ಸುರಪುರ: ಇತ್ತೀಚೆಗೆ ಲಿಂಗೈಕ್ಯರಾದ ಮಾಜಿ ಸಚಿವ ವೈಜನಾಥ ಪಾಟೀಲರಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು.ಸಭೆಯ ಆರಂಭದಲ್ಲಿ ವೈಜನಾಥ ಪಾಟೀಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ,ನಂತರ ಎರಡು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ನಂತರ ಅನೇಕ ಮುಖಂಡರು ಮಾತನಾಡಿ,ವೈಜನಾಥ ಪಾಟೀಲರು ಕಲ್ಯಾಣ ಕರ್ನಾಟಕ ಭಾಗದ ಅಭಿವೃಧ್ಧಿಗಾಗಿ ೩೭೧(ಜೆ) ಕಲಂ ಜಾರಿಗಾಗಿ ದಶಕಗಳ ಕಾಲ ಹೋರಾಟ ಮಾಡಿದ ಮಹನಿಯ.ಅವರು ಕಲ್ಯಾಣ ಕರ್ನಾಟಕ ಭಾಗದ ಸೂರ್ಯನಿದ್ದಂತೆ.ಅವರು ಹೋರಾಟದಿಂದ ಜಾರಿಗೊಂಡಿರುವ ೩೭೧ಜೆ ಇಂದಾಗಿ ಸಾವಿರಾರು ಯುವಕರಿಗೆ ಉದ್ಯೋಗದಲ್ಲಿ ಮೀಸಲಾತಿ,ಈ ಭಾಗದ ಅಭೀವೃಧ್ಧಿಗೆ ವಿಶೇಷ ಅನುದಾನ ಮತ್ತು ವಿದ್ಯಾರ್ಥಿಗಳಿಗೂ ಓದಿಗೆ ಹೆಚ್ಚಿನ ಅನುಕೂಲ ದೊರೆತಂದಾಗಿದೆ ಎಂದರು.
ವೈಜನಾಥ ಪಾಟೀಲರು ಕೇವಲ ಈ ಭಾಗದ ಅಭಿವೃಧ್ಧಿಗೆ ಮಾತ್ರವಲ್ಲದೆ ಲಿಂಗಾಯತ ಧರ್ಮಪರ ಹೋರಾಟ,ರೈತಪರ ಹೋರಾಟ,ಸಮಾಜವಾದದ ಪರವಾದ ಹೋರಾಟ ಹೀಗೆ ಹತ್ತು ಹಲವು ಯಶಸ್ವಿ ಹೋರಾಟಗಳಲ್ಲಿ ಭಾಗವಹಿಸಿದ್ದರು.ಅಲ್ಲದೆ ಅವರು ಎರಡುಬಾರಿ ಸಚಿವರಾಗಿ ಸೇವೆಸಲ್ಲಿಸಿದವರು.ಎರಡುಬಾರಿ ಸಚಿವರಾದರು ಒಂದು ಚೆಂದದ ಮನೆಯನ್ನು ಕಟ್ಟಿಕೊಳ್ಳಲಾಗದೆ ಹಳೆಯ ಮನೆಯಲ್ಲಿಯೆ ಜೀವಿಸಿದಂತ ಪ್ರಾಮಾಣಿಕ ರಾಜಕಾರಣಿಯಾಗಿದ್ದರು.ಇಂತಹ ಮಹನಿಯರು ಇಂದು ನಮ್ಮನ್ನೆಲ್ಲ ಅಗಲಿರುವುದು ಈ ಭಾಗಕ್ಕೆ ತುಂಬಲಾರದ ನಷ್ಟವುಂಟಾಗಿದೆ.ಅವರು ೩೭೧ ಜೆ ಜಾರಿಗಾಗಿ ಹೋರಾಟ ಮಾಡಿದ್ದಾರೆ,ಆದರೆ ಇದು ಇನ್ನೂ ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ.ಆದ್ದರಿಂದ ನಾವೆಲ್ಲರು ನಿರಂತರವಾಗಿ ಹೋರಾಟ ಮಾಡುವ ಮೂಲಕ ೩೭೧ ಜೆ ಸಂಪೂರ್ಣ ಜಾರಿಗೊಳಿಸಲು ಒತ್ತಾಯಿಸೋಣ ಅದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಶ್ರದ್ದಾಂಜಲಿಯಾಗಲಿದೆ ಎಂದರು.
ಸಭೆಯಲ್ಲಿದ್ದ ಕಸಾಪ ಮಾಜಿ ಅಧ್ಯಕ್ಷ ಶಾಂತಪ್ಪ ಬೂದಿಹಾಳ,ವಕೀಲ ನಿಂಗಣ್ಣ ಚಿಂಚೋಡಿ,ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ,ಅರ್ಷದ ದಖನಿ, ಸಾಹಿತಿಗಳಾದ ಇಕ್ಬಾಲ ರಾಹಿ,ಜಯಲಲಿತ ಪಾಟೀಲ,ಬೀರಣ್ಣ ಆಲ್ದಾಳ,ಡಾ. ಯಲ್ಲಪ್ಪ ನಾಯಕ,ಎಪಿಎಫ್‌ನ ಅನ್ವರ ಜಮಾದಾರ,ಪಂಡೀತ ನಿಂಬುರೆ,ಬಸವರಾಜ ಜಮದ್ರಖಾನಿ,ಬಸವರಾಜಪ್ಪ ನಿಷ್ಠಿ ದೇಶಮುಖ ಹಾಗು ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿದರು.ಕಸಾಪ ಖಜಾಂಚಿ ದೇವು ಹೆಬ್ಬಾಳ ನಿರೂಪಿಸಿದರು,ರಾಜಶೇಖರ ದೇಸಾಯಿ ವಂದಿಸಿದರು.
ನಬಿಲಾಲ ಮಕಾಂದಾರ,ಪ್ರಕಾಶಚಂದ್ ಜೈನ್,ಹಣಮಂತ ಬೊಮ್ಮನಹಳ್ಳಿ,ಪ್ರಕಾಶ ಅಲಬನೂರ,ಯಲ್ಲಪ್ಪ ಹುಲಕಲ್,ವೆಂಕಟೇಶ ಪಾಟೀಲ,ರಾಘವೇಂದ್ರ ಭಕ್ರಿ,ಮೋಹಿನ್ ಪಗಡಿ,ಭೀಮಣ್ಣ ತೆಳಗಿನಮನಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…