ಅದು ಫೆಬ್ರವರಿ ಮಾಹೆ. ಕರ್ನಾಟಕದಲ್ಲಿ ಯುವಜನ ಆಯೋಗ ರಚನೆಯಾಗಬೇಕೆಂದು ಯುವ ಮುನ್ನಡೆ ತಂಡದಿಂದ ಅಭಿಯಾನ ಚುರುಕಾಗಿ ನಡೆದಿತ್ತು. ರಾಜ್ಯದ ವಿವಿಧ ಸಂಘ ಸಂಸ್ಥೆಗಳು ಜಿಲ್ಲಾಧಿಕಾರಿ ಮೂಲಕ ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸುತ್ತಿದ್ದರು. ಆ ಭಾಗವಾಗಿ ನಾನು ಮತ್ತು ಪೂಜಾ ಡಾ. ಚೆನ್ನಣ್ಣ ವಾಲೀಕಾರರನ್ನೂ ಸಹ ಭೇಟಿ ಮಾಡಿದ್ದೆವು.
ನಾವು ಮನೆ ಒಳಗೆ ಕಾಲಿಟ್ಟಾಗ ಅವರು ಮಂಚದ ಮೇಲೆ ಮಲಗಿದ್ದರು. ದೂರದಿಂದಲೇ ನಮ್ಮನ್ನು ನೋಡಿ ಎದ್ದು ಕೂಡಲು ಪ್ರಯತ್ನಿಸಿದರು. ಅಷ್ಟರಲ್ಲೇ ಅವರ ಪತ್ನಿ ಮತ್ತು ಸಹೋದರನೊಬ್ಬ ಅವರನ್ನು ಎದ್ದು ಕೂಡಿಸಲು ಪ್ರಯಾಸಪಡುತ್ತಿದ್ದರು. ಕೈಲಿದ್ದ ಬ್ಯಾಗನ್ನು ಕುರ್ಚಿಯೊಂದರ ಮೇಲಿಟ್ಟು ಅವರನ್ನ ಎತ್ತಲು ಮುಂದಾದೆ. ಬೇಡ ಬೇಡ ಎಂದು ಸಂಜ್ಞೆಯಲ್ಲೇ ಹೇಳತ್ತು ಪ್ರಯಾಸಪಟ್ಟು ಒಂದೆಡೆ ಕೂತುಕೊಂಡರು.
ಅವರ ದೇಹದ ಆ ಸ್ಥಿತಿ ನೋಡಿ ನಾವು ಬಂದದ್ದು ಅವರಿಗೆ ತೊಂದರೆ ಕೊಡಲೆಂದೇ ಅನ್ನಿಸಿಬಿಟ್ಟಿತು. ಸಹಿ ಸಂಗ್ರಹಿಸಿ ನಾವೇ ಜಿಲ್ಲಾಧಿಕಾರಿಗಳಿಗೆ ಕೊಟ್ಟರಾಯಿತು ಎಂದು ಅವಸರದ ಬೆನ್ನು ಬಿದ್ದೆವು. ಆದರೆ ಎದ್ದು ಕೂತ ಚೆನ್ನಣ್ಣ ಸರ್ ತಂಗೀ ತಂಗೀ ಎನ್ನುತ್ತ ನಮ್ಮ ಜೊತೆ ಗಂಟೆಗೂ ಹೆಚ್ಚು ಕಾಲ ಮಾತನಾಡಿದರು.
‘ಯುವಜನ ಆಯೋಗ ರಚನೆ ಆಗಬೇಕು. ನಾನೂ ಬೆಂಬಲ ಕೊಡುತ್ತೇನೆ’ ಎಂದು ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ‘ಸಾಂಸ್ಕೃತಿಕ ಸಂಘರ್ಷ ಸೇನೆ’ ಯ ಲೆಟರ್ ಹೆಡ್ಡಿನಲ್ಲಿ ಮುದ್ರಿತ ಮೆಮೊಗೆ ಸಹಿ ಮಾಡಿದರು. ಅವರ ದೇಹ ದಣಿದಿತ್ತು. ನಮ್ಮನ್ನು ನೋಡಿದ ಅವರ ಉತ್ಸಾಹ ಮಾತ್ರ ಇಮ್ಮಡಿಯಾಗಿತ್ತು! ಇದು ನಾ ಕಂಡ ಚೆನ್ನಣ್ಣ ವಾಲೀಕಾರ ಸರ್.
ನೀವು ನಮ್ಮ ಹೃದಯದಲ್ಲಿ ಇದ್ದೀರಿ ಸರ್. ನಿಮ್ಮ ಬದುಕು, ಹೋರಾಟ ನಮಗೆಂದೂ ಸ್ಪೂರ್ತಿ…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…