನಿ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.

emedialine

Recent Posts

ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರತಿಕೃತಿ ದಹಿಸಿ ಡಿಎಸ್‌ಎಸ್ ಪ್ರತಿಭಟನೆ ಅಂಬೇಡ್ಕರ್‌ರನ್ನು ಅವಮಾನಿಸಿದ ಅಮಿತ್ ಷಾ ಗಡಿಪಾರು ಮಾಡಿ-ಕ್ರಾಂತಿ

ಸುರಪುರ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು…

18 hours ago

ಮಹಿಳಾ ಸಾಧಕರಿಗೆ ಸನ್ಮಾನ

ಕಲಬುರಗಿ: ನಗರದ ಹ್ಯಾಪಿ ಫಂಕ್ಷನ್ ಹಾಲ್‌ನಲ್ಲಿ ರಂಗಾAತರAಗ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ "ಕನ್ನಡಂ ಗೆಲ್ಗೆ…

19 hours ago

ಕನ್ನಡ ಸೈನ್ಯದ ಕನ್ನಡ ಉತ್ಸವ

ಕಲಬುರಗಿ: ನಗರದ ಸಿದ್ದಾರ್ಥ ವೃತ್ತ (ಗೋವಾ ಹೊಟೇಲ್) ಟ್ಯಾಂಕ್ ಬಂಡ್ ಮುಖ್ಯ ರಸ್ತೆಯ ಆವರಣ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮಹಾಮಂಟಪದಲ್ಲಿ…

19 hours ago

ಜಿಲ್ಲಾಧಿಕಾರಿ ಡಾ. ಫೌಜಿಯಾ ತರನ್ನುಮ್ ಸೇರಿ ಸನ್ಮಾನ

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಕಲಬುರಗಿ ವತಿಯಿಂದ ಕಲಬುರಗಿ ಜಿಲ್ಲಾಧಿಕಾರಿ ಡಾ.ಫೌಜಿಯಾ ತರನ್ನುಮ್, ಜಿಲ್ಲಾ…

19 hours ago

ಸಂಸತ್ತಿನಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಹೇಳಿಕೆಗೆ ದಿನೇಶ ದೊಡ್ಡಮನಿ ಖಂಡನೆ

ಕಲಬುರಗಿ: ಸಂಸತ್ತ ಅಧಿವೇಶನದಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಮಾತನಾಡಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ ಆರ್…

1 day ago

ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪಿಂಚಣಿ ಹೋರಾಟಕ್ಕೆ ಹೈ ಕ ಶಿಕ್ಷಣ ಸಂಸ್ಥೆಯ ನೌಕರರ ಬೆಂಬಲ

ಬೆಳಗಾವಿ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ (ರಿ ) *ಪ್ರಾಣ ಬಿಟ್ಟೇವು ಪಿಂಚಣಿ…

2 days ago