ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡ ಶರಣಬಸವ ವಿಶ್ವವಿದ್ಯಾಲಯದ ಯುವಜನೋತ್ಸವ ಕಾರ್ಯಕ್ರಮವು ವಿವಿಧ ಸಾಂಸ್ಕøತಿಕ ಚಟುವಟಿಕೆಗಳಿಂದ ಹಾಗೂ ಸಮೂಹ ಗಾಯನ ಮತ್ತು ನೃತ್ಯದೊಂದಿಗೆ ಅದ್ದೂರಿಯಾಗಿ ಚಾಲನೆಗೊಂಡು ನೋಡುಗರ ಮನರಂಜಿಸಿತು.
ಡ್ರಾಮಾ: ಬಿಸಿಎ ವಿಭಾಗದ ವಿದ್ಯಾರ್ಥಿನಿ ಸ್ವರೂಪ ಹಾಗೂ ತಂಡದವರು ಭಾರತೀಯ ಸಂಸ್ಕøತಿಯ ಇಳಕಲ್‍ಸಿರೆಯ ಮಹತ್ವದ ಕುರಿತು ಅಭಿನಯಸಿದ ನಾಟಕ ನೋಡುಗರ ಕಣ್ಣಂಚಿನಲ್ಲಿ ನೀರು ಹರಿಸಿತು.
ಶಾಸ್ತ್ರೀಯ ನೃತ್ಯ: ಬಿಸಿಎ ವಿಭಾಗದ ವಿದ್ಯಾರ್ಥಿನಿ ಪದ್ಮಾ ಆರ್ ಎಸ್ ಶಾಸ್ತ್ರೀಯ ನೃತ್ಯ ನಡೆ ಮೈಮ್ : ಎಂಎಸ್‍ಸಿ ಗಣಿತ ವಿಭಾಗದ ಲಕ್ಷ್ಮಿಪುತ್ರ ತಂಡದಿಂದ, ಕ್ಲಾಸಿಕಲ್ ವೋಕಲ್ ಸೋಲೊ: ಗೋದುತಾಯಿ ಎಂಜಿನೀಯರಿಂಗ್ ವಿಭಾಗದ ವಿದ್ಯಾರ್ಥಿನಿ ಪಲ್ಲವಿಯಿಂದ. ಹಾಗೂ ನೇಹಾರಿಂದ, ಸ್ಕಿಟ್: ಬಿ.ಟೆಕ್ ಮಹಿಳಾ ವಿಭಾಗದ ವಿದ್ಯಾರ್ಥಿ ಸ್ಫೂರ್ತಿ ಹಾಗೂ ತಂಡದಿಂದ, ಗ್ರೂಪ್ ಸಾಂಗ್ ಪಾಶ್ಚಿಮಾತ್ಯ: ಸಿಎಸ್‍ಇ ವಿಭಾಗದ ವಿದ್ಯಾರ್ಥಿನಿ ಕು. ಐಶ್ವರ್ಯ ಮತ್ತು ತಂಡದವರು ಹಾಗೂ ಗೋದುತಾಯಿ ಮಹಿಳಾ ಎಂಜಿನೀಯರಿಂಗ್ ವಿಭಾಗದ ಕು. ಪ್ರೀತಿ ಮತ್ತು ತಂಡದವರು ನಡೆಸಿಕೊಟ್ಟರು. ಗ್ರೂಪ್ ಸಾಂಗ್ ಇಂಡಿಯನ್: ಗೋದುತಾಯಿ ಬಿಎಡ್‍ದ ಕು. ಗೀತಾಂಜಲಿ ಮತ್ತು ತಂಡದಿಂದ ನಡೆಸಿಕೊಡಲಾಯಿತು.
ಕ್ಲಾಸಿಕಲ್ ಲೈಟ್ ವೋಕಲ್ ಸೋಲೊ: ಸಂಗೀತ ವಿಭಾಗದ ವಿದ್ಯಾರ್ಥಿ ಮಲ್ಲಿಕಾರ್ಜುನ ವಸ್ತ್ರದಮಠ, ಕ್ಲಾಸಿಕಲ್ ಇನ್‍ಸ್ಟ್ರುಮೆಂಟಲ್ ಸೋಲೊ: (ನಾನ್ ಪ್ರಿಕಾಶನ್) ಸಂಗೀತ ವಿಭಾಗದ ವಿದ್ಯಾರ್ಥಿ ನರೇಂದ್ರ, ಪಾಶ್ಚಿಮಾತ್ಯ ಸೋಲೊ: ಗೋದುತಾಯಿ ಮಹಿಳಾ ಎಂಜನೀಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪ್ರೀತಿ, ವೆಸ್ಟರ್ನ್ ಇನ್‍ಸ್ಟ್ರುಮೆಂಟಲ್ ಸೋಲೊ: ಸಂಗೀತ ವಿಭಾಗದ ವಿದ್ಯಾರ್ಥಿ ಪ್ರಶಾಂತ ವಿ ನಡೆಸಿಕೊಟ್ಟರು.
ವಿದ್ಯಾರ್ಥಿನಿ ಮಮತಾ ಮತ್ತು ವಿಜಯಲಕ್ಮಿ ಕಾರ್ಯಕ್ರಮ ನಿರೂಪಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆ ಹಾಡಿದರು. ವಿದ್ಯಾರ್ಥಿನಿ ಶಿವಾನಿ ಸ್ವಾಗತಿಸಿದರು.
ವಿವಿ ಕುಲಪತಿ ಡಾ. ನಿರಂಜನ್ ನಿಷ್ಠಿ, ಸಮ ಕುಲಪತಿ ಡಾ.ವಿ.ಡಿ. ಮೈತ್ರಿ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ಡೀನ್ ಡಾ. ಲಕ್ಷ್ಮಿ ಪಾಟೀಲ ಮತ್ತು ಡಾ.ಬಸವರಾಜ ಮಠಪತಿ, ಪತ್ರಿಕೋದ್ಯಮ ಮುಖ್ಯಸ್ಥ ಟಿ.ವಿ.ಶಿವಾನಂನದ್, ಎಮ್‍ಎ ವಿಭಾಗದ ಮಖ್ಯಸ್ಥ ಡಾ.ಹರೀಶ ಬಿದನೂರಕರ್ ಇತರರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…