JOB

ಕನ್ನಡದಲ್ಲಿ ಕಾನೂನು ಸಾಹಿತ್ಯ ಹೆಚ್ಚಾಗಲಿ : ನ್ಯಾಯಾಧೀಶರು

ಸೇಡಂ : ಕನ್ನಡದಲ್ಲಿ ಕಾನೂನು ಸಾಹಿತ್ಯ ಹೆಚ್ಚಾಗಬೇಕಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಾಗರ ಗುರುಗೌಡ ಪಾಟೀಲ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಗುರುವಾರ ವಕೀಲರ ಸಂಘ ಮತ್ತು ಸಂಸ್ಕೃತಿ ಪ್ರಕಾಶನ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಕೀಲ ರವೀಂದ್ರ ಇಂಜಳ್ಳಿಕರ್ ರಚಿಸಿದ ‘ಭಾರತೀಯ ಕಾನೂನು ಕೈಪಿಡಿ’ ಪುಸ್ತಕ ಲೋಕಾರ್ಪಣೆ ಮಾತನಾಡಿದ ಅವರು, ಕನ್ನಡಭಾಷೆ ಅತ್ಯಂತ ಶ್ರೀಮಂತವಾಗಿದೆ. ಪ್ರತಿಯೊಂದು ಕ್ಷೇತ್ರಗಳಲ್ಲಿ ಕನ್ನಡಭಾಷೆಯು ವ್ಯಾಪಿಸಬೇಕು. ಹಾಗಂತ ಅನ್ಯಭಾಷೆಗಳ ಕುರಿತು ಅಸಡ್ಡೆ ಮಾಡಬಾರದು. ಎಲ್ಲ ಭಾಷೆಗಳನ್ನು ಗೌರವಿಸಬೇಕು. ಹೆಚ್ಚು ಹೆಚ್ಚು ಬೇರೆ ಭಾಷೆಗಳನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದರು.

ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಬಾಲು ಜಾಧವ ಮಾತನಾಡಿ, ಸ್ಥಳೀಯ ಭಾಷೆಯಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳಲು ಈ ಪುಸ್ತಕ ಸಹಾಯ ಮಾಡುತ್ತದೆ. ಇದರಿಂದ ಕಾನೂನು ಕುರಿತು ತಿಳುವಳಿಕೆ ಮೂಡಿಸುತ್ತದೆ ಎಂದರು.

ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಪುಸ್ತಕ ಪರಿಚಯಿಸಿದರು.
ಸಂಸ್ಕೃತಿ ಪ್ರಕಾಶನ ಪ್ರಕಾಶಕ ಪ್ರಭಾಕರ ಜೋಶಿ ಪ್ರಾಸ್ತಾವಿಕ ಮಾತನಾಡಿದರು.
ವಕೀಲರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಚಕ್ರಪಾಣಿ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ರಾಮರೆಡ್ಡಿ ಪಾಟೀಲ, ಲೇಖಕ ರವೀಂದ್ರ ಇಂಜಳ್ಳಿಕರ್ ಇದ್ದರು. ಮಂಜುಳಾ ಚವ್ಹಾಣ ಪ್ರಾರ್ಥಿಸಿದರು. ನಾಗೇಶ ಮಿಟ್ಟಿ ಸ್ವಾಗತಿಸಿದರು. ಜಗನ್ನಾಥ ತರನಳ್ಳಿ ನಿರೂಪಿಸಿದರು.

sajidpress

Recent Posts

ಅಮಿತ್ ಶಾ ಹೇಳಿಕೆ ಖಂಡಿಸಿ 24ರಂದು ಕಲಬುರಗಿ ಬಂದ್

ಕಲಬುರಗಿ: ದಿನಾಂಕ: 17.12.2024 ರಂದು ಮಂಗಳವಾರ ರಾತ್ರಿ ರಾಜ್ಯ ಸಭೆಯಲ್ಲಿ ಸಂವಿಧಾನ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಕೇಂದ್ರದ ಗೃಹಸಚಿವ  ಅಮೀತ…

6 hours ago

ಧರಣಿ ಒಂಬತ್ತನೆ ದಿನಕ್ಕೆ ತಮ್ಮ ಕ್ಷೇತ್ರದ ಅಪೂರ್ಣ ಸೆತುವೆ ಪೂರ್ಣಗೋಳಿಸದ ಉಸ್ತುವಾರಿ ಸಚಿವರು ಅಂದೋಲಾ ಶ್ರೀ ಆಕ್ರೋಶ

ಕಲಬುರಗಿ: ಜೇವರ್ಗಿ ತಾಲ್ಲೂಕಿನ ನರಿಬೋಳ ಚಾಮನೂರು ಅಪೂರ್ಣ ಸೆತುವೆ ಪೂರ್ಣಗೋಳಿಸಲು ಆಗ್ರಹಿಸಿ ನರಿಬೋಳ ಚಾಮನೂರ ಗ್ರಾಮಸ್ಥರು ನಿರಂತರ ಧರಣಿಯನ್ನು ಹಗಲೂ…

7 hours ago

Sansitization Cum Capacity Building Programme On Counselling Techniques”. ಕಾರ್ಯಕ್ರಮ

ಶ್ರೀಮತಿ ಇಂದುಮತಿ ಚಾರಿಟೇಬಲ್ ಟ್ರಸ್ಟ್ (ರಿ) ಅಡಿಯಲ್ಲಿ ನಡೆಸಲಾಗುತ್ತಿರುವ " ಮಂದಹಾಸ" ಮನೋಸಾಮಾಜಿಕ ಪುನರ್ವಸತಿ ಕಾರ್ಯಕ್ರಮ ಕಲಬುರಗಿ ಹಾಗೂ ಜಿಲ್ಲಾ…

9 hours ago

Sansitization Cum Capacity Building Programme On Counselling Techniques

ಕಲಬುರಗಿ: ಶ್ರೀಮತಿ ಇಂದುಮತಿ ಚಾರಿಟೇಬಲ್ ಟ್ರಸ್ಟ್ (ರಿ) ಅಡಿಯಲ್ಲಿ ನಡೆಸಲಾಗುತ್ತಿರುವ " ಮಂದಹಾಸ" ಮನೋಸಾಮಾಜಿಕ ಪುನರ್ವಸತಿ ಕಾರ್ಯಕ್ರಮ ಕಲಬುರಗಿ ಹಾಗೂ…

10 hours ago

ಸುರಪುರ ತಾಲೂಕು ನಿವಾಸಿಗಳ ಸಭೆ ನಾಳೆ

ಕಲಬುರಗಿ: ಕಲಬುರಗಿ ನಗರದಲ್ಲಿ ನೆಲೆಸಿರುವ ಸುರಪುರ ತಾಲೂಕಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ೫ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಡಿ.೨೨ರಂದು…

17 hours ago

ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘ ಅಸ್ತಿತ್ವಕ್ಕೆ: ಐ ಕೆ ಪಾಟೀಲ್

ಕಲಬುರ್ಗಿ: ಶಿಕ್ಷಣ ಇಲಾಖೆ ಒಂದು ಆಲದ ಮರವಿದ್ದಂತೆ, ಅನೇಕರು ಆಶ್ರಯ ಪಡೆದಿರುತ್ತಾರೆ ಶಾಲಾ ಶಿಕ್ಷಣ ಇಲಾಖೆಯ ವಿವಿಧ ವೃಂದಗಳಲ್ಲಿ ಖಾಯಂ…

17 hours ago