ಬಿಸಿ ಬಿಸಿ ಸುದ್ದಿ

ಸಂಗೀತಕ್ಕೆ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರ: ಹಿರೇಮಠ ಶ್ರೀ

ಆಳಂದ: ದೇಶದ, ನಾಡಿನ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಗದುಗಿನ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರವಾಗಿದೆ ಎಂದು ಆಳಂದ ಹಿರೇಮಠ ಸಂಸ್ಥಾನದ ಸಿದ್ದೇಶ್ವರ ಶಿವಾಚಾರ್ಯರು ಅಭಿಪ್ರಾಯಟ್ಟರು.
ಆಳಂದ ಪಟ್ಟಣದ ಸಂಸ್ಥಾನ ಹಿರೇಮಠ ಆವರಣದಲ್ಲಿ ಬುಧುವಾರ ಸಾಯಂಕಾಲ ಗುರು ಕುಮಾರೇಶ್ವರ ಸಾಂಸ್ಕೃತಿಕ ಕಲಾ ಸಂಘ ಬೋಳಣಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಯಾವ ವಯಸ್ಸಿನ ಬೇಧವೂ ಇಲ್ಲದೇ ಎಲ್ಲರನ್ನು ಸೆಳೆಯುವ ಶಕ್ತಿ ಸಂಗೀತಕ್ಕಿದೆ ಹೀಗಾಗಿ ಸಂಗೀತ ಎಂದರೆ ರಾಗ, ತಾಳ ಮತ್ತು ಲಯಗಳ ಸಂಗಮವಾಗಿದೆ ಆದರಿಂದ ಜೀವನವನ್ನು ಸಂಗೀತಕ್ಕೆ ಹೋಲಿಸಲಾಗುತ್ತದೆ ಎಂದು ನುಡಿದರು.  ಸರ್ಕಾರಗಳು, ಮಠ ಮಾನ್ಯಗಳು ಸಂಗೀತ ಕಲಾವಿದರನ್ನು ಪೋಷಿಸಿ ಬೆಳೆಸುವ ಮಹತ್ಕಾರ್ಯ ಮಾಡಬೇಕು ಯಾವ ನಾಡಿನಲ್ಲಿ ಸಾಹಿತಿಗಳು, ಕಲಾವಿದರು, ಕಲಾ ಪ್ರಕಾರಗಳು ಜೀವಂತವಾಗಿವಿಯೋ ಆ ನಾಡಿನಲ್ಲಿ ಸುಖ, ಸಮೃದ್ಧಿ ತುಂಬಿ ತುಳುಕುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಹಣಮಂತ ಶೇರಿ, ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿಯಲ್ಲಿ ಸಂಗೀತಕ್ಕೆ ವಿಶೇಷ ಸ್ಥಾನಮಾನವಿದೆ. ಸಂಗೀತದ ಕುರಿತು ಹೇಳುವ ಒಂದು ವೇದವೇ ನಮ್ಮಲ್ಲಿದೆ ಅದಕ್ಕಾಗಿ ಅಂತಹ ಕಲಾ ಪ್ರಕಾರವನ್ನು ಉಳಿಸಿ ಬೆಳಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ವೇದಿಕೆಯ ಮೇಲೆ ಅಣ್ಣಾರಾವ ಪಾಟೀಲ, ವಿಶ್ವನಾಥ ಘೋಡಕೆ, ಸಿದ್ರಾಮಯ್ಯ ಸ್ವಾಮಿ ಖಂಡಾಳ, ಗುರುಬಸಯ್ಯ ಸ್ವಾಮಿ ಸಂಗೋಳಗಿ, ಸಿದ್ದಾರಾಮ ಬಡೂರ, ಶಿವಶಂಕರ ಕಂಟೇಪಗೊಳ, ಹಣಮಂತರಾವ ಬೆಳಮಗಿ ಸಂಘದ ಅಧ್ಯಕ್ಷ ಶರಣಪ್ಪ ಬಿಲಗುಂದಿ ಇದ್ದರು. ಹಿರಿಯ ಸಂಗೀತ ಕಲಾವಿದ ಮಹಾದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಲ್ಲಿನಾಥ ಹಿರೇಮಠ, ರೇವಣಯ್ಯ ಸ್ವಾಮಿ ಸುಗಮ ಸಂಗೀತ, ಶಿವಶರಣಪ್ಪ ಪೂಜಾರಿ, ಅರುಣಕುಮಾರ ಪಾಟೀಲ ತೀರ್ಥ ವಚನ ಗಾಯನ, ಬಾಬುರಾವ ಪಾಟೀಲ, ಬಸವರಾಜ ಪೂಜಾರಿ ತತ್ವಪದ ಗಾಯನ, ವೆಂಕಟೇಶ ಆಳಂದ, ಸಿದ್ದಾರಾಮ ಮೂಲಗೆ ಜಾನಪದ ಗೀತೆ ಶಿವಶರಣಯ್ಯ ಮಠ, ಕವಿತಾ ಆಳಂದ ದಾಸವಾಣಿ, ಮಂಗಲಾಬಾಯಿ ಕಾರಭಾರಿ, ಶ್ರೀದೇವಿ ಬಟಗೇರಿ ಸಂಪ್ರದಾಯದ ಹಾಡುಗಳನ್ನು ನಡೆಸಿಕೊಟ್ಟರು. ಅಶೋಕ ಆಳಂದ, ಸುರೇಶ ಆಳಂದ, ಬಸವರಾಜ ಆಳಂದ ತಬಲಾ ಸಾಥ್ ನೀಡಿದರು. ರೇವಣಯ್ಯ ಸ್ವಾಮಿ ಸುಂಟನೂರ ಕಾರ್ಯಕ್ರಮ ನಿರ್ವಹಿಸಿದರು.

