ದಲಿತರ ಮನೆ ಹೊಕ್ಕು ಹೊಡಿತಿವಿ: ಜೇವರ್ಗಿ ಕಾಂಗ್ರೆಸ್ ತಾಪಂ ಸದಸ್ಶನ ವಿಡಿಯೋ ವೈರಲ್

  • ಡಾ.ಅಶೋಕ ದೊಡ್ಮನಿˌ ಹಂಗರಗಾ(ಕೆ)

ಕಲಬುರಗಿ/ಜೇವರ್ಗಿ: ಬಸವಣ್ಣನವರ ಕಾಲಕ್ಕೆ ಹೇಗೆ ಕಲ್ಶಾಣ ಕ್ರಾಂತಿ ಮಾಡಿ ಮನೆಯಲ್ಲಿದ್ದವರಿಗೆ ಎಬ್ಬಿಸಿಕೊಂಡು ಬಂದು ಹೊಡೆದ್ರೋˌ ಹಾಗೆಯೇ ತಾಲೂಕಿನಲ್ಲಿರುವ ಪ್ರತಿಯೊಂದು ಹಳ್ಳಿಗಳ ದಲಿತರಿಗೆ ಮನೆ ಹೊಕ್ಕು ಹೊಡಿತೀವಿ ಎಂದು ಕುರಳಗೇರ ತಾಲೂಕ ಪಂಚಾಯತ ಕಾಂಗ್ರೆಸ್ ಸದಸ್ಶ ಹಾಗೂ ಶಾಸಕ ಡಾ.ಅಜಯಸಿಂಗ್ ಅವರ ಆಪ್ತ ಮಲ್ಲನಗೌಡ ಪಾಟೀಲ್ ಅವರು ಮಾತನ್ನಾಡಿದ ಭಾಷಣದ ವಿಡಿಯೋ ವೈರಲ್ ಆಗಿದೆ. ಜೇವರ್ಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಅವರು ಈ ರೀತಿಯ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ನಾನು ಯಾರಿಗೂ ಅಂಜಿ ಮಾತಾಡಲ್ಲ. ನಾವು ಅಲಗರ್ಜಿಯೂ ಇಲ್ಲ. ನಮ್ಮ ಜೊತೆ ಸಹಬಾಳ್ವೆ ನಡೆಸಿದರೆ ಸರಿˌ ಇಲ್ಲಾಂದ್ರೆ ತಾಲೂಕಿನ ಪ್ರತಿ ಹಳ್ಳಿಯಲ್ಲಿನ ದಲಿತರು ತಮ್ಮ ಒಲೆ ಉರಿಸಲು ನಾವು ಬಿಡಲ್ಲ. ಸಣ್ಣ ಜಾತಿಯ ಬಗ್ಗೆ ಮಾತಾಡಿ ಅವರನ್ನು ಬೆಳೆಸುವುದು ಅವಶ್ಯಕತೆ ನಮಗೆ ಇಲ್ಲ ಎಂದಿದ್ದಾರೆ.

ಇದು ತಾಲೂಕಿನ ದಲಿತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಕುರಳಗೇರಾ ಗ್ರಾಮದಲ್ಲಿ ದಲಿತರು ಮತ್ತು ಸವರ್ಣಿಯರಿಗೆ ಜಗಳವಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣವಿದೆ. ಪರಿಸ್ಥಿತಿ ಬೂದಿಮುಚ್ಚಿದ ಕೆಂಡಂದಂತಿದೆ. ಇಂತಹ ಸ್ಥಿತಿಯಲ್ಲಿ ಒಬ್ಬ ಜನಪ್ರತಿನಿಧಿಯಾಗಿ ಈ ರೀತಿ ಸಾರ್ವಜನಿಕವಾಗಿ ಮಾತನಾಡಿದ್ದುˌ ಪ್ರಕರಣಕ್ಕೆ ಇನ್ನಷ್ಟು ಪ್ರಚೋಧನೆ ನೀಡಿದಂತಾಗಿದೆ.


