ಬಿಸಿ ಬಿಸಿ ಸುದ್ದಿ

ಶಿಕ್ಷಣ ಕ್ಷೇತ್ರ ನೋಡಿದರೆ ಕಾರ್ಮಿಕರನ್ನು ನಿರ್ಮಿಸುವ ಒಂದು ಕಾರ್ಖಾನೆಯಾಗಿದೆ: ಶೈಲಾ ಅಂಜುಟಗಿ

ಕಲಬುರಗಿ: ಭಾರತದ ಮಣ್ಣಿನ ವಿಶೇಷತೆ ಎಂದರೆ, ಒಂದು ವೃತ್ತಿಯನ್ನು ಕೇವಲ ವೃತ್ತಿಯರೀತಿಯಲ್ಲಿಕಾಣದೇ, ಮಾಡುವ ಕೆಲಸದಲ್ಲಿಕಾಯಕದಲ್ಲಿದೇವರನ್ನುಕಾಣುತ್ತೇವೆ. ಅದಕ್ಕೆ ಬಸವಣ್ಣನವರುಕೂಡಕಾಯಕವೇ ಕೈಲಾಸ ಎಂದಿದ್ದು. ಆದರೆ ಇಂದು ಶಿಕ್ಷಣ ಕ್ಷೇತ್ರ ನೋಡಿದರೆ ಕಾರ್ಮಿಕರನ್ನು ನಿರ್ಮಿಸುವ ಒಂದು ಕಾರ್ಖಾನೆ ರೀತಿ ಇಂದಿನ ಶಿಕ್ಷಣ ಪದ್ದತಿ ಕೆಲಸಗಾರರನ್ನು ತಯಾರಿಸುತ್ತಿದಯೇ ಹೊರತು ವ್ಯಕ್ತಿತ್ವವನ್ನು ನಿರ್ಮಿಸುವುದಿಲ್ಲ. ಶಿಕ್ಷಕರ ಬೋಧನೆ ವ್ಯಕ್ತಿತ್ವ ನಿರ್ಮಿಸುವಂತಿರಬೇಕು ಎಂದು ಎಂದು ಶ್ರೀ ವೀರಸಂಗಮೇಶ್ವರ ವಿದ್ಯಾಪೀಠದ ಕಾರ್ಯದರ್ಶಿಗಳಾದ ಶೈಲಾ ರಾಯಗೊಂಡಪ್ಪ ಅಂಜುಟಗಿ ಅವರು ಕರೆ ನೀಡಿದರು.

ಇತ್ತೀಚೆಗೆ ಅಫಜಲ್ಪೂರಿನ ಶಿರವಾಳದಲ್ಲಿರುವ ಶ್ರೀ ವೀರಸಂಗಮೇಶ್ವರ ವಿದ್ಯಾಪೀಠದಲ್ಲಿ ನಡೆದ ಶಿಕ್ಷಕರಿಗಾಗಿ ಜರುಗಿದ ಬೋಧನಾ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು,ಮೊದಲುಗುರುವೇ ನಮಃ, ಅನ್ನುವುದು ಈಗ ಗುರುವೇನ್ ಮಹಾ ಎಂದಾಗುತ್ತಿದೆ. ಇದುತುಂಬ ಆತಂಕಕಾರಿ ಸಂಗತಿ. ನಿಟ್ಟಿನಲ್ಲಿ ಮಕ್ಕಳಲ್ಲಿನ ವಿಶೇಷ ಕೌಶಲ್ಯಗಳನ್ನು ಗುರ್ತಿಸಿ ಅವರಲ್ಲಿನ ಪ್ರತಿಭೆ ಹೊರತೆಗೆಯುವ ಕೆಲಸ ಶಿಕ್ಷಕರಿಂದಾಗಬೇಕಾಗಿದೆ. ಆವಾಗಲೇ ಡಾ..ಪಿ,ಜೆ.ಅಬ್ದುಲ್ ಕಲಾಂ ಅವರ ಭಾರವನ್ನುಒಂದು ವಿಶ್ವಶಕ್ತಿದೇಶವನ್ನಾಗಿ ನಿರ್ಮಿಸಲು ಸಾಧ್ಯವಾಗುತ್ತದೆಎಂದು ಮಾರ್ಮಿಕವಾಗಿ ನುಡಿದರು.

ತರಬೇತಿ ನೀಡಲು ಬೆಂಗಳೂರಿನಿಂಧ ಆಗಮಿಸಿದ ಮನೋತಜ್ಙ ಹಾಗೂ ಶೈಕ್ಷಣಿಕತಜ್ಞ, ಭುಜಬಲಿ ಬೋಗಾರಅವರು ಶಿಕ್ಷಕರಿಗೆ ಆಪ್ತ ಸಮಾಲೋಚನೆಯ ವಿವಧ ಸ್ತರಗಳನ್ನು ಪ್ರಾಯೋಗಿಕ ತಂತ್ರಗಳ ಮೂಲಕ ಮನದಟ್ಟು ಮಾಡಿಕೊಟ್ಟರು. ಉಪನ್ಯಾಸಕರಾಗಿಕಾಲೇಜಿಗೆ ಹೋಗುವಾಗ ಮನಸ್ಸಿನಲ್ಲಿರುವ ಆತಂಕ, ಗೊಂದಲ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗಿ ಪಾಠ ಮಾಡಬಾರದು. ಬದಲಾಗಿಎಲ್ಲವನ್ನು ಮರೆತು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಉಪನ್ಯಾಸಕರಾಗಿ ಬೋಧನೆ ಮಾಡಬೇಕು. ಮನೆಗೆ ಹೋಗುವಾಗಲೂ ಕಾಲೆಜಿನಲ್ಲಿರುವ ಯಾವುದೇ ರೀತಿಯ ಆಂತರಿಕ ಒತ್ತಡವನ್ನು ತೆಗೆದುಕೊಂಡು ಹೋಗದೇಒಬ್ಬ ಸಹೋದರಿಯಾಗಿ, ತಾಯಿಯಾಗಿ, ಹೆಂಡತಿಯಾಗಿ ತಮ್ಮ ತಮ್ಮ ಜವಾಬ್ದಾರಿಯನ್ನು ಪ್ರಜ್ಞಾಪೂರ್ವಕವಾಗಿ ನಿಭಾಯಿಸಬೇಕು ಎಂದರು.

ವೃತ್ತಿಜೀವನದಲ್ಲಿ ಪ್ರಗತಿ ಹಾಗು ವೈಯಕ್ತಿಕಜೀವನದಲ್ಲಿ ನೆಮ್ಮದಿಯಿಂದ ಯಶಸ್ವಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ತರಬೇತಿ ಶಿಬಿರದ ಕಾರ್ಯಕ್ರಮದಲ್ಲಿ ಮೌನಯೋಗಿ ಫೌಂಡೇಶನ್ನ ಅಧ್ಯಕ್ಷರಾದ ಶ್ರಾವಣಯೋಗಿ ಹಿರೇಮಠ, ಕಾಲೇಜಿನ ಪ್ರಾಂಶುಪಾಲ ಭಗವಂತರಾಯ ಶಿಕ್ಷಕ ವೃಂದದವರೆಲ್ಲರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago