ವಾಡಿ: ವಾರಕ್ಕೊಮ್ಮೆ ನಡೆಯುವ ಸಂತೆಯಲ್ಲಿ ತರಕಾರಿ ಮಾರಾವುದೇ ದೊಡ್ಡ ಚಿಂತೆಯಾಗಿದೆ. ಗಂಟು ಮೂಟೆ ಹೊತ್ತು ಸಂತೆಗೆ ಬಂದರೆ ಕೂಡಲು ಜಾಗವಿಲ್ಲ. ಸಿಕ್ಕ ಜಾಗದಲ್ಲಿ ಕುಳಿತು ವ್ಯವಹಾರ ನಡೆಸಲು ಪುರಸಭೆ ಅಧಿಕಾರಿಗಳು ಬಿಡುತ್ತಿಲ್ಲ. ಪದೇಪದೆ ಸ್ಥಳ ಬದಲಿಸಿ ಬೇಸತ್ತಿದ್ದೇವೆ. ಪೌರಕಾರ್ಮಿಕರು ಬಂದು ತರಕಾರಿ ಮೂಟೆಗಳನ್ನು ಬೀಸಾಡಿ ತೊಂದರೆ ಕೊಡುತ್ತಿದ್ದಾರೆ. ಜಾಗ ಬಿಟ್ಟು ಹೋಗುವಂತೆ ದಬಾಯಿಸುತ್ತಾರೆ. ಇದು ನಮಗೆ ಮಾನಸಿಕ ಹಿಂಸೆ ಜತೆಗೆ ಕಿರಿಕಿರಿ ಎನ್ನಿಸುತ್ತಿದೆ. ಇದರಿಂದ ನಮ್ಮ ವ್ಯಾಪಾರದ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಆರ್ಥಿಕ ನಷ್ಟಕ್ಕೂ ಇದು ಕಾರಣವಾಗುತ್ತಿದೆ. ಕುಳಿತ ಜಾಗದ ತೆರಿಗೆ ಕಟ್ಟಲು ನಾವು ಸಿದ್ಧರಿದ್ದೇವೆ. ಸೂಕ್ತ ಮಾರುಕಟ್ಟೆ ಒದಗಿಸಲು ನೀವು ಸಿದ್ಧರಾಗಿ ಎಂದು ತರಕಾರಿ ವ್ಯಾಪಾರಿಗಳು ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ ಪ್ರಸಂಗ ನಡೆಯಿತು.
ಗುರುವಾರದ ಸಂತೆ ನಿಮಿತ್ತ ಪಟ್ಟಣದ ಮಾರುಕಟ್ಟೆ ಬಂದಿದ್ದ ವಿವಿಧ ಗ್ರಾಮಗಳ ಬೀದಿ ವ್ಯಾಪಾರಿಗಳಿಗೆ ಪೌರಕಾರ್ಮಿಕರು ದಬ್ಬಾಳಿಕೆ ನಡೆಸಿದ್ದಾರೆ. ಮೌಲಾನಾ ಅಬ್ದುಲ್ ಕಲಾಂ ಆಜಾದ್ ಹಾಗೂ ಭೀಮನಗರದ ರಸ್ತೆಯಲ್ಲಿ ಕುಳಿತು ವ್ಯಾಪಾರ ನಿರತರ ತರಕಾರಿ ಗಂಟುಗಳನ್ನು ಕಸ ವಿಲೇವಾರಿಯಂತೆ ಸಾಗಿಸುವ ಮೂಲಕ ಹಿಂಸೆ ನೀಡಿದ್ದಾರೆ. ಕೂಡಲು ಎಲ್ಲಿ ಜಾಗ ಸಿಗುತ್ತದೋ ಅಥವ ಯಾವ ಜಾಗದಲ್ಲಿ ವ್ಯಾಪಾರ ವಹಿವಾಟು ಉತ್ತಮವಾಗಿರುತ್ತದೋ ಅಲ್ಲಿ ಕೂಡಲು ಪುರಸಭೆ ಅಧಿಕಾರಿಗಳು ಬಿಡುತ್ತಿಲ್ಲ. ಮಾರುಕಟ್ಟೆಗೆ ಸೀಮಿತ ಜಾಗವಿಲ್ಲ. ಅಧಿಕೃತ ಮಾರುಕಟ್ಟೆಯೂ ವಾಡಿ ಪಟ್ಟಣದಲ್ಲಿಲ್ಲ. ಕರ ವಸೂಲಿ ವ್ಯವಸ್ಥೆ ಕೈಬಿಟ್ಟಿರುವ ಪುರಸಭೆ ಅಧಿಕಾರಿಗಳು, ಪ್ರತಿ ಗುರುವಾರವೂ ಬಡಪಾಯಿ ತರಕಾರಿ ವ್ಯಾಪಾರಿಗಳ ಜೀವ ಹಿಂಡುತ್ತಿದ್ದಾರೆ. ದೂರದ ಊರಿನಿಂದ ಹೊತ್ತು ತಂದ ತರಕಾರಿ ಹಣ್ಣುಗಳನ್ನು ವ್ಯಾಪಾರ ಮಾಡಲಾಗದೆ ನಷ್ಟ ಅನುಭವಿಸಿ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ ಎಂದು ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ, ಪುರಸಭೆ ಸದಸ್ಯ ತಿಮ್ಮಯ್ಯ ಪವಾರ, ಮರಗಪ್ಪ ಕಲಕುಟಗಿ ಹಾಗೂ ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಶರಣಪ್ಪ ವಾಡೇಕರ ದೂರಿದರು.
ಮನವಿ ಪತ್ರ ಹಿಡಿದು ಪುರಸಭೆ ಕಚೇರಿಗೆ ಆಗಮಿಸಿದ ಐವತ್ತಕ್ಕೂ ಹೆಚ್ಚು ವ್ಯಾಪಾರಿಗಳು, ನಾವು ಕೇವಲ ಸಂತೆಗೊಮ್ಮೆ ಬರುತ್ತೇವೆ. ತೆರಿಗೆ ಪಾವತಿಸಲು ನಾವಿ ಸಿದ್ಧರಿದ್ದೇವೆ. ಅನುಕೂಲಕರ ಜಾಗದಲ್ಲಿ ಕೂಡಲು ನಮಗೆ ಅವಕಾಶ ಒದಗಿಸಬೇಕು. ಸೂಕ್ತ ಮಾರುಕಟ್ಟೆ ಜಾಗ ನಿಗದಿಪಡಿಸಬೇಕು. ಒಕ್ಕಲೆಬ್ಬಿಸಿ ತೊಂದರೆ ಕೊಡುವುದನ್ನು ಕೈಬಿಡಬೇಕು. ಕುಡಿಯುವ ನೀರು, ಶೌಚಾಲಯ ಸೌಲಭ್ಯ ಕಡ್ಡಾಯವಾಗಿ ಒದಗಿಸಬೇಕು ಎಂದು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು ಆಗ್ರಹಿಸಿದರು.
ಸಮುದಾಯ ಸಂಘಟನಾಧಿಕಾರಿ ಕಾಶೀನಾಥ ಧನ್ನಿ ಹಾಗೂ ಕಂದಾಯ ಅಧಿಕಾರಿ ಎಂ.ಪಂಕಜಾ ಸಂತೆ ವ್ಯಾಪಾರಿಗಳ ಮನವಿಪತ್ರ ಸ್ವೀಕರಿಸಿ, ಸಮಸ್ಯೆಯನ್ನು ಅಧ್ಯಕ್ಷರು, ಉಪಾಧ್ಯಕ್ಷರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…