ಬಿಸಿ ಬಿಸಿ ಸುದ್ದಿ

ಫೇಕ್ ಫೇಸಬುಕ್ ಅಕೌಂಟ್ ಮೂಲಕ ಜಾಬ್ ನೀಡುವುದಾಗಿ ಲಕ್ಷಾಂತರ ಹಣ ದೋಚಿದ ಖದಿಮನ ಬಂಧನ: 3.20 ನಗದು ವಶ

ಕಲಬುರಗಿ: ಹುಡುಗಿಯ ಹೆಸರಿನಲ್ಲಿ ನಕಲು ಫೇಸಬುಕ್ ಅಕೌಂಟ್ ಸೃಷ್ಟಿಸಿ, ಅದರಲ್ಲಿ ಹುಡುಗಿಯರ ಫೋಟೊಗಳನ್ನು ಬಿಟ್ಟು ಆನಲೈನ್ ನಲ್ಲಿ ಜಾಬ್ ನೀಡುವುದಾಗಿ ನಂಬಿಸಿ ನಂತರ ತಾನು ಇನ್ಸ್‌ಪೆಕ್ಟರ್‌ ಸೈಬರ್ ಕ್ರೈಂ ಮುಂಬೈ ಅಂತ ಸುಳ್ಳು ಹೇಳಿ ನಿಮ್ಮ ಮೇಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ ನಿಮಗೆ ಅರೆಸ್ಟ್ ವಾರೆಂಟ್ ಹೊರಡಿಸಿ ನಿಮಗೆ ಮತ್ತು, ನಿಮ್ಮ ತಂದೆಗೆ ಅರೆಸ್ಟ್ ಮಾಡಿಸುತ್ತೇನೆ ಅಂತ ಹೇಳಿ ಮೋಸದಿಂದ ಲಕ್ಷಾಂತರ ರೂಪಾಯಿ ಹಣ ಪಡೆದ ಆರೋಪಿಯನ್ನು ಸಹಾಯಕ ಪೊಲೀಸ್ ಆಯುಕ್ತರು (ಬಿ) ಪಾಂಡುರಂಗಯ್ಯಾ ರವರ ನೇತೃತ್ವದಲ್ಲಿ ಧಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಅರುಣಕುಮಾರ ನರಸಿಂಹನಾಯಕ್ ವಂಚನೆಗೆ ಒಳಗಾದ ವ್ಯಕ್ತಿ, ಇವರ ದೂರನ್ನು ಸ್ವೀಕರಿಸಿದ ನಗರದ ಸೈಬರ್, ಎಕೋನಾಮಿಕ್ ಮತ್ತು ನಾರ್ಕೋಟಿಕ್ ಪೊಲೀಸ್ (ಸಿ.ಇ.ಎನ್.) ಪೊಲೀಸ್ ಠಾಣೆ ವಿಜಯಪೂರದ ಬಂಜಾರ ಕ್ರಾಸ್ ನಲ್ಲಿ ಇರುವ ಕುರಿತು ಖಚಿತ ಮಾಹಿತಿ ಪಡೆದು ಅಲಕುಂಟೆ ನಿವಾಸಿಯಾರುವ ರಘುವೀರ ತಂದೆ ಬಾಬು ರಾಠೋಡ (24) ಎಂಬ ಆರೋಪಿಯನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ. ಇತ್ತ ಇಂಜಿನಿಯರಿಂಗ್ ಹಾಗೂ ಬಾಹ್ಯ ಎಂ.ಬಿ.ಎ. ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಪ್ರಕರಣದ ವಿವರ: ಫೇಸಬುಕ್ ಅಕೌಂಟಗೆ ಪ್ರಿಯಾಶೆಟ್ಟಿ ಎಂಬ ಹುಡುಗಿಯ ಹೆಸರಿನಲ್ಲಿ ಫೇಕ್ ಫೇಸಬುಕ್ ಅಕೌಂಟ್ ಸೃಷ್ಟಿಸಿ ಆನ್‌ಲೈನ್ ಜಾಬ್ ಬಗ್ಗೆ ಲಿಂಕ್ ಮೇಸೆಜ್ ಕಳುಹಿಸಿರುತ್ತಾನೆ. ಅದರಲ್ಲಿ ತನ್ನ ಮೋಬೈಲ್ ನಂ. 