ಕಲಬುರಗಿ: ಕಲಬುರಗಿ ನಗರದ ದರ್ಗಾ ಹಜರತ್ ಮೌಲಾಲಿ ಶಹಾಬಜಾರ ಅಧಿಸೂಚಿತ ವಕ್ಫ್ ಸಂಸ್ಥೆಗೆ ಸೇರಿದ ಆಸ್ತಿಗಳಿಗೆ ಸಂಬಂಧಿಸಿದಂತೆ ಅನಧೀಕೃತ ಆಸ್ತಿ ಮಾರಾಟ ಹಾಗೂ ಖರೀದಿಸಿದ ತಲಾ ೮ ಜನ ಪ್ರತಿವಾದಿಗಳನ್ನು ೨೦೧೯ರ ಡಿಸೆಂಬರ್ ೧೨ರಂದು ಮಧ್ಯಾಹ್ನ ೩ ಗಂಟೆಗೆ ವಿಚಾರಣಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕರ್ನಾಟಕ ವಕ್ಫ್ ಬೋರ್ಡ್ ಬೆಂಗಳೂರು ಇಲ್ಲಿ ಖುದ್ದಾಗಿ ಅಥವಾ ವಕೀಲರ ಮೂಲಕ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.
ವಕ್ಫ್ ಕಾಯ್ದೆ ೧೯೫೫ರ ಅಧಿನಿಯಮ ೫೨ರ ಅಡಿಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ.
ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ./೫೦/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೫೨ನ್ನು ಕಲಬುರಗಿ ಕೈಲಾಸ ನಗರದ ಬಸವರಾಜ ಶಿವಶರಣಪ್ಪ ಪಾಟೀಲ ಇವರು ಸಂಗಪ್ಪ ಶಿವಲಿಂಗಪ್ಪ ಮದರಿ ಅವರಿಗೆ ಮಾರಾಟ, ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ./೫೧/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/ಬಿ, ಪ್ಲಾಟ್ ನಂ. ೭೩ನ್ನು ಕಲಬುರಗಿ ಆಳಂದ ರಸ್ತೆಯ ಕೈಲಾಸ ನಗರದ ರೇವಣಸಿದ್ದಪ್ಪ ಶರಣಪ್ಪ ಬೇಲೂರ ಇವರು ಜಯಾ ಪಟೇಲ್ ಲಾಲಜೀ ಭಾಯಿ ಪಟೇಲ್ ಅವರಿಗೆ ಮಾರಾಟ, ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ./೫೨/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/ಬಿ, ಪ್ಲಾಟ್ ನಂ. ೫೧ ನ್ನು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೌಡಗಾಂವದ ಮಲ್ಲಿಕಾರ್ಜುನ ಅಣ್ಣಾರಾವ ಪಾಟೀಲ ಅವರು ಶ್ರೀನಿವಾಸ ಆರ್. ಸೋದಮ್ ರೇವನ್ನಾಥ ಸೋದಮ್ ಅವರಿಗೆ ಪ್ಲಾಟ್ ಮಾರಾಟ ಮಾಡಿದ್ದಾರೆ.
ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ/೫೭/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೫೪ ನ್ನು ಕಲಬುರಗಿ ಶೆಟ್ಟಿ ಕಾಂಪ್ಲೆಕ್ಸ್ ಮಿಲ್ ರಸ್ತೆಯ ಎಂ.ಎಸ್. ಶೆಟ್ಟಿ ಕನ್‌ಸ್ಟ್ರಕ್ಷನ್ ಇವರು ವನವಾಡಾ ಸಂಗೀತಾ ರಾಜು ಗಂಡ ವನವಾಡಾ ರಾಜು ಅವರಿಗೆ ಮಾರಾಟ ಹಾಗೂ ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ/೫೮/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೭೪ ನ್ನು ಕಲಬುರಗಿ ಶೆಟ್ಟಿ ಕಾಂಪ್ಲೆಕ್ಸ್‌ನ ಮಿಲ್‌ನ ರಸ್ತೆಯ ಎಂ.ಎಸ್. ಶೆಟ್ಟಿ ಕನ್‌ಸ್ಟ್ರಕ್ಷನ್ ಇವರು ಕುಪೇಂದ್ರ ತಂದೆ ಧರ್ಮರಾವ ಚಿಂಚೋಳಿ ಅವರಿಗೆ ಪ್ಲಾಟ್ ಮಾರಾಟ ಮಾಡಿದ್ದಾರೆ.
ವಿಚಾರಣೆ ಸಂಖ್ಯೆ ಎ.ಎನ್.ಕ್ಯೂ./೫೯/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೬೧ ನ್ನು ಕಲಬುರಗಿ ಶೆಟ್ಟಿ ಕಾಂಪ್ಲೆಕ್ಸ್ ಮಿಲ್‌ನ ರಸ್ತೆಯ ಎಂ.ಎಸ್. ಶೆಟ್ಟಿ ಕನ್‌ಸ್ಟ್ರಕ್ಷನ್ ಇವರು ಬಾಗವಾನ ನರಹರಿರಾವ್ ಅಷ್ಠೇಕರ್ ಅವರಿಗೆ ಮಾರಾಟ ಹಾಗೂ ವಿಚಾರಣೆ ಸಂಖ್ಯೆ ೬೦/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೪೬ ನ್ನು ಕಲಬುರಗಿ ಶೆಟ್ಟಿ ಕಾಂಪ್ಲೆಕ್ಸ್ ಮಿಲ್ ರಸ್ತೆಯ ಎಂ.ಎಸ್. ಶೆಟ್ಟಿ ಕನ್‌ಸ್ಟ್ರಕ್ಷನ್ ಇವರು ದಿನೇಶ ಜಯಂತಿಲಾಲ್ ಟ್ಯಾಂಕ್ ಅವರಿಗೆ ಪ್ಲಾಟ್ ಮಾರಾಟ ಹಾಗೂ ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ../೬೧/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೪೯/ಎ ನ್ನು ಕಲಬುರಗಿ ಶಹಾಬಜಾರನ ಚಂದ್ರಕಲಾ ಗಂಡ ರೇವಣಯ್ಯಾ ಇವರು ತಮೀಳನಾಡ್ ಮೇರ್‌ಕ್ಯಾನ್‌ಟೈಲ್ ಬ್ಯಾಂಕ್ ಲಿಮಿಟೆಡ್ (Tamilnad Mercantile Bank Ltd) ಅವರಿಗೆ ಪ್ಲಾಟ್ ಮಾರಾಟ ಮಾಡಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…