ಕಲಬುರಗಿ ಸಿ.ಯು.ಕೆಯಲ್ಲಿ ಕನ್ನಡ ರಾಜೋತ್ಸವ: ವಿದ್ಯಾರ್ಥಿಗಳಿಂದ 100 ಅಡಿ ಉದ್ದದ ಕನ್ನಡ ಧ್ವಜದ ಪತಸಂಚಲನ

ಕಲಬುರಗಿ: ಇಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ೬೪ ಕನ್ನಡ ರಾಜೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸುಮಾರು 100 ಅಡಿ ಉದ್ದದ  ಕನ್ನಡ ಧ್ವಜವನ್ನು ಹಿಡಿದು ವಿಶ್ವವಿದ್ಯಾಲಯದಾದ್ಯಂತ ವಾದ್ಯಗಳೊಂದಿಗೆ ಪತಸಂಚಲನವನ್ನು ಮಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಪ್ರಾಧ್ಯಾಪಕರು ಮತ್ತು ಚಿಂತಕರಾದ ಪ್ರೊ. ಆರ್.ಕೆ. ಹುಡುಗಿಯವರು ಕನ್ನಡ ರಾಜೋತ್ಸವದ ಕುರಿತು ಮಾತನಾಡಿ ’ಇಂದು ಸಮಾಜದಲ್ಲಿ ಮನುಷ್ಯತ್ವದ ಕೊರತೆ ಎದ್ದುಕಾಣುತ್ತಿದೆ, ಏಕೆಂದರೆ ಸುಮಾರು ಶತಮಾನಗಳಿಂದ ನಮಗೆ ಅನ್ನ ಹಾಕುತ್ತಿರುವ ರೈತರು ಇಂದು ಆತ್ಮಹತ್ಯಮಾಡಿಕೊಳ್ಳುವಂತ ಪರಿಸ್ಥಿತಿ ಬಂದೊದಗಿದೆ. ಇಲ್ಲಿಯವರೆಗೆ ಸುಮಾರು ೩,೫೭,೦೦೦ ರೈತರು ಆತ್ಮಹತ್ಯಮಾಡಿಕೊಂಡಿದ್ದಾರೆ. ರಾಜಕಾರಣಿಗಳು ಸತ್ತಾಗ ಶೋಕಾಚರಣೆ ಮಾಡುವ ನಾವು ರೈತರ ಸಾವಿನ ಬಗ್ಗೆ ನಿರ್ಲಕ್ಷ್ಯ ಭಾವನೆಯನ್ನು ಹೊಂದಿದ್ದೇವೆ ಇದು ಅತ್ಯಂತ ದುರದುಷ್ಟಕರ. ಇದರೊಂದಿಗೆ ಇಂದು ನಮ್ಮ ಸಮಾಜದಲ್ಲಿ ಎಲ್ಲೇಡೆ ಜಾತಿ ಬಿಜ ಪಸರಿಸಿ ಮಾನವಿಯತೆ ಮಾಯವಾಗಿದೆ’ ಎಂದು ಹೇಳಿದರು.

’ಫಜಲ್ ಅಲಿ ವರದಿ ಆಧರಿಸಿ’ ಭಾಷಾವಾರು ಪ್ರಾಂತ್ಯ ರಚನೆ ಆಗಿ  ನವೆಂಬರ್ ೧, ೧೯೫೬ರಂದು ಕನ್ನಡ ಮಾತನಾಡುವ ಜನರನ್ನೊಳಗೊಂಡ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು. ನಂತರ ೧೯೭೩ರಲ್ಲಿ ಇದನ್ನೂ ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡಲಾಯಿತು. ಭಾಷಾವಾರು ಪ್ರಾಂತ್ಯ ರಚನೆಯಲ್ಲಿ ಗ್ರಾಮವನ್ನು ಆಧಾರವಾಗಿಟ್ಟುಕೊಳ್ಳದೆ ತಾಲೂಕನ್ನು ಆಧಾರವಾಗಿಟ್ಟುಕೊಂಡು ರಾಜ್ಯಗಳ ರಚನೆ ಮಾಡಿರುವುದರಿಂದ ಕನ್ನಡ ಮಾತನಾಡುವ ಅನೇಕ ಗ್ರಾಮಗಳು ಬೇರೆ ರಾಜ್ಯಗಳಿಗೆ ಹೋಗಿವೆ. ಭಾಷೆ ಎಂಬುದು ಕೇವಲ ಸಂವಹನ ಮಾಧ್ಯಮ ಅಷ್ಟೇ ಅಲ್ಲದೆ ಅದು ಒಂದು ಸಂಸ್ಕೃತಿಯ ಸಂಕೇತ ನಮ್ಮ ಪೂರ್ವಜರು ಕರ್ನಾಟಕ ಏಕೀಕರಣದ ಮೂಲಕ ಸರ್ವಜನಾಂಗದ ಶಾಂತಿಯ ತೋಟದ ಕನ್ನಡ ನಾಡಿನ ಕನಸನ್ನು ಕಂಡಿದ್ದರು. ಆದ್ದರಿಂದ ನಾವೂ ನಿವೇಲ್ಲರು ಇಂತಹ ಒಂದು ನಾಡನ್ನು ಸೃಷ್ಟಿಮಾಡಲು ಶ್ರಮಿಸಬೇಕಾದ ಅವಶ್ಯಕತೆ ಇದೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಬರುವುದರಿಂದ ಅವರಿಗೆ ನಮ್ಮ ಭಾಷೆ ಕಲಿಸುವ ಮೂಲಕ ಹಾಗೂ ಅವರ ಭಾಷೆ ನಾವೂ ಕಲಿಯುವ ಮೂಲಕ ಒಂದು ಸೌಹಾರ್ದ ನಾಡನ್ನು ಕಟ್ಟುವ ಜವಬ್ದಾರಿ ನಿಮ್ಮೇಲ್ಲರ ಮೇಲಿದೆ ಎಂದು ಹೇಳಿದ್ದರು.

