ಬಿಸಿ ಬಿಸಿ ಸುದ್ದಿ

ಮಲ್ಲಾಬಾದ್‌ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬದ್ಧ ಡಾ. ಅಜಯ ಸಿಂಗ್

ಕಲಬುರಗಿ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ ಬರುವ ಜೇವರ್ಗಿ ತಾಲೂಕಿನ ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಅನುಷ್ಠಾನ ಪ್ರಕ್ರಿಯೆ ಕುರಿತು ಶನಿವಾರ ಜೇವರ್ಗಿ ಶಾಸಕರು ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್‌ ಧರ್ಮಸಿಂಗ್‌ ಅವರು ಮಲ್ಲಾಬಾದ್‌ ಏತ ನೀರಾವರಿ ಹೋರಾಟ ಸಮೀತಿಯ ಮುಖಂಡರೊಂದಿಗೆ ಮಹತ್ವದ ಸಭೆ ನಡೆಸಿದರು.

ಈ ನೀರಾವರಿ ಕಾಮಗಾರಿ ತ್ವರಿತ ಅನುಷ್ಠಾನದ ಕುರಿತಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರು ಹೆಚ್ಚು ಆಸಕ್ತಿ ತೋರಿದ್ದಾರೆ. ಬೆಳಗಾವಿ ಸದನದಲ್ಲಿ ತಾವು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಯೋಜನೆಯ ಜಾರಿಗೆ ಉದ್ದೇಶಿಸಲಾಗಿದೆ. ಸದರಿ ಯೋಜನೆಯಲ್ಲಿ ಪೂರ್ಣ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ 299 ಕೋಟಿ ರು ವೆಚ್ಚವಾಗಿದೆ ಎಂದು ನೀಡಿರುವ ಮಾಹಿತಿಯನ್ನು ಹೋರಾಟಗಾರರ ಗಮನಕ್ಕೆ ತಂದರು.

ಯೋಜನೆಯ ಅನಷ್ಠಾನದಲ್ಲಿ ವಿಳಂಬಕ್ಕೆ ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಕಾರಣ, ಸದರಿ ಯೋಜನೆ ಯೂಕೆಪಿ 3 ನೇ ಹಂತದಲ್ಲಿರೋದರಿಂದ , ಇದೇ ನ್ಯಾಯಾಧಿಕರಣದ 2 ನೇ ಹಂತದ ಗೆಜೆಟ್‌ ಅಧಿಸೂಚನೆ ಹೊರಡಿಸುವಲ್ಲಿ ಕೇಂದ್ರದಲ್ಲಿ ವಿಳಂಬವಾಗುತ್ತಿದೆ. ಇದೇ ವಿಷಯವಾಗಿ ಸಮನ್ವಯ ಸಾಧಿಸಲಾಗುತ್ತಿದೆ. ಆದಾಗ್ಯೂ ಗೆಜೆಟ್‌ ಅಧಿಸೂಚನೆ ಹೊರತುಪಡಿಸಿಯೂ ಸಮಾನಾಂತರ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೆಬಿಜೆಎನ್‌ಎಲ್‌ ನಿರ್ದೇಶಕ ಮಂಡಳಿಯ ಅನುಮೋದನೆ ಪಡೆದು ಕ್ರಮ ಜರುಗಿಸಲಾಗುತ್ತದೆ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವರಾಗಿರುವ ಡಿಕೆ ಶಿವಕುಮಾರ್‌ ಅವರು ಸದನದಲ್ಲಿ ನೀಡಿರುವ ಯೋಜನೆಯ ವಿವರಗಳನ್ನೆಲ್ಲ ಡಾ. ಅಜಯ್‌ ಸಿಂಗ್‌ ಹೋರಾಟಗಾರರ ಮುಂದೆ ಪ್ರಸ್ತಾಪಿಸಿದರು.

ಮಲ್ಲಾಬಾದ್‌ ನೀರಾವರಿ ಯೋಜನೆ ಬೇಗ ಅನುಷ್ಠಾನಕ್ಕೆ ತರಲು ಆಗ್ರಹಿಸಿ ಇದೇ ಡಿ. 16 ರಂದು ನಡೆಸಲು ಉದ್ದೇಶಿಸಿರುವ ಹೋರಾಟ ಕೈಬಿಡುವಂತೆಯೂ ಶಾಸಕರು ಇದೇ ಸಂದರ್ಭದಲ್ಲಿ ಹೋರಾಟಗಾರರಿಗೆ ಕೋರಿದರು.

