ಇಂಡೊನೇಷ್ಯಾ: ಹಣದ ದುರ್ಬಳಕೆ, ಸಮಯದ ಉಳಿತಾಯ ಮಾಡಲು ಇಂಡೊನೇಷ್ಯಾ ಸರ್ಕಾರ ಒಂದೇ ದಿನದಲ್ಲಿ ಅಧ್ಯಕ್ಷಿಯ ಚುನಾವಣೆ, ಸಂಸದೀಯ ಚುನಾವಣೆ ಸೇರಿದಂತೆ ಸ್ಥಳೀಯ ಚುನಾವಣೆಗಳನ್ನೂ ಏಪ್ರಿಲ್ 17 ರಂದು ನಡೆಸಿತ್ತು. ಮೇ 22 ರಂದು ಎಲ್ಲಾ ಚುನಾವಣೆಯ ರಿಸಲ್ಟ್ ಘೋಷಣೆ ಆಗಲಿದ್ದು, ಮತ ಎಣಿಕೆ ಕಾರ್ಯದಲ್ಲಿ ತೊಡಗಿದ ಅಧಿಕಾರಿಗಳ ಪೈಕಿ 270ಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿಗಳು ಮೃತಪಟ್ಟಿರುವ ಘಟನೆ ಇಂಡೊನೇಷ್ಯಾ ದೇಶದಲ್ಲಿ ನಡೆದಿದೆ.
ಸುಮಾರು 8 ಲಕ್ಷ ಪೋಲಿಂಗ್ ಬೂತ್ಗಳಲ್ಲಿ, ಶೇಕಡ 80% ರಷ್ಟು ಮತದಾನ ಆಗಿದೆ. ಏಕಕಾಲಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷಿಯ ಚುನಾವಣೆ, ಸಂಸದೀಯ ಚುನಾವಣೆ ಸೇರಿದಂತೆ ಸ್ಥಳೀಯ ಚುನಾವಣೆಗಳಿಗೂ ಸೇರಿ 5 ರೀತಿಯ ಚುನಾವಣೆಗಳಿಗೆ ಮತದಾರರು ಮತ ಹಾಕಿದ್ದಾರೆ. ಮತದಾನಕ್ಕೆ ವೋಟಿಂಗ್ಗೆ ಮತಪತ್ರಗಳನ್ನ ಬಳಸಲಾಗಿದೆ. ಈ ಮತಗಳನ್ನು ಅಧಿಕಾರಿಗಳು ಖುದ್ದು ಕೈಯಿಂದ ಎಣಿಸಬೇಕು ಮತ್ತು ವಿಂಗಡಿಸಬೇಕು. ಈ ಪ್ರಕ್ರಿಯೆಗಾಗಿ ಸಾವಿರಾರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಧಿಕಾರಿಗಳು ಮತದಾನವಾಗಿರುವ ಮತಗಳನ್ನು ಕೈನಿಂದಲೇ ಮತಗಳನ್ನ ಎಣಿಸಬೇಕಾಗಿದ್ದು, ನಿನ್ನೆಯಿಂದ ಸತತವಾಗಿ ಮತ ಎಣಿಕೆ ನಡಿಯುತ್ತಿದೆ. ಆದರೆ ಮತ ಎಣಿಕೆಯ ಸ್ಟ್ರೆಸ್ ತಡೆಯಲಾಗದೆ ಇಲ್ಲಿವರೆಗೂ 270ಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿಗಳು ಮೃತಪಟ್ಟಿದ್ದಾರೆಂದು ತಿಳಿದುಬಂದಿದ್ದು, ಇನ್ನೂ ಮತ ಎಣಿಕೆ ಕಾರ್ಯ ಬಾಕಿ ಇದೆ.
ಮೃತಪಟ್ಟ ಅಧಿಕಾರಿಗಳ ಕುಟುಂಬಕ್ಕೆ ಪರಿಹಾರ ನೀಡಲು ಆರ್ಥಿಕ ಸಚಿವಾಲಯ ಕಾರ್ಯಪ್ರವೃತ್ತವಾಗಿದ್ದು, ಇನ್ನೂ ಕರ್ತವ್ಯ ನಿರತ ಅಧಿಕಾರಿಗಳ ಆರೋಗ್ಯದ ಬಗ್ಗೆ ಗಮನಹರಿಸಲು ತಜ್ಞ ವೈದ್ಯರನ್ನೂ ನೇಮಿಸಿ ವ್ಯವಸ್ಥೆಯು ಮಾಡಲಾಗಿದೆಂದು ಮಾಹಿತಿ ಇದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…