ಕಲಬುರಗಿ: ಕರ್ನಾಟಕದ ರಾಣಿಯರು, ಬೆಳವಡಿ ಮಲ್ಲಮ್ಮ, ಕಿತ್ತೂರ ಚೆನ್ನಮ್ಮ, ಕೆಳದಿಯ ಚೆನ್ನಮ್ಮ ಹಾಗೂ ವಚನಕಾರ್ತಿಯರ ಸೇವೆ ಅವಿಸ್ಮರಣೀಯವಾಗಿದ್ದು, ಈ ನಿಟ್ಟಿನಲ್ಲಿ ಇನ್ನೂ ಬೆಳಕು ಚೆಲ್ಲುವ ಕಾರ್ಯ ಆಗಬೇಕಿದೆ ಎಂದು ಗೋದುತಾಯಿ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ತಿಳಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿರುವ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಬಸವ ಸೇವಾ ಪ್ರತಿಷ್ಠಾನ ಹಾಗೂ ನೀಲಮ್ಮನ ಬಳಗದ ವತಿಯಿಂದ ಇಂದು ಆಯೋಜಿಸಿದ್ದ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಅನುಭಾವ ನೀಡಿದ ಅವರು, ಸಮಾಜದಲ್ಲಿನ ಆರೋಗ್ಯ ಕಾಪಾಡಲು ವಚನಕಾರರ ಅನುಭಾವ ಮುಖ್ಯವಾಗಿದೆ ಎಂದರು.
ತಮ್ಮತನವನ್ನು ಮರೆತ ಯಾವುದಾದರೂ ಜನಾಂಗವಿದ್ದರೆ ಅದು ಲಿಂಗಾಯತರು. ತಮ್ಮ ನಿಜವಾದ ಇಭ್ರತಿ ಕಳೆದಕೊಂಡ ಇವರು ಬೇರೆ ಬೇರೆ ಇಸಂಗಳಿಗೆ ಗಂಟು ಬಿದ್ದಿದ್ದಾರೆ. ನಮ್ಮ ರಾಣಿಯರು ರಾಜರ ರಾಣಿರಾಗಿರದೆ ಲಿಂಗದ ರಾಜರಾಗಿದ್ದರು. ಸತಿ ಪತಿಗಳೊಂದಾದ ಕಲ್ಯಾಣ ರಾಜ್ಯ ಕಟ್ಟಿದವರು ಬಸವಾದಿ ಶರಣರು ಎಂದು ವಿವರಿಸಿದರು.
ಮುಖ್ಯ ಅತಿಥಿಯಾಗಿದ್ದ ಭೀಮರಾಯನಗುಡಿಯ ಭೂಸ್ವಾಧೀನಾಧಿಕಾರಿ ಶರಣಬಸಪ್ಪ ಬೆಣ್ಣೂರ, ಉದ್ಯಮಿ, ಚಂದ್ರಶೇಖರ ತಳ್ಳಳ್ಳಿ, ವೀರಣ್ಣ ರಟಕಲ್ ಆಗಮಿಸಿದ್ದರು. ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ ಅಧ್ಯಕ್ಷತೆ ವಹಿಸಿದ್ದರು. ಡಾ. ನಾಗರತ್ನ ದೇಶಮಾನ್ಯ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.
ನಾಗರಾಜ ಕಾಮಾ ನಿರೂಪಿಸಿದರು. ಬಸವರಾಜ ಚಟ್ನಳ್ಳಿ ಸ್ವಾಗತಿಸಿದರು. ರಾಜು ಕಾಡಾದಿ ಶರಣು ಸಮರ್ಪಣೆ ಮಾಡಿದರು. ಸಾನ್ನಿಧ್ಯ ವಹಿಸಿದ್ದ ಬೀದರ್ ನ ಬಸವಗಿರಿ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ತಾಯಿ ಮಾತನಾಡಿ, ಬ್ರಿಟಿಷ್, ಶಿವಾಜಿ ಮಹಾರಾಜ್, ಔರಂಗಜೇಬ್ ವಿರುದ್ಧ ಹೋರಾಡಿದ ಈ ಮಹಿಳೆಯರು, ತಮ್ಮ ಧೀರತ್ವವನ್ನು ಮರೆದರು ಎಂದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…