ಕಲಬುರಗಿ: ದಿನಾಂಕ: 17.12.2024 ರಂದು ಮಂಗಳವಾರ ರಾತ್ರಿ ರಾಜ್ಯ ಸಭೆಯಲ್ಲಿ ಸಂವಿಧಾನ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಕೇಂದ್ರದ ಗೃಹಸಚಿವ ಅಮೀತ ಶಾ ಅವರು. ಡಾ| ಬಿ.ಆರ್. ಅಂಬೇಡ್ಕರ ಅವರ ಹೆಸರು ತೆಗೆದುಕೊಳ್ಳುವುದು ಒಂದು ಫ್ಯಾಶನ್ ಆಗಿದೆ. ಇದರ ಬದಲಾಗಿ ದೇವರ ಸ್ಮರಣೆ ಮಾಡಿದರೆ ಏಳು ಜನ್ಮದವರೆಗೆ ಸ್ವರ್ಗ ಸಿಗುತ್ತಿತ್ತು ಎಂದು ಡಾ|| ಅಂಬೇಡ್ಕರ ಅವರಿಗೆ ಅವಮಾನ ಮಾಡಿದ್ದು, ಆರ್.ಎಸ್.ಎಸ್ ಮತ್ತು ಬಿ.ಜೆ.ಪಿ ಪಕ್ಷದ ಅಂತರಂಗದ ಮಾತುಗಳು ಹೊರ ಹಾಕಿದ್ದಾರೆ.
ಅಮಿತ್ ಶಾ ಅವರ ಮೇಲಿನ ಮಾತುಗಳನ್ನು ವಿರೋಧಿಸಿ ದಲಿತ, ಹಿಂದುಳಿದ ಹಾಗೂ ಪ್ರಗತಿಪರ ಸಂಘಟನೆಗಳು ಮುಖಂಡರು ಡಿ. 24ರಂದು ಕಲಬುರಗಿ ಬಂದ್ ಗೆ ಕರೆ ನೀಡಿದ್ದಾರೆ.
ಡಾ| ಬಿ.ಆರ್. ಅಂಬೇಡ್ಕರ ಅವರ ಬಗ್ಗೆ ಬಿ.ಜೆ.ಪಿ ಪಕ್ಷ ಅಂತರಗಂದ ಅಭಿಪ್ರಾಯವನ್ನು ದೇಶದ ಮುಂದೆ ತೋರಿಸಿ ಬಿಟ್ಟಿದ್ದಾರೆ. ಅಮಿತ ಶಾ ಅವರು ಆಡಿದ ಮಾತುಗಳು ಬಿ.ಜೆ.ಪಿ ಮತ್ತು ಸಂಘ ಪರಿವಾರದ ನಾಯಕರ ಮನಸ್ಸಿನಲ್ಲಿದ್ದದ್ದು ಅವರು ಮಾತಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಇದನ್ನು ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಕಲಬುರಗಿ ಕಲಬುರಗಿ ಉಗ್ರವಾಗಿ ಖಂಡಿಸುತ್ತದೆ. ಡಾ| ಬಿ.ಆರ್. ಅಂಬೇಡ್ಕರ ಅವರ ನೇತೃತ್ವದಲ್ಲಿ ರೂಪುಗೊಂಡ ಸ್ವತಂತ್ರ ಭಾರತದ ಸಂವಿಧಾನವನ್ನು ನಾಶ ಮಾಡುವ ಹುನ್ನಾರ ಹೊಸದಲ್ಲ. ಈಗ ಅದನ್ನು ಅಮಿತ ಶಾ ಅವರು ಆರ್.ಎಸ್.ಎಸ್ ಮತ್ತು ಬಿಎಐ.ಜೆ.ಪಿ ಪಕ್ಷದ ಹಾಗೂ ಕೋಮುವಾದಿ ಸಂಘಟನೆಗಳ ಮುಖವಾಣಿಯಾಗಿ ಅವರು ಮಾತನಾಡಿದ್ದಾರೆ ಎಂದು ದೂರಿದ್ದಾರೆ.
ಅಮಿತ ಶಾ ಡಾ| ಬಿ.ಆರ್. ಅಂಬೇಡ್ಕರ ಅವರ ಬಗ್ಗೆ ಆಡಿರುವ ತುಚ್ಛಿಕರಣದ ಮಾತುಗಳು ಇಡೀ ದೇಶದ ಜನತೆ ಕೇಳಿದೆ. ಡಾ॥ ಬಿ.ಆರ್. ಅಂಬೇಡ್ಕರ ಅವರನ್ನು ಬಿ.ಜೆ.ಪಿ ನಾಯಕರು ದ್ವೇಷಿಸಿಸಲು ಮುಖ್ಯಕಾರಣ. ಅವರು ಕೊಟ್ಟಿ ಹೋಗಿರುವ ಸಂವಿಧಾನ ಸ್ವಾತಂತ್ರ್ಯ, ಸಮಾನತೆ ಮತ್ತು ಬ್ರಾತೃತ್ವಗಳನ್ನು ಒಳಗೊಂಡ ಸಂವಿಧಾನವನ್ನು ಮಾತ್ರ ಕೊಟ್ಟಿ ಹೋಗಿಲ್ಲ. ಅಲ್ಲಿಯವರೆಗೆ ಜಾರಿಯಲ್ಲಿದ್ದ ಅಲಿಖಿತ ಸಂವಿಧಾನವಾದ ಮನಸ್ಕೃತಿಯನ್ನು ಸುಟ್ಟು ಹೋಗಿದ್ದರು. ಮನಸ್ಕೃತಿ ಸುಟ್ಟು ಹಾಕಿ 22 ವರ್ಷಗಳ ನಂತರ ಅವರು ಹೊಸ ಸಂವಿಧಾನವನ್ನು ದೇಶಕ್ಕೆ ಕೊಟ್ಟರು. ಬಿ.ಜೆ.ಪಿ ಮತ್ತು ಸಂಘ ಪರಿವಾರದಲ್ಲಿರುವ ಮನುವಾದಿಗಳು ಡಾ|| ಬಿ.ಆರ್. ಅಂಬೇಡ್ಕರ ಅವರನ್ನು ದ್ವೇಷಿಸಲು ಪ್ರಮುಖ ಕಾರಣವಾಗಿದೆ ಎಂದರು.
ಸಂಸ್ಕಾರ ಮತ್ತು ತಿಳುವಳಿಕೆ ಇಲ್ಲದ ಅಮಿತ ಶಾ ಅವರೆ, ಡಾ| ಅಂಬೇಡ್ಕರ ಅವರ ಸ್ಮರಣೆ ನಮಗೆ ವ್ಯಸನ ಅಲ್ಲ. ನಿತ್ಯಸ್ಮರಣೆ, ನಮ್ಮ ಉಸಿರು ಇರುವವರೆಗೂ, ಈ ಭೂಮಿಯಲ್ಲಿ ಸೂರ್ಯ ಚಂದ್ರ ಇರುವರೆಗೂ ಡಾ॥ ಅಂಬೇಡ್ಕರ ಸ್ಮರಣೆ ಇರಲಿದೆ ಎಂದು ತಿಳಿಸಿದರು.
ಗುಜರಾತ ರಾಜ್ಯದಿಂದ ಗಡಿಪಾರು ಕೇಸು ದಾಖಲಾಗಿದ್ದ ಅಮಿತ ಶಾ ಆವರೆ, ನೀವು ಆಡಿರುವಂಥಹ ಮಾತುಗಳನ್ನು ಬೆಂಬಲಿಸಿ ನಿಮ್ಮ ಚೇಲಾಗಳು, ಮೋಜು ಕುಟ್ಟಿ ಸಂಭ್ರಮಿಸಬಹುದು. ಆದರೆ ಡಾ| ಅಂಬೇಡ್ಕರ ಅವರ ಕೊಟ್ಟ ಸಂವಿಧಾನದಿಂದ ಸಮಾನತೆ ಮತ್ತು ಘನತೆಯ ಬದುಕನ್ನು ಪಡೆದಿರುವ ಈ ದೇಶದ ಕೋಟ್ಯಾಂತರ ಜನ ನಿಮಗೆ ಹೇಗೆ ಭೀಮಾರಿ ಹಾಕುತ್ತಿರುವುದನ್ನು ನೋಡುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.