emedialine

Recent Posts

ಕೆ. ನೀಲಾ ಸಿಪಿಐ(ಎಂ) ಪಕ್ಷದ ಕಲಬುರಗಿ ಕಾರ್ಯದರ್ಶಿಯಾಗಿ ಪುನರಾಯ್ಕೆ

ಕಲಬುರಗಿ: ಸಿಪಿಐ(ಎಂ) ಪಕ್ಷವು ನವೆಂಬರ್ 24,25 ನವೆಂಬರ್ ರಂದು ಎರಡು ದಿನಗಳ ಕಾಲ ಜಿಲ್ಲಾ ಸಮ್ಮೇಳನ ನಡೆದು ಜಿಲ್ಲಾ ಕಾರ್ಯದರ್ಶಿಯಾಗಿ…

2 mins ago

3 ಲಕ್ಷ ವೆಚ್ಚದ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ ಚಾಲನೆ

ಕಲಬುರಗಿ: ಜಯನಗರ ಬಡಾವಣೆಯ ಹಳೆ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಗಾಗಿ ಕಲಬುರಗಿ ಬೀದರ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ ಇವರ…

6 mins ago

ಬಿಜೆಪಿ ಕಚೇರಿಯಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ: ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆ ಕಾರ್ಯಕ್ರಮ ವನ್ನು ಸವಿಧಾನ ಪ್ರತಿಯನ್ನು ಓದುವ ಮೂಲಕ ಸವಿಧಾನ ಶಿಲ್ಪಿ…

9 mins ago

ಸೇಡಂ ಮತಕ್ಷೇತ್ರದಲ್ಲಿ ನಡೆದ 4 ಗ್ರಾ.ಪಂ ಉಪಚುನಾವಣೆ ಬಿಜೆಪಿ ಗೆಲುವು

ಕಲಬುರಗಿ : ಸೇಡಂ ಮತಕ್ಷೇತ್ರದ ವ್ಯಾಪ್ತಿಯ ಕರ್ಚಖೇಡ, ಕಾನಗಡ್ಡ,ಮದನ, ಮುಧೋಳ ಗ್ರಾ.ಪಂ‌‌ನ ಉಪ ಚುನಾಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು‌ ಜಯ…

16 mins ago

ವಾಡಿ: ಬಿಜೆಪಿ ಕಛೇರಿಯಲ್ಲಿ 75 ನೇ ಸಂವಿಧಾನ ಸಮರ್ಪಣಾ ದಿನಾಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್…

20 mins ago

ನಿಧನ ವಾರ್ತೆ: ಅಲ್ ಹಜ್ ಶಮಶೋದ್ದಿನ ಬೀರಗಿ ಪಟೇಲ್

ಚಿಂಚೋಳಿ: ತಾಲೂಕಿನ‌ ಸಾಲೆಬೀರನಳ್ಳಿ ಗ್ರಾಮದ ನೀವೃತ ಮುಖ್ಯಗುರುಗಳಾದ ಅಲ್ ಹಜ್ ಶಮಶೋದ್ದಿನ ಬೀರಗಿ ಪಟೇಲ್ (86) ಮಂಗಳವಾರ ನಿಧನರಾದರು. ಅವರಿಗೆ…

23 mins ago