ಇ-ಮೀಡಿಯಾ ಲೈನ್ ನ್ಯೂಸ್
ಕಲಬುರಗಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ. ಡೆತ್ ನೋಟ್ ನಲ್ಲಿ ಅವರ ಹೆಸರು ಉಲ್ಲೇಖಲಾಗಿಲ್ಲ ಆದರೂ ಅವರ ವಿರುದ್ದ ಬಿಜೆಪಿಯ ಷಡ್ಯಂತ್ರ ರೂಪಿಸುತ್ತಿದ್ದು ಪ್ರಕರಣವನ್ನು ಸಿಬಿಐ ವಹಿಸುವಂತೆ ಒತ್ತಾಯಿಸುತ್ತಿದೆ. ಇದು ಖಂಡನಾರ್ಹವಾಗಿದೆ ಎಂದು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ವಹಿಸಲಾಗಿದೆ. ರಾಜ್ಯದ ಪೊಲೀಸರು ಸಮರ್ಥರಿದ್ದು ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರಲಿದ್ದಾರೆ. ಹಾಗಾಗಿ ಸಿಬಿಐ ಗೆ ವಹಿಸುವ ಪ್ರಮೇಯವೇ ಇಲ್ಲ ಹಾಗೂ ಸಚಿವರು ರಾಜೀನಾಮೆ ನೀಡುವ ಅವಶ್ಯಕತೆಯೇ ಇಲ್ಲ.
ಪ್ರಿಯಾಂಕ್ ಖರ್ಗೆ ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಸಚಿವರಾಗಿದ್ದು ಅವರಿಗೆ ವಹಿಸಿದ ಐಟಿ ಬಿಟಿ ಖಾತೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು ಚಿಕ್ಕ ವಯಸ್ಸಿನಲ್ಲಿಯೇ ಅವರು ರಾಜಕೀಯವಾಗಿ ಎತ್ತರಕ್ಕೆ ಏರುತ್ತಿರುವುದನ್ನು ಸಹಿಸಲಾಗದೇ ಬಿಜೆಪಿ ನಾಯಕರು ಹೊಟ್ಟೆಕಿಚ್ಚಿನಿಂದ ಈ ಪ್ರಕರಣವನ್ನು ತಮ್ಮ ಕೀಳು ಮಟ್ಟದ ರಾಜಕೀಯಕ್ಕೆ ಬಳೆಸುತ್ತಿದ್ದಾರೆ. ಇದು ಅತ್ಯಂತ ಹೇಯವಾಗಿದ್ದು ಖಂಡನಾರ್ಹವಾಗಿದೆ.
ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಹಾಗೂ ವೈಯಕ್ತಿಕವಾಗಿ ನಾನು ಸಚಿವರ ಬೆನ್ನಿಗಿದ್ದೇವೆ. ತನಿಖೆಯ ನಂತರ ಬಿಜೆಪಿಯ ಷಡ್ಯಂತ್ರ ಬಯಲಿಗೆ ಬರಲಿದೆ. ವಿರೋಧ ಪಕ್ಷವಾಗಿ ವೈಫಲ್ಯವಾಗಿರುವ ಬಿಜೆಪಿ ಸುಳ್ಳು ಅಪಾದನೆ ಮಾಡುತ್ತಾ ಸರ್ಕಾರಕ್ಕೆ ಹಾಗೂ ಸಚಿವರಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದೆ. ಬಿಜೆಪಿಯ ಎಲ್ಲ ಆಟಗಳನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಸರಿಯಾದ ಪಾಠ ಕಲಿಸಲಿದ್ದಾರೆ.
ಇ-ಮೀಡಿಯಾ ಲೈನ್ ಕಲಬುರಗಿ: ನಗರದ ಸೂಪರ್ ಮಾರ್ಕೆಟ್ ಸಿಟಿ ಬಸ್ ನಿಲ್ದಾಣದ ಹತ್ತಿರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಭಗ್ನಗೊಳಿಸಿರುವುದು…
ಇ-ಮೀಡಿಯಾ ಲೈನ್ ನ್ಯೂಸ್ ಕಲಬುರ್ಗಿ: ಜಿಲ್ಲೆಯ ಮತ್ತು. ಕಮಲಾಪುರ ತಾಲೂಕ ಸಂಯುಕ್ತ ಆಶ್ರಯದಲ್ಲಿ. ಕಲ್ಬುರ್ಗಿ ತಾಲೂಕ ಸಭಾಂಗಣದಲ್ಲಿ. ಕಮಲಾಪುರ ತಾಲೂಕಿನ…
ವಚನ ವಿಜಯೋತ್ಸವ ಫೆ. 10, 11 ಹಾಗೂ 12ರಂದು ಇ- ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಬಸವ ಸೇವಾ ಪ್ರತಿಷ್ಠಾನದ…
ವಚನ ವಿಜಯೋತ್ಸವ ಫೆ. 10, 11 ಹಾಗೂ 12ರಂದು ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಬಸವ ಸೇವಾ ಪ್ರತಿಷ್ಠಾನದ ಅಡಿಯಲ್ಲಿ…
ಕಲಬುರಗಿ: ಶ್ರೀಮತಿ ಜ್ಯೋತಿ ಉಪಳಾಂವಕರ ಅವರಿಗೆ ರೈತ ಉದ್ಯಮಿ ಅವ್ವ ಎನ್ನಲು ಹೆಮ್ಮೆ ಎನಿಸುತ್ತದೆ. ಏಕೆಂದರೆ ಕಳೆದ ೫-೬ ವರ್ಷಗಳಿಂದ…
ಇ-ಮೀಡಿಯಾ ಲೈನ್ ನ್ಯೂಸ್ ಅಫಜಲಪುರ: ಪ್ರತಿಯೊಬ್ಬರು ತಮ್ಮ ತಂದೆ ತಾಯಂದಿರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕೆಂದು ಲೋಕೋಪಯೋಗಿ ಇಲಾಖೆಯ ನಿವೃತ್ತ…