ಮಾತೃ ಭಾಷೆಯನ್ನು ಪ್ರೀತಿಸುವುದು ಎಂದರೆ ಬೇರೆ ಭಾಷ್ಯಗಳನ್ನು ದ್ವೇಷಿಸುವುದಲ್ಲ, ಬದಲಾಗಿ ಎಲ್ಲಾ ಭಾಷೆಗಳನ್ನು ಕಲಿತು ಸೌಹಾರ್ಧತೆಯಿಂದ ಬದುಕುವ ಅವಶ್ಯಕತೆ ಇದೆ. ಬಡವರು ಮತ್ತು ದಿನ ದಲಿತರು ಮುಂದೆ ಬರಬೇಕಾದರೆ ಶಿಕ್ಷಣ ಒಂದೇ ದಾರಿ, ಆದ್ದರಿಂದ ತಾವೇಲ್ಲರು ಕಷ್ಟಪಟ್ಟು ಓದಿ ವಿದ್ಯಾವಂತರಾಗಿ ಜೀವನದಲ್ಲಿ ತಾವೂ ಅಂದುಕೊಂಡಿದ್ದನ್ನು ಸಾಧಿಸುವ ಛಲವನ್ನು ಮೈಗೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ವಿಚಾರಗಳು ಸಮಾಜವನ್ನು ಆಳುತ್ತವೆ, ಅದರಲ್ಲಿಯು ಆಳುವ ವರ್ಗದ ವಿಚಾರಗಳು ಸಮಾಜವನ್ನು ಆಳುತ್ತವೆ. ನಾವೂ ಅವುಗಳನ್ನು ಅಂಧ ಭಕ್ತಿಯಿಂದ ಅವುಗಳನ್ನು ಅನುಸರಿಸದೆ ವಿಚಾರ ಪೂರ್ವಕ ಮತ್ತು ಬಹುಸಂಸ್ಕೃತಿಯ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾನ್ಯ ಸಮ-ಕುಲಪತಿಗಳಾದ ಪ್ರೊ. ಜಿ.ಆರ್.ನಾಯಕ್ ಅವರು ಮಾತನಾಡಿ ’ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ರಾಜ್ಯವನ್ನು ಪ್ರತಿನಿಧಿಸುವ ಏಕೈಕ ಉನ್ನತ ಶಿಕ್ಷಣವಾಗಿದ್ದು ರಾಜ್ಯದ ಸರ್ವೋತಮುಖ ಅಭಿವೃದ್ದಿಗೆ ತನ್ನ ಕೊಡುಗೆಯನ್ನು ನಿಡಲು ಸದ ಕಟಿಬದ್ದವಾಗಿ. ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ರಾಜ್ಯದ ಅಭಿವೃದ್ದಿಯ ಕುರಿತು ತಮ್ಮ ಸಂಶೋಧನೆ ಮತ್ತು ಶಿಕ್ಷಣದ ಮೂಲಕ ಸದಾ ಪ್ರಯತ್ನಿಸುತ್ತಿದ್ದಾರೆ ಅಲ್ಲದೆ ಅವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ ಶ್ರೀ ವಿಜಯ ಪ್ರಶಸ್ತಿ ಪಡೆದ ಡಾ. ಅಪ್ಪಗೇರೆ ಸೊಮಶೇಖರ, ಹಾ.ಮಾ ನಾಯಕ ಪ್ರಶಸ್ತಿ ಪಡೆದ ಡಾ. ಬಸವರಾಜ ಕೊಡಗುಂಟಿ ಅವರನ್ನು ಹಾಗೂ ವಿವಿಧ ಕತೆ ಕವನ ಸಂಕಲನ ಹಾಗೂ ಲೇಖನ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕುಲಸಚಿವರಾದ ಪ್ರೊ. ಮುಸ್ತಾಕ್ ಅಹಮ್ಮದ ಐ ಪಟೇಲ ಎಲ್ಲರನ್ನು ಸ್ವಾಗತಿಸಿದರೆ, ಈರಣ್ಣ ಗೌಡ ಅವರು ಕಾರ‍್ಯಕ್ರಮವನ್ನು ನಿರೂಪಿಸಿದರು ಹಾಗೂ ಸಂಗಣ್ಣ ಗೌಡ ವಂದಾನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

6 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

6 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

6 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

6 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

7 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

7 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420