ಸುರಪುರ: ತಾಲೂಕಿನ ಅಭಿವೃಧ್ಧಿಗೆ ರಾಜಾ ವೆಂಕಟಪ್ಪ ನಾಯಕರ ಕೊಡುಗೆ ದೊಡ್ಡದಿದೆ.ಅವರ ಜನ್ಮ ದಿನವನ್ನು ಇಂದು ಬಡ ಜನತೆಗೆ ಆಹಾರ ಧಾನ್ಯಗಳ ವಿತರಿಸುವ ಮೂಲಕ ಆಚರಣೆ ಮಾಡುತ್ತಿರುವುದು ಖುಷಿ ತಂದಿದೆ ಎಂದು ಮಾಜಿ ನಗರಸಭೆ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿದರು.
ನಗರದ ರಂಗಂಪೇಟೆಯ ವಾರದ ನಿವಾಸದ ಬಳಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರ ೬೩ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬಡ ಜನತೆಗೆ ಆಹಾರ ಧಾನ್ಯಗಳ ವಿತರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ನಗರಸಭೆ ಅಧ್ಯಕ್ಷ ಅಬ್ದುಲ ಗಫೂರ ನಗನೂರಿ ಮಾತನಾಡಿ,ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕರು ಸರಳ ಸಜ್ಜನಿಕೆಯ ರಾಜಕಾರಣಿಗಳಾಗಿದ್ದು ಅವರು ಎಲ್ಲಾ ಧರ್ಮ ಜಾತಿ ಜನಾಂಗದವರನ್ನು ತಮ್ಮ ಬಂಧುಗಳಂತೆ ಕಾಣುವ ಮೂಲಕ ಎಲ್ಲರ ಮನದಲ್ಲಿನ ನಿಜವಾದ ನಾಯಕನ ಸ್ಥಾನದಲ್ಲಿದ್ದಾರೆ ಎಂದರು.
ಶರಣು ಅರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ,ನಮ್ಮ ನಾಯಕರಾದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರ ಮಾರ್ಗದರ್ಶನದಂತೆ ಈಬಾರಿ ಸರಳವಾಗಿ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದು ತಾಲ್ಲೂಕಿನಾದ್ಯಂತ ರೋಗಿಗಳಿಗೆ ಹಾಲು ಹಣ್ಣು ವಿತರಿಸುವುದು,ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಗಳ ವಿತರಿಸುವುದು ಹಾಗು ಆಹಾರ ಧಾನ್ಯಗಳ ವಿತರಿಸುವ ಮೂಲಕ ಜನತೆಗೆ ನೆರವಾಗಲಿದ್ದೇವೆ ಎಂದರು.
ನಂತರ ನೂರಾರು ಕುಟುಂಬಗಳಿಗೆ ಅಕ್ಕಿ ಬೇಳೆ ಸೇರಿದಂತೆ ಇತರೆ ಪದಾರ್ಥಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ನಾಸೀರ್ ಕುಂಡಾಲೆ,ಜಹೀರ್ ಅಹ್ಮದ,ಸುವರ್ಣ ಎಸ್. ಎಲಿಗಾರ ಮುಖಂಡರಾದ ಸಿದ್ದು ಅಂಗಡಿ,ಖಾಲಿದ್ ಅಹ್ಮದ್ ತಾಳಿಕೋಟೆ,ದವಲಸಾಬ್ ಚಿಟ್ಟಿವಾಲೆ,ಸಾಹೇಬಗೌಡ ಕುಂಬಾರ,ಮುಖೀರ್ ಕುಂಡಾಲೆ, ಸಿದ್ರಾಮ ಎಲಿಗಾರ, ಬಸವರಾಜ ಬೀರನೂರ,ಶ್ರೀಧರ ಶಖಾಪುರ,ವೆಂಕಟೇಶ ಟೋಣಪೆ,ಅಮರೇಶ ಕುಂಬಾರ,ನಿಂಗಣ್ಣ ವಡಗೇರಿ,ಮಂಜುನಾಥ ಮಠಪತಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…