ಬಿಸಿ ಬಿಸಿ ಸುದ್ದಿ

ವಿಚಾರಗೋಷ್ಠಿ: ಶರತ್ ಸಾಹಿತ್ಯ ಸವಾಲುಗಳ ಸಂಘರ್ಷ: ನಾಗಮ್ಮಾಳ್

ವಾಡಿ: ಮಹಿಳೆಯರನ್ನು ಶೋಷಣೆಗೊಳಪಡಿಸಿದ ಧಾರ್ಮಿಕ ಅಂಧಶ್ರದ್ಧೆಗಳ ವಿರುದ್ಧ ಗಟ್ಟಿ ಸಾಹಿತ್ಯ ಬರೆಯುವ ಮೂಲಕ ಹೋರಾಡುವ ಮನಸ್ಸುಗಳಲ್ಲಿ ಸವಾಲುಗಳ ಸಂಘರ್ಷ ಸೃಷ್ಠಿಸಿದ ಮಹಾನ್ ಸಾಹಿತಿ ಶರತ್‌ಚಂದ್ರ ಚಟರ್ಜಿ ಅವರು ಬರಹ ಲೋಕದ ಆದರ್ಶ ವ್ಯಕ್ತಿತ್ವವಾಗಿದ್ದಾರೆ ಎಂದು ಮಹಿಳಾ ಹೋರಾಟಗಾರ್ತಿ, ರೈತ ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಖಜಾಂಚಿ ವ್ಹಿ.ನಾಗಮ್ಮಾಳ್ ಹೇಳಿದರು.

ಶ್ರೇಷ್ಠ ಕಾದಂಬರಿಕಾರ ಶರತ್‌ಚಂದ್ರ ಚಟರ್ಜಿ ಅವರ ೧೪೪ನೇ ಜನ್ಮ ದಿನಾಚರಣೆ ನಿಮಿತ್ತ ಪಟ್ಟಣದ ಮಲ್ಲಿಕಾರ್ಜುನ ಶಾಲೆಯಲ್ಲಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಮತ್ತು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಶರತ್ ಸಾಹಿತ್ಯ ಕುರಿತ ವಿಚಾರಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಬಂಗಾಳ ಮೂಲದ ಶರತ್‌ಚಂದ್ರರ ಹಲವು ಕಾದಂಬರಿಗಳು ಆಂಗ್ಲಭಾಷೆಯಿಂದ ಕನ್ನಡಕ್ಕೆ ತರ್ಜೂಮೆಯಾಗಿವೆ. ಅಧಿಕಾರ, ಶೇಷ ಪ್ರಶ್ನೆ, ಶ್ರೀಕಾಂತ, ಮಹೇಶ ಇತ್ಯಾದಿ ಪುಸ್ತಕಗಳು ಓದುಗರನ್ನು ಜಾಗೃತರನ್ನಾಗಿ ಮಾಡುತ್ತವೆ. ಸಾಮಾಜಿಕ ಸಮಸ್ಯೆಗಳ ವಿರುದ್ಧ ಮಾತನಾಡುವ ಮನೋಭಾವ ಸೃಷ್ಠಿಸುತ್ತವೆ. ಅನ್ಯಾಯದ ವಿರುದ್ಧ ಸಿಡಿದೇಳುವ ಆಕ್ರೋಶ ಹುಟ್ಟಿಸುತ್ತವೆ ಎಂದರು.

ವರ್ಣಾಶ್ರಮ ವ್ಯವಸ್ಥೆಯ ಆಚರಣೆಗಳನ್ನು ಸಾಹಿತ್ಯದ ಮೂಲಕ ಖಂಡಿಸಿದ ಶರತ್‌ಚಂದ್ರರು, ವಿಧವಾ ವಿವಾಹ, ಸತಿಸಹಗಮನ ಪದ್ಧತಿ ವಿಷಯಗಳನ್ನು ಲೇಖನಿ ಮೂಲಕ ಪ್ರಾಸ್ತಾಪಿಸಿ ಸೋಷಣೆಯ ಹಲವು ಮುಖಗಳನ್ನು ಅನಾವರಣಗೊಳಿಸಿದ್ದಾರೆ. ಬಂಗಾಳದಲ್ಲಿ ಬ್ರಿಟೀಷರ ವಿರುದ್ಧ ಜನ ಹೋರಾಟ ಬೆಳೆಯಲು ಶರತ್‌ಚಂದ್ರ ಸಾಹಿತ್ಯ ಪ್ರೇರಣೆಯಾಗಿದೆ. ದೇಶದ ನಾನಾ ಭಾಷೆಗಳಿಗೆ ಭಾಷಾಂತರಗೊಂಡ ಶರತ್ ಸಾಹಿತ್ಯ ಓದುಗರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇಂಥಹ ಪ್ರಗತಿಪರ ಸಾಹಿತಿಗಳ ಲೇಖನಗಳು ಪಠ್ಯಪುಸ್ತಕಗಳಾಗಿ ವಿದ್ಯಾರ್ಥಿಗಳ ಮಧ್ಯೆ ಹರಿದಾಡಿದರೆ ಸಂಚಲನ ಮೂಡುತ್ತದೆ ಎಂದು ವಿವರಿಸಿದರು.