8095346456 ನಂಬರ ಕೊಟ್ಟು ವಿಲಾಸ ಅಂತ ಹೆಸರು ಹೇಳಿ ಫೋನ್ ಮಾಡಲು ತಿಳಿಸಿ ನಂತರ ರಿಜಿಸ್ಟ್ರೇಷನ್ ಫೀ, ಕಮೀಷನ್ ಹಣ, ಜಾಬ್ ಒದಗಿಸಲು ಹಣ ಅಂತ ಹೇಳಿ ಹಣ ತನ್ನ ಅಕೌಂಟಗೆ ಜಮಾ ಮಾಡಿಸಿಕೊಂಡಿರುತ್ತಾನೆ. ಫಿರ್ಯಾದಿಯು ತನ್ನ ಹಣ ವಾಪಾಸ್ ಕೇಳಿದ್ದಕ್ಕೆ ತಾನು ವಿಜಯ ಪೊಲೀಸ ಇನ್ಸ್‌ಪೆಕ್ಟರ್‌ ಸೈಬರ್ ಕ್ರೈಂ ಮುಂಬೈ ಎಂಬ ಹೆಸರಿನಿಂದ ಇನ್ನೊಂದು ಮೊಬೈಲ್ ನಂ. 8431015498, 789272005 ನಿಂದ ಫೋನ್ ಮಾಡಿ, ವಾಟ್ಸಪ್ ಮತ್ತು ಮೇಸೆಜ್ ಗಳ ಮೂಲಕ ಮೇಸೆಜ್ ಕಳುಹಿಸಿ ನಿನ್ನ ಮೇಲೆ ಕೇಸ್ ಮಾಡಿ ಅರೆಸ್ಟ್ ವಾರೆಂಟ್ ನೊಂದಿಗೆ ಬಂದು ಅರೆಸ್ಟ್ ಮಾಡುತ್ತೇನೆ ಅಂತ ಹೆದರಿಸಿ ಲಕ್ಷಾಂತರ ರೂಪಾಯಿಗಳು ಗೂಗಲ್ ಪೇ, ಪೇಟಿಎಂ, ಮತ್ತು ಫೋನ್ ಪೇ ಮೂಲಕ ತನ್ನ ಆಂಧ್ರ ಬ್ಯಾಂಕ್ ಮತ್ತು ಎಕ್ಸ್, ಬ್ಯಾಂಕ್ ಅಕೌಂಟ್ ಗೆ ಹಣ ಜಮಾ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಆಯುಕ್ತರು ಎಂ. ಎನ್. ನಾಗರಾಜ್, ಉಪ ಪೊಲೀಸ್ ಆಯುಕ್ತರು ಕಿಶೋರಬಾಬು ರವರ ಮಾರ್ಗದರ್ಶನದ, ಪಿ.ಐ ಸಂಜೀವಕುಮಾರ ಎನ್, ಕುಂಬಾರಗೆರೆ, ಮತ್ತು ಸಿಬ್ಬಂದಿ ಎ.ಎಸ್.ಐ. ಯಶೋಧಾ ಕಟಕೆ ಮತ್ತು ರಫೀಯುದ್ದಿನ್, ವೇದರ, ಬಾಬು ಪಾಟೀಲ್ , ಶಶಿಕಾಂತ ರವರೊಂದಿಗೆ ಹಾಗೂ ಸಿ.ಡಿ.ಆರ್. ಶಾಖೆಯ ಚನ್ನವೀರೇಶರವರ ಸಹಾಯದೊಂದಿಗೆ ಆರೋಪಿಯಿಂದ ಎರಡು ಮೊಬೈಲ್ ಮತ್ತು 3,20,000/- ರೂ. ಗಳನ್ನು ಜಪ್ತಿ ಪಡಿಸಿಕೊಂಡು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 hour ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

2 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago