ಬಿಸಿ ಬಿಸಿ ಸುದ್ದಿ

ಅಮ್ಮ ಪ್ರಶಸ್ತಿ ಪ್ರದಾನ: ಅಮ್ಮ ಪ್ರಶಸ್ತಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಮ

ಸೇಡಂ: ಸಚಿವರ ಕಾರ್ ಚಾಲಕರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವ ಇಂತಹ ಕಾಲದಲ್ಲಿ ಅಮ್ಮನ ಹೆಸರಲ್ಲಿ ಕೊಡಮಾಡುತ್ತಿರುವ ಅಮ್ಮ ಪ್ರಶಸ್ತಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಮ ಎಂದು ಹಿರಿಯ ಸಂಗೀತ ನಿರ್ದೇಶಕ, ನಟ ವಿ. ಮನೋಹರ ಪ್ರತಿಪಾದಿಸಿದರು.

ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗ ಮಂಟಪದಲ್ಲಿ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನ ಹಮ್ಮಿಕೊಂಡ ರಾಜ್ಯ ಮಟ್ಟದ ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯದ ಮೂಲೆ ಮೂಲೆಯ ಸಾಹಿತಿ ಮತ್ತು ಕಲೆಗಾರರನ್ನು ಪ್ರೋತ್ಸಾಹಿಸಿ ಕೊಡಮಾಡುತ್ತಿರುವ ಅಮ್ಮ ಪ್ರಶಸ್ತಿ ಈ ನಾಡಿನ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ತಿರುಪತಿಯ ಲಡ್ಡುವಿಗಿಂತ ಅಮ್ಮ ಪ್ರಶಸ್ತಿಯೇ ಶ್ರೇಷ್ಠ.                                                                  – ಅಭಿನವ ಸಿದ್ಧಲಿಂಗ ಸ್ವಾಮೀಜಿ, ಮುಗುಳನಾಗಾಂವ ಮಠ                  ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಅನೇಕ ರಾಜರು ಆಳಿದ ಕೋಟೆಗಳು ಅಳಿವಿನ ಅಂಚಿಗೆ ಬಂದು ನಿಂತಿವೆ. ಮಳಖೇಡದ ರಾಷ್ಟ್ರಕೂಟರ ಕೋಟೆಯ ಸ್ಥಿತಿ ಹೀನಾಯವಾಗಿದೆ. ಈ ಕುರಿತು ಸ್ಥಳೀಯ ಶಾಸಕರು ಗಮನಹರಿಸಿ, ಅಭಿವೃದ್ಧಿ ಮಾಡಿ ಪ್ರವಾಸಿ ತಾಣವಾಗಿಸಬೇಕು.                          – ವಿ. ಮನೋಹರ ಸಂಗೀತ ನಿರ್ದೇಶ

ಪ್ರಶಸ್ತಿ ಪ್ರದಾನ: ೧೯ನೇ ವರ್ಷದ ಅಮ್ಮ ಪ್ರಶಸ್ತಿಯನ್ನು ಎಲ್ ಕಾದಂಬರಿ ಕೃತಿಗಾಗಿ ಜೋಗಿ, ಬಕುಲದ ಬಾಗಿಲಿನಿಂದ ಲಲಿತ ಪ್ರಬಂಧ ಕೃತಿಗಾಗಿ ಸುಧಾ ಆಡುಕಳ, ಮಾಸ್ತರರ ನೆರಳಾಗಿ ಅನುವಾದ ಕೃತಿಗಾಗಿ ಪ್ರಭಾಕರ ಸಾತಖೇಡ್, ನಿಜ ರಾಮಾಯಣ ಅನ್ವೇಷಣೆ ವೈಚಾರಿಕ ಕೃತಿಗಾಗಿ ಜಿ.ಎನ್. ನಾಗರಾಜ್, ಟ್ರಯಲ್ ರೂಮಿನ ಅಪ್ಸರೆಯರು ಕವನ ಸಂಕಲನಕ್ಕಾಗಿ ಭುವನಾ ಹಿರೇಮಠ, ಏಕತಾರಿ ಕಥಾ ಸಂಕಲನಕ್ಕಾಗಿ ಚನ್ನಪ್ಪ ಕಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.

ಕಲಬುರಗಿ ಜಿಲ್ಲೆ ಹಲವಾರು ಐತಿಹಾಸಿಕ ಕೋಟೆ ಕೊತ್ತಲಗಳನ್ನು ಹೊಂದಿದೆ. ರಾಜ ಮಹಾರಾಜರ ಆಳ್ವಿಕೆಯ ಕೇಂದ್ರಗಳಾಗಿ ಕಂಗೊಳಿಸಿದೆ. ಈ ಭಾಗವನ್ನು ಪ್ರವಾಸಿ ಕೇಂದ್ರವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುತುವರ್ಜಿವಹಿಸಬೇಕು ಎಂದರು.

ಜನರು ಸಹ ಸರ್ಕಾರದ ಮೇಲೆ ಅವಲಂಬಿತರಾಗದೆ ಖುದ್ದಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗುವ ಪ್ರಯತ್ನ ಮಾಡಬೇಕು. ಸ್ವಚ್ಛ ಭಾರತ ಅಭಿಯಾನ ಎಷ್ಟರ ಮಟ್ಟಿಗೆ ಸಾಕಾರವಾಗಿದೆ ಎಂಬುದನ್ನು ಮನಗಾಣಬೇಕು. ತಾಯಿ ನಾಡಿನ ಹಿರಿಮೆ ಬೆಳೆಸುವುದರೊಂದಿಗೆ ಐತಿಹಾಸಿಕ ಸ್ವತ್ತನ್ನು ಸಹ ಸಂರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ, ಸಾಹಿತಿ ಜಿ.ಎನ್. ಮೋಹನ್ ಮಾತನಾಡಿ, ಭಾರತಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನದಂತೆ ಪ್ರತಿ ಮನೆಗೆ ಅಮ್ಮನೇ ಸಂವಿಧಾನವಿದ್ದಂತೆ. ಕಲಬುರಗಿ ಪತ್ರಿಕೋದ್ಯಮಕ್ಕೆ ಶಕ್ತಿ ಕೊಟ್ಟ ನೆಲವಾಗಿದೆ. ಬರುವ ದಿನಗಳಲ್ಲಿ ೨೦ನೇ ವರ್ಷದ ಅಮ್ಮ ಪ್ರಶಸ್ತಿ ಕಾರ್ಯಕ್ರಮ ಬೆಂಗಳೂರು ಮತ್ತು ಸೇಡಂನಲ್ಲಿ ಏಕಕಾಲಕ್ಕೆ ಆಯೋಜನೆ ಮಾಡುವ ಕುರಿತು ನಿರ್ಧರಿಸಲಾಗಿದೆ ಎಂದರು.

ಗುಲಬರ್ಗಾ ವಿವಿಯ ಕುಲಪತಿ ಡಾ. ಪರಿಮಳ ಅಂಬೇಕರ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಸಾಹಿತಿ ಜೋಗಿ ಮಾತನಾಡಿರು. ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಸಂತೋಷಿರಾಣಿ ಪಾಟೀಲ ತೇಲ್ಕೂರ, ಪ್ರತಿಷ್ಠಾನದ ಅಧ್ಯಕ್ಷೆ ರತ್ನಕಲಾ ಮುನ್ನೂರು ವೇದಿಕೆಯಲ್ಲಿದ್ದರು. ಹಿರಿಯ ಪತ್ರಕರ್ತ ಪ್ರಭಾಕರ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕ, ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿದರು. ಮಹೇಂದ್ರ ಭಜಂತ್ರಿ ಪ್ರಾರ್ಥಿಸಿದರು. ಬಿ.ಹೆಚ್. ನಿರಗುಡಿ ಸ್ವಾಗತಿಸಿ, ವಂದಿಸಿದರು.

ಗೌರವ ಪುರಸ್ಕಾರ: ಕನ್ನಡ ನಾಡು ನುಡಿಗೆ ಸಲ್ಲಿಸಿದ ಕೊಡುಗೆಗಾಗಿ ಅಮ್ಮ ಗೌರವ ಪುರಸ್ಕಾರವನ್ನು ಹಿರಿಯ ಸಂಶೋಧಕ ಪ್ರೊ. ದೇವರಕೊಂಡಾರೆಡ್ಡಿ, ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಹಿರಿಯ ಮಕ್ಕಳ ಸಾಹಿತಿ ವಿ.ಕೆ. ರಾಮೇಶ್ವರ, ಹಿರಿಯ ಲೇಖಕ ಲಿಂಗಾರೆಡ್ಡಿ ಶೇರಿ, ರಂಗ ತಜ್ಞ ಜೀವನರಾಂ ಸುಳ್ಯ ಅವರಿಗೆ ನೀಡಿ ಗೌರವಿಸಲಾಯಿತು.

ಅಲ್ಲದೇ ದಿವಂಗತ ನಾಗಪ್ಪ ಮುನ್ನೂರ ಸ್ಮರಣಾರ್ಥ ಲಕ್ಷ್ಮೀ ಕುಂಬಾರ ಮತ್ತು ರೇಣುಕಾ ಬೋಳದ್ ಅವರಿಗೆ ಹೊಲಿಗೆ ಯಂತ್ರ ನೀಡಲಾಯಿತು. ಸಾಹಿತಿ ಜಮೀಲ್ ಸಾವಣ್ಣ, ಸುಜಿತಕುಮಾರ, ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ಮದನಾ, ಗುಲಬರ್ಗಾ ವಿವಿಯ ಹೆಚ್.ಟಿ. ಪೋತೆ, ಸುಜಾತಾ ಜಂಗಮಶೆಟ್ಟಿ, ಸುರೇಶ ಬಡಿಗೇರ, ಅನಂತರೆಡ್ಡಿ ಬಟಗೇರಾ, ಪಿ.ಎಂ. ಮಣ್ಣೂರ, ಜಯಶ್ರೀ ಐನಾಪೂರ, ಶಿವಶರಣರೆಡ್ಡಿ, ಸಂಗಯ್ಯ ಕೊಂತನಪಲ್ಲಿ, ವಿಜಯಲ್ಕಷ್ಮೀ, ಅಶೋಕ ತೊಟ್ನಳ್ಳಿ, ಭೀಮಣ್ಣ ಆಡಕಿ ಇನ್ನಿತರರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago