ಬಿಸಿ ಬಿಸಿ ಸುದ್ದಿ

ಸ್ನಾತಕೋತ್ತರ ಕೇಂದ್ರದ ಸುಧಾರಣೆಗೆ ಆಗ್ರಹಿಸಿ ಗುಲ್ಬರ್ಗಾ ವಿ.ವಿ ಉಪ ಕುಲಪತಿಗಳಿಗೆ SFI ಮನವಿ.

ರಾಯಚೂರು: ರಾಯಚೂರು ನಗರದ ಯರಗೇರಾ ಸಮೀಪ ಇರುವ ಜಿಲ್ಲೆಯ ಏಕೈಕ ಸ್ನಾತಕೋತ್ತರ ಕೇಂದ್ರ ಭಾಗದಲ್ಲಿರುವ 600 ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಆದರೆ ಸ್ನಾತಕೋತ್ತರ ಕೇಂದ್ರವು ಪ್ರಾಧ್ಯಾಪಕರ ಸಮಸ್ಯೆ, ಹಾಸ್ಟೆಲ್ ಸಮಸ್ಯೆ, ಗ್ರಂಥಾಲಯ ಸಮಸ್ಯೆ, ಕೊಠಡಿ, ಶೌಚಾಲಯ,  ನೈರ್ಮಲ್ಯ, ಕ್ರೀಡಾಂಗಣ, ವಿದ್ಯಾರ್ಥಿ ವೇತ‌ನ, ಬಸ್ಸಿನ ಸಮಸ್ಯೆ ಸೇರಿದಂತೆ ಅನೇಕ ಶೈಕ್ಷಣಿಕ ಸಂಬಂಧಿಸಿದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದಾರೆಂದು SFIನ ಜಿಲ್ಲಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ತಿಳಿಸಿದರು.

ಕ್ರೀಡಾ ಸಾಮಗ್ರಿಗಳನ್ನು ವಿತರಿಸುವ ಜೊತೆಗೆ ಕ್ರೀಡಾಂಗಣ ನಿರ್ಮಾಣ ಮಾಡಬೇಕು. ಗ್ರಂಥಾಲಯದ ಸಮಯವನ್ನು ಬೆಳಿಗ್ಗೆ 8 ರಿಂದ ರಾತ್ರಿ 10 ಘಂಟೆಗೆ ನಿಗದಿ ಮಾಡಬೇಕು. ಹಾಗೂ ಆಪಡೇಟ್ ಪುಸ್ತಕಗಳನ್ನು   ಒದಗಿಸಬೇಕು ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಿ, ಸಿ.ಸಿ ಕ್ಯಾಮರಾ ಗಳನ್ನು ಅಳವಡಿಸಬೇಕು. ಲ್ಯಾಪ್‌ಟಾಪ್ ಮತ್ತು ವಿದ್ಯಾರ್ಥಿ ವೇತನವನ್ನು ವಿತರಿಸಬೇಕು. ಸ್ನಾತಕೋತ್ತರ ಕೇಂದ್ರ ವನ್ನು ವಿಶ್ವವಿದ್ಯಾಲಯವನ್ನಾಗಿ ಮಾಡಲು ಸಂಬಂಧಿಸಿದ ಸರ್ಕಾರದ   ಗಮನಕ್ಕೆತರಬೇಕು. ವಿಶೇಷ  ಬಸ್ ಸೌಕರ್ಯವನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪರಿಮಳ ಅಂಬೇಡ್ಕರ್ ರವರಿಗೆ SFI ರಾಯಚೂರು ಜಿಲ್ಲಾ ಸಮಿತಿ ಯಿಂದ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಲಿಂಗರಾಜ ಕಂದಗಲ್, ಮುಖಂಡರಾದ ಜನೈದ್ ಮರ್ಚೇಡ್ ವಕೀಲರು, ವಿದ್ಯಾರ್ಥಿ ಮುಖಂಡರಾದ ತಿಪ್ಪಣ್ಣ, ಮಲ್ಲುನಗೌಡ, ವಿಜಯಕುಮಾರ್, ಅನ್ನಪೂರ್ಣ, ಹುಸೇನಭಾಷ ಸೇರಿದಂತೆ ಅನೇಕರಿದ್ದರು.

emedialine

Recent Posts

ನಾಳೆ ದಿವಂಗತ ಡಾ. ಎಸ್.ಎಸ್ ಪಾಟೀಲ್ ಅವರ ದ್ವಿತೀಯ ಪುಣ್ಯಸ್ಮರಣೆ: ಪ್ರಶಸ್ತಿ ಪ್ರದಾನ

ಕಲಬುರಗಿ:  ನಾಳೆ ಕರ್ಮಯೋಗಿ ದಿವಂಗತ ಡಾ. ಎಸ್ ಎಸ್ ಪಾಟೀಲ್ ಅವರ ದ್ವಿತೀಯ ಪುಣ್ಯ ಸ್ಮರಣೆಯ ಪ್ರಯುಕ್ತ ಕರ್ಮಯೋಗಿ ಪ್ರಶಸ್ತಿ…

8 hours ago

ರಾಜ್ಯಪಾಲರ ಅವಹೇಳನ ಖಂಡಿಸಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಕಲಬುರಗಿ; ರಾಜ್ಯಪಾರಿಗೆ ಅವಮಾನ ಮಾಡಿದ ಕಾಂಗ್ರೆಸ್ ಕ್ರಮವನ್ನು ಖಂಡಿಸಿ ಹಾಗೂ ಮುಡಾ ಹಗರಣ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ…

8 hours ago

ಶಕ್ತಿ ಯೋಜನೆ: ಕಲಬುರಗಿಯಲ್ಲಿ 757.87 ಲಕ್ಷ ಮಹಿಳೆಯರ ಉಚಿತ ಪ್ರಯಾಣ | ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ರಾಜ್ಯ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದು ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದು, ಕಾಂಗ್ರೆಸ್…

9 hours ago

ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸುವಂತೆ ಡಿ.ಸಿ. ಸೂಚನೆ

ಕಲಬುರಗಿ: ಗೌರಿ-ಗಣೇಶ ಹಬ್ಬ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪಿ.ಓ.ಪಿ ಗಣಪನನ್ನು ತ್ಯಜಿಸಿ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸುವ ಮೂಲಕ ಗಣೇಶೋತ್ಸವನ್ನು…

9 hours ago

ಮಹಿಳೆಯರ ಸುರಕ್ಷತೆಗೆ ಸರಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕು: ಡಾ. ಸುಧಾ ಆರ್ ಹಾಲಕಾಯಿ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕಲ್ಕತ್ತಾ ಮತ್ತು ಬೇರೆ ಕಡೆಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು…

10 hours ago

ಮಲ್ಲಿಕಾರ್ಜುನ್ ಜಿನಕೇರಿಗೆ ಸನ್ಮಾನ

ಕಲಬುರಗಿ: ಬಿಜೆಪಿ ಎಸ್ಸಿ ಮೋರ್ಚದ ನಗರ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಜಿನಕೇರಿ ಅವರಿಗೆ ನೇಮಕ ಮಾಡಿದಕ್ಕೆ  ಮಾದಿಗ ಸಮಾಜದ ಯುವ ಹೋರಾಟಗಾರರ…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420