ಸುರಪುರ: ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕರ ೬೩ನೇ ಜನ್ಮ ದಿನದ ಅಂಗವಾಗಿ ಅವರ ರಾಜಾ ಶುಭಾಶ್ಚಂದ್ರ ನಾಯಕ ಇವರ ನೇತೃತ್ವದಲ್ಲಿ ರಾಜಾ ವೆಂಕಟಪ್ಪ ನಾಯಕರ ಹಿತೈಷಿಗಳು ಹಾಗು ಅಭಿಮಾನಿಗಳು ನಗರದ ತಾಲ್ಲೂಕು ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಾಲು ಮತ್ತು ಬ್ರೇಡ್ ವಿತರಿಸುವ ಮೂಲಕ ಸರಳವಾಗಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಸುರಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ ಮಾತನಾಡಿ,ಈಬಾರಿ ರಾಜ್ಯದಲ್ಲಿ ನೆರೆಯಿಂದಾಗಿ ಲಕ್ಷಾಂತರ ಜನ ತೊಂದರೆಗೆ ಸಿಲುಕಿದ್ದಾರೆ.ಆದ್ದರಿಂದ ನನ್ನ ಜನ್ಮ ದಿನವನ್ನು ಯಾರೂ ಆಚರಿಸದಂತೆ ನಮ್ಮ ನಾಯಕರಾದ ರಾಜಾ ವೆಂಕಟಪ್ಪ ನಾಯಕರು ಎಲ್ಲರಿಗೂ ತಿಳಿಸಿದ್ದಾರೆ.ಆದ್ದರಿಂದ ಅದ್ಧೂರಿಯಲ್ಲದಿದ್ದರು ಅರ್ಥಪೂರ್ಣವಾಗಿ ಆಚರಣೆ ಮಾಡುವ ಉದ್ದೇಶದಿಂದ ಎಲ್ಲ ರೋಗಿಗಳಿಗೆ ಹಾಲು ಹಣ್ಣು ಮತ್ತು ಬ್ರೇಡ್ ವಿತರಿಸುವ ಮೂಲಕ ನಮ್ಮ ನಾಯಕರಿಗೆ ಭಗವಂತ ಹೆಚ್ಚಿನ ಆಯುರಾರೋಗ್ಯ ಭಾಗ್ಯ ನೀಡಲೆಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಹರ್ಷವರ್ಧನ ರಫಗಾರ ಮುಖಂಡರಾದ ಮಹ್ಮದ ಶಕೀಲ್, ಮಹಿಬೂಬ ಸಾಬ ಬಡೆ ಖುರೇಷಿ ನಗರ ಸಭೆ ಸದಸ್ಯ, ಸಂಗನಗೌಡ ಕೋಳಿಹಾಳ, ಶರಣು ಶಾಂತಪೂರ, ಹಣಮಂತ್ರಾಯ ಮಕಾಶಿ, ವೆಂಕಟೇಶ ದಳವಾಯಿ, ಸಲಿಮ ತಿಂಥಣಿ, ಮೌಲಸಾಬ ಸೌದಾಗರ, ಇಕಬಾಲ್ ಬಿಚಗತ್ತಿಕೇರಿ, ಹುಸೇನಪ್ಪ ಜೀವಣಗಿ, ರಾಘವೇಂದ್ರ ಕುಲಕರ್ಣಿ ಗೇದ್ದಲಮರಿ, ಶರಣಗೌಡ ದೇವಾಪೂರ, ಕನಕಚಲ ನಾಯಕ ಯಡಿಯಾಪೂರ, ಆಬಿದ ಮೋಜಂಪೂರ, ರಾಮನಗೌಡ ದೇವಿಕೇರಿ, ಹಯ್ಯಾಳಪ್ಪ ದೇವಿಕೇರಾ, ಹಣಮಂತ ಗೆಜ್ಜೆಲಿ, ರಂಗು ದೇವಿಕೇರಾ,ಹಣಮಂತ ಬೊಮ್ಮನಹಳ್ಳಿ,ಪ್ರಕಾಶ ದೇವಿಕೇರಾ, ವೆಂಕಟೇಶ ಸೂರ್ಯವಂಶಿ, ಗೋವಿಂದ ಮಾಳದಕರ,ಬಸವರಾಜ ಮುಷ್ಠಳ್ಳಿ ಹಾಗೂ ಪಕ್ಷದ ಅನೇಕ ಕಾರ್ಯಕರ್ತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…