ದಲಿತರ ಖಂಡನೆ: ಒಬ್ಬ ಜನಪ್ರತಿನಿಧಿಯಾಗಿ ಈ ರೀತಿ ಹೇಳಿಕೆ ನೀಡಿದ ತಾಪಂ ಕಾಂಗ್ರೆಸ್ ಸದಸ್ಶ ಮಲ್ಲನಗೌಡ ಪಾಟೀಲ್ ಕುರಳಗೇರ ಅವರನ್ನು ಬಂಧಿಸಬೇಕು. ಅವರ ಮೇಲೆ ದಲಿತ ದೌರ್ಜನ್ಶ ಕೇಸ್ ದಾಖಲಿಸಬೇಕು. ತಕ್ಷಣ ದಲಿತರ ಕ್ಷೇಮೆ ಕೇಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ತಾಲೂಕಿನ ದಲಿತ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.

emedialine

View Comments

Recent Posts

ಸಮಸಮಾಜಕ್ಕೆ ಅಂಬೇಡ್ಕರ್ ಚಿಂತನೆ ಅಗತ್ಯ

ಆಳಂದ:ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಮಸಮಾಜ ರೂಪಗೊಳ್ಳಲು ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಅಗತ್ಯವಾಗಿವೆ ಎಂದು ಆಳಂದದ ತೋಂಟದಾರ್ಯ ಅನುಭವ…

4 hours ago

ಮೆರವಣಿಗೆ ಸಾಕು, ಅನುಸರಣೆ ಬೇಕು: ಸಚಿವ ಡಾ. ಶರಣಪ್ರಕಾಶ ಪಾಟೀಲ

ಜಾಗತಿಕ ಲಿಂಗಾಯತ ಮಹಾಸಭಾದ 891ನೇ ಬಸವ ಜಯಂತಿ ಉತ್ಸವಕ್ಕೆ ಚಾಲನೆ ಕಲಬುರಗಿ: ಮೆರವಣಿಗೆ ಮತ್ತು ವೈಭವಕ್ಕೆ ಸೀಮಿತವಾಗಿರುವ ಮಹಾತ್ಮರ ಜಯಂತ್ಯುತ್ಸವಗಳು…

4 hours ago

ವಾಡಿ ಬಿಜೆಪಿ ಕಛೇರಿಯಲ್ಲಿ ಬಸವ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಬಸವ ಜಯಂತಿ ಆಚರಿಸಲಾಯಿತು. ಇದೇ ವೇಳೆ…

6 hours ago

ತೆಲಂಗಾಣ – ಮಹಾರಾಷ್ಟ್ರ ಚುನಾವಣಾ ಪ್ರಚಾರಕರಾಗಿ ಸಂಸದ ಡಾ.ಉಮೇಶ್ ಜಾಧವ್ ಗೆ ಹೈಕಮಾಂಡ್ ಹೊಣೆ

ವಿಕಾರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಆರಂಭ ಕಲಬುರಗಿ: ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಅವರನ್ನು ಬಿಜೆಪಿ ಹೈಕಮಾಂಡ್…

6 hours ago

ಮನುಷ್ಯತ್ವದಿಂದ ಬಾಳುವುದೇ ನಿಜವಾದ ಸಂಸ್ಕøತಿ: ಚರಂತೇಶ್ವರ ಶ್ರೀ

ಶಹಾಬಾದ: ಸುಖಮಯ ಜೀವನದಲ್ಲಿ ಅರಿವು ಆಚಾರವನ್ನು ಅಳವಡಿಸಿಕೊಂಡು ಮನುಷ್ಯತ್ವದಿಂದ ಬಾಳುವುದೇ ನಿಜವಾದ ಸಂಸ್ಕøತಿ ಎಂದು ತೊನಸನಹಳ್ಳಿ(ಎಸ್) ಗ್ರಾಮದ ಶ್ರೀ ಸಂಗಮೇಶ್ವರ…

7 hours ago

ಬೊಮ್ಮನಹಳ್ಳಿ ಟಿ: 111 ವರ್ಷದ ಶತಾಯುಷಿ ಹಣಮಂತಿ ತೇಕರಾಳ ನಿಧನ

ಸುರಪುರ: ತಾಲೂಕಿನ ಬೊಮ್ಮನಹಳ್ಳಿ ಟಿ. ಗ್ರಾಮದ ಶತಾಯುಷಿ ಹಣಮಂತಿ ಹಣಮಂತ ತೇಕರಾಳ ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. 111 ವರ್ಷಗಳ ಕಲಾ…

7 hours ago