ಇವತ್ತು ನಾವು ಬದುಕುತ್ತಿರುವ ಭಾರತ ಡಾ| ಅಂಬೇಡ್ಕರ ಅವರ ಕನಸ್ಸಿನ ಸ್ವಾತಂತ್ರ, ಸಮಾನತೆ, ಬ್ರಾತೃತ್ವದ ಭಾರತವಾಗಿಲ್ಲ. ಪ್ರೀತಿಯಿಂದ ಸೃಷ್ಟಿಯಾದ ಈ ದೇಶವನ್ನು ಹಿಂಸೆ ಆಳುತ್ತಿದಿಯೇ ಎಂಬುವುದು ಸ್ಪಷ್ಟವಾಗಿದೆ. ಡಾ|| ಅಂಬೇಡ್ಕರ ಅವರ ಕನಸಿನ ಭಾರತ ಕಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಬುದ್ದನನ್ನು ದೇಶ ಬಿಟ್ಟು ಕಳುಹಿಸಿದವರು ಇಂದಿಗೂ ಜೀವಂತವಾಗಿದ್ದಾರೆ. ಬಸವಣ್ಣನನ್ನು ಕೊಲ್ಲುವರು ಅಂದು ಇದ್ದರು. ಇಂದೂ ಇದ್ದಾರೆ. ಡಾ|| ಅಂಬೇಡ್ಕರಂತಹ ಚೈತನ್ಯ ಶೀಲ ವ್ಯಕ್ತಿಗೆ ಅಂದು ಅವಮಾನಿಸಿದ್ದಾರೆ. ಇಂದೂ ಅವಮಾನಿಸುತ್ತಿರುವರು ಕ್ರೀಯಾಶೀಲರಾಗಿದ್ದಾರೆ. ಇರುತ್ತಾರೆ. ಇಂಥಹ ವಿರೋಧಿಗಳಿಗೆ ಪರ್ಯಾಯ ಚಳುವಳಿ ಕಟ್ಟುವ ಮೂಲಕ ಮಾತ್ರ ಉತ್ತರ ನೀಡಬೇಕಾಗಿದೆ ಎಂದರು.
ಸಂವಿಧಾನ ವಿರೋಧಿಸುವವನು ಹಾಗೂ ಸಂವಿಧಾನ ಶಿಲ್ಪಿಯನ್ನು ಅವಮಾನಿಸುವನು, ಆತನು ಯಾರೆ ಆಗಲಿ ಅವನೊಬ್ಬ ದೇಶದ್ರೋಹಿ, ಭಯೋತ್ಪಾದಕ, ಇಂಥವನಿಗೆ ಭಯೋತ್ಪಾದಕರಿಗಿಂತ ಒಂಬತ್ತು ಪಟ್ಟು ಕೇಸು ದಾಖಲಿಸಬೇಕು. ಪ್ರಜಾಪ್ರಭುತ್ವದ ಆರವಿಲ್ಲದೆ ಮಾತನಾಡಿದ ಅಮೀತ ಶಾ ಇತನನ್ನು ಕೂಡಲೇ ಮಂತ್ರಿ ಸ್ಥಾನದಿಂದ ವಜಾ ಮಾಡಿ ಇತನ ವಿರುದ್ಧ ಭಯೋತ್ಪಾದಕ ಅಡಿಯಲ್ಲಿ ಕೇಸು ದಾಖಲು ಮಾಡಲು ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಕಲಬುರಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ದಿನಾಂಕ : 24.12.2024 ರಂದು ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಕಲಬುರಗಿ ಬಂದ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿ ನಗರದ ನಗರೇಶ್ವರ ಶಾಲೆಯಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವರೆಗೆ ಬೃಹತ ಪ್ರತಿಭಟನಾ ಮೇರವಣಿಗೆ ಹಮ್ಮಿಕೊಂಡಿದ್ದು, ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು. ಬಂದ್ ಕಾರ್ಯಕ್ರಮಕ್ಕೆ ನಗರದ ಸಾರ್ವಜನಿಕರು, ವ್ಯಾಪಾರಸ್ಥರು ಸಹಕರಿಸಬೇಕೆಂದು ಮತ್ತು ತಾವೆಲ್ಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಮನವಿ ಮಾಡಿಕೊಳ್ಳುತ್ತದೆ ಎಂದು ಹೇಳಿದರು.