ಮಲ್ಲಾಬಾದ್‌ ಏತ ನೀರಾವರಿ ಹೋರಾಟ ಸಮೀತಿಯ ಮಹೇಶ್ ಕುಮಾರ್ ರಾಥೋಡ್, ಬಾಬು ಪಾಟೀಲ್, ಮಹಾಂತಗೌಡ ಪಾಟೀಲ್ ನಂದಿಹಳ್ಳಿ, ಇಬ್ರಾಹಿಂ ಪಟೇಲ್ ಯಾಳವಾರ್, ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುಕುಂ ಪಟೇಲ್ ಇಜೇರಿ, ರಾಜಶೇಖರ್ ಸೇರಿ, ಕಾಶಿಮ್ ಪಟೇಲ್ ಮುದುವಾಳ, ಮನ್ನಾ ಪಟೇಲ್‌,  ಗುರು ಸುಬೇದಾರ್, ರಾಮನಗೌಡ ಪಾಟೀಲ್ ಬಿಳವಾರ್ ಸೇರಿದಂತೆ ಅನೇಕರು ಸಭೆಯಲ್ಲಿದ್ದರು.

 

vikram

Recent Posts

ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರತಿಕೃತಿ ದಹಿಸಿ ಡಿಎಸ್‌ಎಸ್ ಪ್ರತಿಭಟನೆ ಅಂಬೇಡ್ಕರ್‌ರನ್ನು ಅವಮಾನಿಸಿದ ಅಮಿತ್ ಷಾ ಗಡಿಪಾರು ಮಾಡಿ-ಕ್ರಾಂತಿ

ಸುರಪುರ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು…

10 hours ago

ಮಹಿಳಾ ಸಾಧಕರಿಗೆ ಸನ್ಮಾನ

ಕಲಬುರಗಿ: ನಗರದ ಹ್ಯಾಪಿ ಫಂಕ್ಷನ್ ಹಾಲ್‌ನಲ್ಲಿ ರಂಗಾAತರAಗ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ "ಕನ್ನಡಂ ಗೆಲ್ಗೆ…

10 hours ago

ಕನ್ನಡ ಸೈನ್ಯದ ಕನ್ನಡ ಉತ್ಸವ

ಕಲಬುರಗಿ: ನಗರದ ಸಿದ್ದಾರ್ಥ ವೃತ್ತ (ಗೋವಾ ಹೊಟೇಲ್) ಟ್ಯಾಂಕ್ ಬಂಡ್ ಮುಖ್ಯ ರಸ್ತೆಯ ಆವರಣ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮಹಾಮಂಟಪದಲ್ಲಿ…

10 hours ago

ಜಿಲ್ಲಾಧಿಕಾರಿ ಡಾ. ಫೌಜಿಯಾ ತರನ್ನುಮ್ ಸೇರಿ ಸನ್ಮಾನ

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಕಲಬುರಗಿ ವತಿಯಿಂದ ಕಲಬುರಗಿ ಜಿಲ್ಲಾಧಿಕಾರಿ ಡಾ.ಫೌಜಿಯಾ ತರನ್ನುಮ್, ಜಿಲ್ಲಾ…

10 hours ago

ಸಂಸತ್ತಿನಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಹೇಳಿಕೆಗೆ ದಿನೇಶ ದೊಡ್ಡಮನಿ ಖಂಡನೆ

ಕಲಬುರಗಿ: ಸಂಸತ್ತ ಅಧಿವೇಶನದಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಮಾತನಾಡಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ ಆರ್…

18 hours ago

ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪಿಂಚಣಿ ಹೋರಾಟಕ್ಕೆ ಹೈ ಕ ಶಿಕ್ಷಣ ಸಂಸ್ಥೆಯ ನೌಕರರ ಬೆಂಬಲ

ಬೆಳಗಾವಿ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ (ರಿ ) *ಪ್ರಾಣ ಬಿಟ್ಟೇವು ಪಿಂಚಣಿ…

1 day ago