ಬಿಸಿ ಬಿಸಿ ಸುದ್ದಿ

ಕನ್ನಡ ಸಾಹಿತ್ಯ ಸಂಘದ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಕಲಬುರಗಿ: ಕನ್ನಡ ಅಧ್ಯಯನ ಸಂಸ್ಥೆ ವಿಶಿಷ್ಟವಾಗಿ ಬೆಳೆದು ಎಲ್ಲ ವಿಶ್ವವಿದ್ಯಾಲಯಗಳ ಅಧ್ಯಯನ ಸಂಸ್ಥೆಗೆ ಮಾದರಿಯಾಗಿದೆ ಅಂತಹ ವಾತಾವರಣ ನಿರ್ಮಿಸಿದ ಪ್ರೊ. ಪೋತೆ ಅವರ ಶ್ರಮ ಮತ್ತು ತ್ಯಾಗ ಎದ್ದು ಕಾಣುತ್ತದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ ಪ್ರಾಧ್ಯಾಪಕ ಡಾ. ಬಸವರಾಜ ಡೋಣೂರು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡ ಕಟ್ಟುವ ಕೆಲಸ ಇಂದು ಭರದಿಂದ ಸಾಗಬೇಕಾಗಿದೆ. ಸಾಹಿತ್ಯ ಎನ್ನುವುದು ಮನುಷ್ಯನ ಕೊಳೆಯನ್ನು ತೊಳೆಯುವ ಸಾಧನ ಎಂದರು. ಪಂಪ, ಕುವೆಂಪು, ಶೇಕ್ಸಪಿಯರ್, ಟಾಲಸ್ಟಾಯ್ ಷೆಲ್ಲಿ ಮುಂತಾದವರ ವಿಚಾರಧಾರೆಗಳನ್ನು ಅಳವಡಿಸಿಕೊಳಲು ಸೂಚಿಸಿದರು. ಕೊನೆಗೆ ಬುದ್ಧನ ಕರುಣೆಯ ಮಹತ್ವವನ್ನು ಹೇಳಿದರು . ಕರುಣೆ ನೀಡಿದವರು ಉದ್ಧಾರವಾಗುತ್ತಾರೆ. ಸ್ವೀಕರಸಿದವರೂ ಉದ್ದಾರವಾಗುತ್ತಾರೆ, ಸಾಹಿತ್ಯ ರಾಷ್ಟ್ರ ಪ್ರೇಮವನ್ನು ಬೆಳೆಸಬೇಕು ಎಂದು ಕರೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸುರೇಶ ಬಡಿಗೇರ ಅವರು ಮಾತನಾಡುತ್ತ ದೇಶೀಯ ಸಾಂಸ್ಕೃತಿಯ ಸೊಗಡನ್ನು ಕನ್ನಡ ಅಧ್ಯಯನ ಸಂಸ್ಥೆ ಚೆನ್ನಾಗಿ ಬೆಳಸಿಕೊಂಡು ಬಂದಿದೆ ಇದು ನಮ್ಮ ಜನಪದ ಸಾಂಸ್ಕೃತಿಯನ್ನು ಎತ್ತಿಹಿಡಿದಿದೆ ಎಂದು ಹೇಳಿದರು.

ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಡಾ. ರಾಜೇಂದ್ರ ಯರನಾಳೆ ಅವರು ಮಾತನಾಡುತ್ತಾ, ಹಿಂದಿನ ಸಾಹಿತಿಗಳು ಕನ್ನಡದ ಅನ್ನ, ನೀರು, ಗಾಳಿ, ಕುಡಿದು ಬದುಕಿ ಬೆಳದವರು ಆ ಕಾರಣಕ್ಕಾಗಿ ಕನ್ನಡ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಾಗಿದೆ ಎಂಬುದನ್ನು ತಿಳಿಸಿದರು. ಮನುಷ್ಯನ ಸಕರಾತ್ಮಕ ಭಾವನೆ ನಮ್ಮನ್ನು ದೊಡ್ಡವನನ್ನಾಗಿ ಮಾಡುತ್ತದೆ ಎಂದರು .

ಪ್ರೊ. ಎಚ್.ಟಿ. ಪೋತೆ ಅವರು ಅಧ್ಯಕ್ಷೀಯ ಮಾತುಗಳನ್ನಾಡುತ್ತ ಕ ಡ ಸಾಹಿತ್ಯ ಸಂಘದ, ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರ ಕೊಟ್ಟ ದೇಣಿಗೆಯಿಂದ ಸುಸಜ್ಜಿತ ಗ್ರಂಥಾಲಯ ಮಾಡಲು ಸಾಧ್ಯವಾಗಿದೆ. ವಿಶ್ವವಿದ್ಯಾಲಯವು ಭಾವಚಿತ್ರಗಳಿಗೆ ಅನುದಾನ ನೀಡಿದೆ ಕನ್ನಡ ಸಾಹಿತ್ಯ ಸಂಘ ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದೆ. ಆ ಕಾರ್ಯ ಮುಂದು ವರೆಯಲಿದೆ ಎಂದರು. ಮನೆಗೆ ಕಂಪೌಂಡ್ ಕಟ್ಟಿಕೊಳ್ಳಬೇಕು ಆದರೆ ಮನಸ್ಸಿಗೆ ಕಂಪೌಂಡ್ ಕಟ್ಟಿಕೊಳ್ಳಬಾರದು ಎಂದರು ವಿಶಾಲ ಹೃದಯ, ಮಾನವೀಯತೆ ಸಾಹಿತ್ಯದಲ ವಸ್ತುವಾಗಬೇಕು ಎಂದು ಹೇಳಿದರು.