ಹಿರಿಯ ದಲಿತ ಮುಖಂಡರಾದ ವಿಠ್ಠಲ ದೊಡ್ಡಮನಿ, ಭೀಮರಾಮ ಟಿ ಟಿ, ಮಜರ್ ಆಲಂ ಖಾನ್, ವಾಹಜ್ ಬಾಬಾ ನೈದಿ, ಆರ್.ಜಿ. ಶೇಟಗಾರ, ಗುರುನಾಥ ಪೂಜಾರಿ, ಸುಭಾಷ ರಾಠೋಡ, ಲಚಪ್ಪ ಜಮಾದಾರ, ತಿಪ್ಪಣ್ಣ ಒಡೇಯರ,
ಶರಣಬಸಪ್ಪ ಸೂರ್ಯವಂಶಿ, ಲಿಂಗರಾಜ ತಾರ್ ಫೈಲ್, ದಿನೇಶ ದೊಡ್ಡಮನಿ, ಹಣಮಂತ ದೊಡ್ಡಮನಿ, ಸೂರ್ಯಕಾಂತ ನಿಂಬಾಳಕರ್, ಸಚಿನ್ ಶಿರವಾಳ ಇತರರು ಇದ್ದರು.
ಕಲಬುರಗಿ: ಜೇವರ್ಗಿ ತಾಲ್ಲೂಕಿನ ನರಿಬೋಳ ಚಾಮನೂರು ಅಪೂರ್ಣ ಸೆತುವೆ ಪೂರ್ಣಗೋಳಿಸಲು ಆಗ್ರಹಿಸಿ ನರಿಬೋಳ ಚಾಮನೂರ ಗ್ರಾಮಸ್ಥರು ನಿರಂತರ ಧರಣಿಯನ್ನು ಹಗಲೂ…
ಸೇಡಂ : ಕನ್ನಡದಲ್ಲಿ ಕಾನೂನು ಸಾಹಿತ್ಯ ಹೆಚ್ಚಾಗಬೇಕಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಾಗರ ಗುರುಗೌಡ ಪಾಟೀಲ ಹೇಳಿದರು.…
ಶ್ರೀಮತಿ ಇಂದುಮತಿ ಚಾರಿಟೇಬಲ್ ಟ್ರಸ್ಟ್ (ರಿ) ಅಡಿಯಲ್ಲಿ ನಡೆಸಲಾಗುತ್ತಿರುವ " ಮಂದಹಾಸ" ಮನೋಸಾಮಾಜಿಕ ಪುನರ್ವಸತಿ ಕಾರ್ಯಕ್ರಮ ಕಲಬುರಗಿ ಹಾಗೂ ಜಿಲ್ಲಾ…
ಕಲಬುರಗಿ: ಶ್ರೀಮತಿ ಇಂದುಮತಿ ಚಾರಿಟೇಬಲ್ ಟ್ರಸ್ಟ್ (ರಿ) ಅಡಿಯಲ್ಲಿ ನಡೆಸಲಾಗುತ್ತಿರುವ " ಮಂದಹಾಸ" ಮನೋಸಾಮಾಜಿಕ ಪುನರ್ವಸತಿ ಕಾರ್ಯಕ್ರಮ ಕಲಬುರಗಿ ಹಾಗೂ…
ಕಲಬುರಗಿ: ಕಲಬುರಗಿ ನಗರದಲ್ಲಿ ನೆಲೆಸಿರುವ ಸುರಪುರ ತಾಲೂಕಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ೫ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಡಿ.೨೨ರಂದು…
ಕಲಬುರ್ಗಿ: ಶಿಕ್ಷಣ ಇಲಾಖೆ ಒಂದು ಆಲದ ಮರವಿದ್ದಂತೆ, ಅನೇಕರು ಆಶ್ರಯ ಪಡೆದಿರುತ್ತಾರೆ ಶಾಲಾ ಶಿಕ್ಷಣ ಇಲಾಖೆಯ ವಿವಿಧ ವೃಂದಗಳಲ್ಲಿ ಖಾಯಂ…