ವಕ್ಫ್ ಆಸ್ತಿ ಅನಧೀಕೃತ ಮಾರಾಟ: ಡಿಸೆಂಬರ್ 12 ರಂದು ವಿಚಾರಣೆ ಹಾಜರಾಗಲು ಸಮನ್ಸ್ ಜಾರಿ

0
37

ಕಲಬುರಗಿ: ಕಲಬುರಗಿ ನಗರದ ದರ್ಗಾ ಹಜರತ್ ಮೌಲಾಲಿ ಶಹಾಬಜಾರ ಅಧಿಸೂಚಿತ ವಕ್ಫ್ ಸಂಸ್ಥೆಗೆ ಸೇರಿದ ಆಸ್ತಿಗಳಿಗೆ ಸಂಬಂಧಿಸಿದಂತೆ ಅನಧೀಕೃತ ಆಸ್ತಿ ಮಾರಾಟ ಹಾಗೂ ಖರೀದಿಸಿದ ತಲಾ ೮ ಜನ ಪ್ರತಿವಾದಿಗಳನ್ನು ೨೦೧೯ರ ಡಿಸೆಂಬರ್ ೧೨ರಂದು ಮಧ್ಯಾಹ್ನ ೩ ಗಂಟೆಗೆ ವಿಚಾರಣಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕರ್ನಾಟಕ ವಕ್ಫ್ ಬೋರ್ಡ್ ಬೆಂಗಳೂರು ಇಲ್ಲಿ ಖುದ್ದಾಗಿ ಅಥವಾ ವಕೀಲರ ಮೂಲಕ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.

ವಕ್ಫ್ ಕಾಯ್ದೆ ೧೯೫೫ರ ಅಧಿನಿಯಮ ೫೨ರ ಅಡಿಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ.
ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ./೫೦/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೫೨ನ್ನು ಕಲಬುರಗಿ ಕೈಲಾಸ ನಗರದ ಬಸವರಾಜ ಶಿವಶರಣಪ್ಪ ಪಾಟೀಲ ಇವರು ಸಂಗಪ್ಪ ಶಿವಲಿಂಗಪ್ಪ ಮದರಿ ಅವರಿಗೆ ಮಾರಾಟ, ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ./೫೧/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/ಬಿ, ಪ್ಲಾಟ್ ನಂ. ೭೩ನ್ನು ಕಲಬುರಗಿ ಆಳಂದ ರಸ್ತೆಯ ಕೈಲಾಸ ನಗರದ ರೇವಣಸಿದ್ದಪ್ಪ ಶರಣಪ್ಪ ಬೇಲೂರ ಇವರು ಜಯಾ ಪಟೇಲ್ ಲಾಲಜೀ ಭಾಯಿ ಪಟೇಲ್ ಅವರಿಗೆ ಮಾರಾಟ, ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ./೫೨/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/ಬಿ, ಪ್ಲಾಟ್ ನಂ. ೫೧ ನ್ನು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೌಡಗಾಂವದ ಮಲ್ಲಿಕಾರ್ಜುನ ಅಣ್ಣಾರಾವ ಪಾಟೀಲ ಅವರು ಶ್ರೀನಿವಾಸ ಆರ್. ಸೋದಮ್ ರೇವನ್ನಾಥ ಸೋದಮ್ ಅವರಿಗೆ ಪ್ಲಾಟ್ ಮಾರಾಟ ಮಾಡಿದ್ದಾರೆ.

Contact Your\'s Advertisement; 9902492681

ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ/೫೭/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೫೪ ನ್ನು ಕಲಬುರಗಿ ಶೆಟ್ಟಿ ಕಾಂಪ್ಲೆಕ್ಸ್ ಮಿಲ್ ರಸ್ತೆಯ ಎಂ.ಎಸ್. ಶೆಟ್ಟಿ ಕನ್‌ಸ್ಟ್ರಕ್ಷನ್ ಇವರು ವನವಾಡಾ ಸಂಗೀತಾ ರಾಜು ಗಂಡ ವನವಾಡಾ ರಾಜು ಅವರಿಗೆ ಮಾರಾಟ ಹಾಗೂ ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ/೫೮/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೭೪ ನ್ನು ಕಲಬುರಗಿ ಶೆಟ್ಟಿ ಕಾಂಪ್ಲೆಕ್ಸ್‌ನ ಮಿಲ್‌ನ ರಸ್ತೆಯ ಎಂ.ಎಸ್. ಶೆಟ್ಟಿ ಕನ್‌ಸ್ಟ್ರಕ್ಷನ್ ಇವರು ಕುಪೇಂದ್ರ ತಂದೆ ಧರ್ಮರಾವ ಚಿಂಚೋಳಿ ಅವರಿಗೆ ಪ್ಲಾಟ್ ಮಾರಾಟ ಮಾಡಿದ್ದಾರೆ.

ವಿಚಾರಣೆ ಸಂಖ್ಯೆ ಎ.ಎನ್.ಕ್ಯೂ./೫೯/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೬೧ ನ್ನು ಕಲಬುರಗಿ ಶೆಟ್ಟಿ ಕಾಂಪ್ಲೆಕ್ಸ್ ಮಿಲ್‌ನ ರಸ್ತೆಯ ಎಂ.ಎಸ್. ಶೆಟ್ಟಿ ಕನ್‌ಸ್ಟ್ರಕ್ಷನ್ ಇವರು ಬಾಗವಾನ ನರಹರಿರಾವ್ ಅಷ್ಠೇಕರ್ ಅವರಿಗೆ ಮಾರಾಟ ಹಾಗೂ ವಿಚಾರಣೆ ಸಂಖ್ಯೆ ೬೦/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೪೬ ನ್ನು ಕಲಬುರಗಿ ಶೆಟ್ಟಿ ಕಾಂಪ್ಲೆಕ್ಸ್ ಮಿಲ್ ರಸ್ತೆಯ ಎಂ.ಎಸ್. ಶೆಟ್ಟಿ ಕನ್‌ಸ್ಟ್ರಕ್ಷನ್ ಇವರು ದಿನೇಶ ಜಯಂತಿಲಾಲ್ ಟ್ಯಾಂಕ್ ಅವರಿಗೆ ಪ್ಲಾಟ್ ಮಾರಾಟ ಹಾಗೂ ವಿಚಾರಣೆ ಸಂಖ್ಯೆ ಇ.ಎನ್.ಕ್ಯೂ../೬೧/ಜಿಬಿಎ/೨೦೧೯ ರಲ್ಲಿ ಸರ್ವೇ ನಂ. ೧/೧ಬಿ, ಪ್ಲಾಟ್ ನಂ. ೪೯/ಎ ನ್ನು ಕಲಬುರಗಿ ಶಹಾಬಜಾರನ ಚಂದ್ರಕಲಾ ಗಂಡ ರೇವಣಯ್ಯಾ ಇವರು ತಮೀಳನಾಡ್ ಮೇರ್‌ಕ್ಯಾನ್‌ಟೈಲ್ ಬ್ಯಾಂಕ್ ಲಿಮಿಟೆಡ್ (Tamilnad Mercantile Bank Ltd) ಅವರಿಗೆ ಪ್ಲಾಟ್ ಮಾರಾಟ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here