ಬಿಸಿ ಬಿಸಿ ಸುದ್ದಿ

‘ದಿನಕ್ಕೊಂದು ವಚನ’ ಅಭಿಮಾನ: ಸಮಾಜಮುಖಿ ಚಿಂತನೆಗೆ ಹನ್ನೇರಡನೆ ಶತಮಾನದ ಬಸವಾದಿ ಶರಣರ ವಚನಗಳ ತಿರುಳನ್ನು ಮುಟ್ಟಿಸುವ ಅವಶ್ಯಕತೆವಿದೆ

ಕಲಬುರಗಿ: ಇಂದಿನ ಯುವಕರ ಮನಸ್ಸನ್ನು ಸಮಾಜಮುಖಿ ಚಿಂತನೆಯತ್ತ ತಿರುಗಲು ಹನ್ನೇರಡನೆ ಶತಮಾನದ ಬಸವಾದಿ ಶರಣರ ವಚನಗಳಲ್ಲಿನ ತಿರುಳನ್ನು ಅವರ ಮನಕ್ಕೆ ಮುಟ್ಟಿಸುವ ಅವಶ್ಯಕತೆವಿದೆ. ತಾಂತ್ರಿಕ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ವಚನ ಅಭಿಯಾನ ಹಮ್ಮಿಕೊಳ್ಳುತ್ತಿರುವುದು ವಿನೂತನ ಹಾಗೂ ವಿಶಿಷ್ಟ ಪ್ರಯೋಗವಾಗಿದೆ ಎಂದು ನಾಡಿನ ಹಿರಿಯ ಶರಣ ಸಾಹಿತಿ ಡಾ. ಗೋ ರು ಚೆನ್ನಬಸಪ್ಪ ಹೇಳಿದರು.

ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ‘ದಿನಕ್ಕೊಂದು ವಚನ’ ಎಂಬ ಅಭಿಮಾನದ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅತಿಥಿಯಾಗಿ ಆಗಮಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್ ಮಾತನಾಡಿ, ಸದಾ ಹಸನ್ಮುಖದಿಂದ ಹೊಸತನ ಕಾರ್ಯಕ್ರಮಗಳ ಮೂಲಕ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮತ್ತೊಂದು ವಿಶಿಷ್ಟ ಹೆಜ್ಜೆ ಇಡುತ್ತಿರುವ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರ ಕಾರ್ಯ ಶ್ಲಾಘನೀಯ ಎಂದು ತಮ್ಮ ಮುಕ್ತ ಕಂಠದಿಂದ ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಇಂದು ದಿನಬೆಳಗಾದರೆ ವಾಟ್ಸಪ್, ಪೇಸ್‌ಬುಕ್‌ಗಳ ಮೂಲಕ ಮಿತ್ರ ಜೊತೆ ಹರಟೆ ಹೊಡೆಯುತ್ತ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗುತ್ತಿರುವ ಇಂದಿನ ಯುವಕರ ಮನಸ್ಸನ್ನು ಈ ‘ದಿನಕ್ಕೊಂದು ವಚನ’ ಅಭಿಮಾನದ ಅಭಿಯಾನದ ಮೂಲಕ ವೈಚಾರಿಕ ಚಿಂತನೆಯತ್ತ ಮುಖ ಮಾಡಿಸುವ ಚಿಕ್ಕ ಪ್ರಯತ್ನ ಈ ಅಭಿಯಾನದ್ದಾಗಿದೆ ಎಂದರು.

ಅಕಾಡೆಮಿಯ ಪದಾಧಿಕಾರಿಗಳಾದ ಡಾ.ಕೆ.ಗಿರಿಮಲ್ಲ, ರವೀಂದ್ರಕುಮಾರ ಭಂಟನಳ್ಳಿ, ಪ್ರಭುದೇವ ಯಳವಂತಗಿ, ಶಿವಾನಂದ ಮಠಪತಿ, ಬಿ.ಎಂ.ಪಾಟೀಲ ಕಲ್ಲೂರ, ಪರಮೇಶ್ವರ ಶಟಕಾರ, ಜಗದೀಶ ಮರಪಳ್ಳಿ, ಸವಿತಾ ಪಾಟೀಲ ಸೊಂತ, ನೀಲಾಂಬಿಕಾ ಚೌಕಿಮಠ, ನಾಗೇಂದ್ರಪ್ಪ ಮಾಡ್ಯಾಳೆ, ಹಣಮಂಟ ಅಟ್ಟೂರ, ಶಕೀಲ್ ಅಹ್ಮದ್ ಮಿಯ್ಯಾ, ಪ್ರಭುಲಿಂಗ ಮೂಲಗೆ, ಪ್ರಸನ್ನ ವಾಂಜರಖೇಡೆ, ಸತೀಶ ಸಜ್ಜನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

4 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

4 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

6 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

6 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

6 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

7 hours ago