ಅತಿಥಿಯಾಗಿದ್ದ ನಾಲವಾರ ವಲಯ ಸಂಪನ್ಮೂಲ ವ್ಯಕ್ತಿ (ಬಿಆರ್‌ಪಿ) ದತ್ತಪ್ಪಾ ಡೋಂಬಳೆ ಮಾತನಾಡಿ, ಸಮಾಜವನ್ನು ಬಡಿದೆಚ್ಚರಿಸುವ ಸಾಹಿತಿಗಳಿಗೆ ತೊಂದರೆಗಳು ಹೆಚ್ಚು. ವ್ಯವಸ್ಥೆಯ ಬದಲಾವಣೆಗೆ ನಿಂತ ಬರಹಗಾರರು ಪ್ರತಿಗಾಮಿ ಶಕ್ತಿಗಳ ಪ್ರತಿರೋಧಗಳನ್ನು ಮೆಟ್ಟಿನಿಂತು ಧೈರ್ಯ ಪ್ರದರ್ಶಿಸಿದ್ದಾರೆ. ಇಂಥಹ ಗಟ್ಟಿ ಮನಸ್ಸಿನ ಸಾಹಿತಿಗಳು ನಮ್ಮ ಮಧ್ಯೆ ಇದ್ದಾರೆ. ಅವರನ್ನು ಪೋಷಿಸುವ ಕೆಲಸವಾಗಬೇಕಿದೆ. ಅಂದಾಗ ಮಾತ್ರ ಮನುಷ್ಯ ಸಮಾಜ ಮುನ್ನಡೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಿಕ್ಷಣ ಉಳಿಸಿ ಸಮಿತಿಯ ನಗರ ಸಂಚಾಲಕ ರಮೇಶ ಮಾಶಾಳ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಸಂಚಾಲಕ ವೀರಭದ್ರಪ್ಪ ಆರ್.ಕೆ, ಆವಿಷ್ಕಾರ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಮಡಿವಾಳಪ್ಪ ಹೇರೂರ, ಮುಖಂಡರಾದ ಯೇಶಪ್ಪ ಕೇದಾರ, ವಿ.ಪದ್ಮರೇಖಾ, ಶ್ರೀಶರಣ ಹೊಸಮನಿ, ರಾಘವೇಂದ್ರ ಅಲ್ಲಿಪುರ, ಹಿರಿಯರಾದ ವಿ.ಕೆ.ಕೆದಿಲಾಯ, ವಿಠ್ಠಲ ರಾಠೋಡ, ಸಿದ್ದಲಿಂಗ ಬಾಳಿ, ಸುನೀಲ ರಾಠೋಡ, ಹಾಜಪ್ಪ ಲಾಡ್ಲಾಪುರ, ಜಯದೇವ ಜೋಗಿಕಲ್ಮಠ ಪಾಲ್ಗೊಂಡಿದ್ದರು. ಶರಣು ವಿ.ಕೆ ಶರತ್‌ಚಂದ್ರರ ಕುರಿತು ಗೀತೆ ಪ್ರಸ್ತುತಪಡಿಸಿದರು. ಶರಣು ದೋಶೆಟ್ಟಿ ನಿರೂಪಿಸಿ, ವಂದಿಸಿದರು. ಇದೇ ವೇಳೆ ನಡೆದ ಸಾಹಿತ್ಯ ಸಂವಾದದಲ್ಲಿ ಚಂದ್ರು ಕರಣಿಕ, ದೇವಿಂದ್ರ ಕರದಳ್ಳಿ, ವಿಕ್ರಮ ನಿಂಬರ್ಗಾ ಹಾಗೂ ಮರಲಿಂಗ ಮಾಲಗತ್ತಿ ಅವರು ಪ್ರಶ್ನೆಗಳನ್ನು ಕೇಳಿ ಚರ್ಚೆ ನಡೆಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

19 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago