ಸ್ನಾತಕೋತ್ತರ ಕೇಂದ್ರದ ಸುಧಾರಣೆಗೆ ಆಗ್ರಹಿಸಿ ಗುಲ್ಬರ್ಗಾ ವಿ.ವಿ ಉಪ ಕುಲಪತಿಗಳಿಗೆ SFI ಮನವಿ.

0
63

ರಾಯಚೂರು: ರಾಯಚೂರು ನಗರದ ಯರಗೇರಾ ಸಮೀಪ ಇರುವ ಜಿಲ್ಲೆಯ ಏಕೈಕ ಸ್ನಾತಕೋತ್ತರ ಕೇಂದ್ರ ಭಾಗದಲ್ಲಿರುವ 600 ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಆದರೆ ಸ್ನಾತಕೋತ್ತರ ಕೇಂದ್ರವು ಪ್ರಾಧ್ಯಾಪಕರ ಸಮಸ್ಯೆ, ಹಾಸ್ಟೆಲ್ ಸಮಸ್ಯೆ, ಗ್ರಂಥಾಲಯ ಸಮಸ್ಯೆ, ಕೊಠಡಿ, ಶೌಚಾಲಯ,  ನೈರ್ಮಲ್ಯ, ಕ್ರೀಡಾಂಗಣ, ವಿದ್ಯಾರ್ಥಿ ವೇತ‌ನ, ಬಸ್ಸಿನ ಸಮಸ್ಯೆ ಸೇರಿದಂತೆ ಅನೇಕ ಶೈಕ್ಷಣಿಕ ಸಂಬಂಧಿಸಿದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದಾರೆಂದು SFIನ ಜಿಲ್ಲಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ತಿಳಿಸಿದರು.

ಕ್ರೀಡಾ ಸಾಮಗ್ರಿಗಳನ್ನು ವಿತರಿಸುವ ಜೊತೆಗೆ ಕ್ರೀಡಾಂಗಣ ನಿರ್ಮಾಣ ಮಾಡಬೇಕು. ಗ್ರಂಥಾಲಯದ ಸಮಯವನ್ನು ಬೆಳಿಗ್ಗೆ 8 ರಿಂದ ರಾತ್ರಿ 10 ಘಂಟೆಗೆ ನಿಗದಿ ಮಾಡಬೇಕು. ಹಾಗೂ ಆಪಡೇಟ್ ಪುಸ್ತಕಗಳನ್ನು   ಒದಗಿಸಬೇಕು ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಿ, ಸಿ.ಸಿ ಕ್ಯಾಮರಾ ಗಳನ್ನು ಅಳವಡಿಸಬೇಕು. ಲ್ಯಾಪ್‌ಟಾಪ್ ಮತ್ತು ವಿದ್ಯಾರ್ಥಿ ವೇತನವನ್ನು ವಿತರಿಸಬೇಕು. ಸ್ನಾತಕೋತ್ತರ ಕೇಂದ್ರ ವನ್ನು ವಿಶ್ವವಿದ್ಯಾಲಯವನ್ನಾಗಿ ಮಾಡಲು ಸಂಬಂಧಿಸಿದ ಸರ್ಕಾರದ   ಗಮನಕ್ಕೆತರಬೇಕು. ವಿಶೇಷ  ಬಸ್ ಸೌಕರ್ಯವನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪರಿಮಳ ಅಂಬೇಡ್ಕರ್ ರವರಿಗೆ SFI ರಾಯಚೂರು ಜಿಲ್ಲಾ ಸಮಿತಿ ಯಿಂದ ಮನವಿ ಸಲ್ಲಿಸಲಾಯಿತು.

Contact Your\'s Advertisement; 9902492681

ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಲಿಂಗರಾಜ ಕಂದಗಲ್, ಮುಖಂಡರಾದ ಜನೈದ್ ಮರ್ಚೇಡ್ ವಕೀಲರು, ವಿದ್ಯಾರ್ಥಿ ಮುಖಂಡರಾದ ತಿಪ್ಪಣ್ಣ, ಮಲ್ಲುನಗೌಡ, ವಿಜಯಕುಮಾರ್, ಅನ್ನಪೂರ್ಣ, ಹುಸೇನಭಾಷ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here