ಸೌಮ್ಯ ಪ್ರಾರ್ಥನೆ ಹಾಡಿದರು. ದೇವಿಂದ್ರ ಮತ್ತು ಜರನೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ತಮ್ಮ ಣ್ಣ, ಸ್ವಾಗತಿಸಿದರು ಮಾಳಪ್ಪ ವಂದಿಸಿದರು. ಡಾ. ಎಂ.ಬಿ. ಕಟ್ಟಿ, ಡಾ. ಮೇಲಕೇರಿ, ಡಾ. ದಬ್ಬಾ, ಡಾ. ಕಂಬಾರ, ಡಾ. ಮಾವಿನ, ಡಾ. ಅನಿಲ, ಡಾ. ಸುವರ್ಣ ಹಿರೇಮಠ, ಡಾ. ಶಿವಗಂಗಾ, ಡಾ. ಜಾನೆ, ಡಾ. ಶುಲಾಬಾಯಿ, ಬೆಂಗಳೂರಿನ ಡಾ. ಚಂದ್ರಪ್ಪ ಉಪಸ್ಥಿತರಿದ್ದರು.

emedialine

Recent Posts

ಎಂ.ಎಸ್ ಇರಾಣಿ ವಿದ್ಯಾರ್ಥಿಗೆ ದ್ವೀತಿಯ ಸ್ಥಾನ

ಕಲಬುರಗಿ: ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಹಾನಗರ ಪಾಲಿಕೆ,ಸಮಾಜ ಕಲ್ಯಾಣ ಇಲಾಖೆ, ಕನ್ನಡ…

11 hours ago

ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮ

ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ಹಾಗೂ ಸಿ.ಆರ್.ಸಿ ಸ್ನೇಹ ಬಳಗ ಕಲಬುರಗಿ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…

11 hours ago

ಸ್ಲಂ ಜನಾಂದೋಲನ ಜಿಲ್ಲಾ ಘಟಕದಿಂದ ಹಕ್ಕು ಪತ್ರ ನೊಂದಣಿ ಖಾತ ಪ್ರತಿ ವಿತರಣೆ

ಕಲಬುರಗಿ: ಸುವರ್ಣ ಭವನ (ಕನ್ನಡ ಭವನ)ದಲ್ಲಿ  ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ  ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ…

11 hours ago

ಸಂವಿಧಾನ ದಿನಾಚರಣೆ

ಕಲಬುರಗಿ : ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿಯಲ್ಲಿ ಎನ್.ಎಸ್.ಎಸ್, ರೆಡ್‍ಕ್ರಾಸ್, ಸ್ಕೌಟ್ಸ್ ಆಂಡ್ ಗೈಡ್ಸ್, ಐ.ಕ್ಯೂ.ಎ.ಸಿ ಮತ್ತು ಸಾಂಸ್ಕøತಿಕ ಘಟಕಗಳ…

11 hours ago

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಪೆÇೀಲೀಸ್ ಇಲಾಖೆಗೆ ಅಭಿನಂದನೆ

ಕಲಬುರಗಿ; ಶಿಶು ಮಗುವಿಗೆ ಅಪಹರಣಕಾರರನ್ನು ಬಂಧಿಸಿದ ಕಲಬುರಗಿ ಪೆÇೀಲೀಸ್ ಇಲಾಖೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಅಭಿನಂದನೆ ವ್ಯಕ್ತಪಡಿಸಿದೆ.…

11 hours ago

ಲೋಕೋಪಯೋಗಿ ಕಚೇರಿ ಮುಂದೆ ನಮ್ಮ ಕರ್ನಾಟಕ ಸೇನೆಯಿಂದ ಧರಣಿ ಸತ್ಯಾಗ್ರಹ

ಕಲಬುರಗಿ; ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ, ಯಡ್ರಾಮಿ, ಅಫಜಲಪೂರ, ಸೇಡಂ, ಆಳಂದ, ಚಿಂಚೋಳಿ  ತಾಲೂಕಿನಲ್ಲಿ ಜಂಗಲ್ ಕಟಿಂಗ್ ಹಾಗೂ ಮೆಂಟನೆನ್ಸ್…

11 hours ago