ಬಿಸಿ ಬಿಸಿ ಸುದ್ದಿ

ಹುಣಸಗಿ ಮಿನಿ ವಿಧಾನಸೌಧ ಕಟ್ಟಡದ ನಿವೇಶನ ಬದಲಿಗೆ ಮಾಜಿ ಶಾಸಕ ಆರ್‌ವಿಎನ್ ಒತ್ತಾಯ

ಸುರಪುರ: ನೂತನ ಹುಣಸಗಿ ತಾಲೂಕು ಕೇಂದ್ರದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ಪಟ್ಟಣದ ಹೊರವಲಯದ ನಾರಾಯಣಪುರ ರಸ್ತೆಯಲ್ಲಿರುವ ಕನಗಂಡನ ಹಳ್ಳಿ ಗುಡ್ಡ ಪ್ರದೇಶದಲ್ಲಿ ೧೦ ಎಕರೆ ಭೂಮಿಯನ್ನು ಜಿಲ್ಲಾಧಿಕಾರಿಯವರು ಮಂಜೂರು ಮಾಡಿರುವುದು ತಿಳಿದುಬಂದಿದ್ದು, ಈ ಜಾಗವು ತಾಲೂಕು ಕೇಂದ್ರದಿಂದ ಸುಮಾರು ಐದು ಕಿ.ಮೀ ದೂರವಿದ್ದು ಈ ಜಾಗದಲ್ಲಿ ನಿರ್ಮಿಸಿದರೆ ಸಾರ್ವಜನಕರಿಗೆ ತೊಂದರೆ ಯಾಗಲಿದೆ.

ಆದ್ದರಿಂದ ಕನಗಂಡನ ಹಳ್ಳಿ ಗುಡ್ಡದ ಹತ್ತಿರ ಮಿನಿ ವಿಧಾನಸೌಧ ಕಟ್ಟಡ ನಿರ್ಮಿಸುವುದನ್ನು ಕೈಬಿಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರದು ಒತ್ತಾಯಿಸಿರುವುದಾಗಿ ಮಾಜಿ ಶಾಸಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಹುಣಸಗಿ ಪಟ್ಟಣದಲ್ಲಿ ಕೆಬಿಜೆಎನ್‌ಎಲ್‌ಗೆ ಸೇರಿದ ಯುಕೆಪಿ ಕ್ಯಾಂಪಿನ ಹಿಂದುಗಡೆ ೧೦೦ ಎಕರೆಗೂ ಹೆಚ್ಚು ಪ್ರದೇಶವು ಲಭ್ಯವಿದ್ದು ಈ ಜಾಗವು ಯಾವುದೇ ಉಪಯೋಗವಿಲ್ಲದೇ ಬಿದ್ದಿದೆ, ಕೂಡಲೇ ಈ ಪ್ರದೇಶದಲ್ಲಿ ೧೦ ಎಕರೆ ಜಾಗ ಲಭ್ಯವಾಗುವುದರಲ್ಲಿ ಯಾವುದೇ ತೊಂದರೆ ಇರುವದಿಲ್ಲ.

ಈಗಾಗಲೇ ಹಲವಾರು ವರ್ಷಗಳಿಂದ ಯುಕೆಪಿ ಕ್ಯಾಂಪ್‌ನಲ್ಲಿ ಸರಕಾರಿ ಆಸ್ಪತ್ರೆ, ಪೋಲಿಸ ಕಚೇರಿ ಸೇರಿದಂತೆ ಅನೇಕ ಸರಕಾರಿ ಕಚೇರಿಗಳು ನಡೆಯುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ, ಈ ಎಲ್ಲಾ ಸರಕಾರಿ ಕಚೇರಿಗಳು ಹುಣಸಗಿ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಯುಕೆಪಿ ಕ್ಯಾಂಪ್‌ನಲ್ಲಿ ನಡೆಯುತ್ತಿರುವಾಗ ಮಿನಿ ವಿಧಾನಸೌಧವನ್ನು ನಿರ್ಮಿಸಲು ಇದೇ ಯುಕೆಪಿ ಕ್ಯಾಂಪ್‌ನಲ್ಲಿ ಸಾಕಷ್ಟು ಜಾಗವು ಲಭ್ಯವಿದ್ದರೂ ಪಟ್ಟಣದ ಹೊರ ವಲಯದಲ್ಲಿ ನಿರ್ಮಿಸಲು ಹೊರಟಿರುವುದು ಯಾವುದೋ ದುರುದ್ದೇಶದಿಂದ ಕೂಡಿರುವುದು ಕಂಡು ಬರುತ್ತಿದೆ, ಯುಕೆಪಿ ಕ್ಯಾಂಪ್‌ಗೆ ಸೇರಿದ ಜಾಗೆಯಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ೧೦ ಎಕರೆ ಜಾಗ ಲಭ್ಯವಿದ್ದು ಕೂಡಲೇ ತಾವುಗಳು ಈ ವಿಷಯವನ್ನು ಗಂಭೀರಾಗಿ ಪರಿಗಣಿಸಿ ಈಗ ಮಂಜೂರು ಮಾಡಿರುವ ೧೦ ಎಕರೆ ಕನ್ನಗಂಡನಹಳ್ಳಿ ಬಳಿಯಲ್ಲಿ ಮಿನಿ ವಿಧಾನಸೌಧ ನಿರ್ಮಿಸುವದನ್ನು ಕೈಬಿಟ್ಟು ಹುಣಸಗಿ ಪಟ್ಟಣದ ಒಳ ವ್ಯಾಪ್ತಿಯಲ್ಲಿರುವ ಯುಕೆಪಿ ಕ್ಯಾಂಪ್‌ನಲ್ಲಿ ೧೦ ಎಕರೆಯನ್ನು ಜಾಗವನ್ನು ಮಂಜೂರಗೊಳಿಸಿ ನಿಯೋಜಿತ ಮಿನಿ ವಿಧಾನಸೌಧವನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕುಂದು ಕೋರಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

24 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago