ಇಂಡೊನೇಷ್ಯಾದಲ್ಲಿ ಮತಪತ್ರ ಎಣಿಕೆ ವೇಳೆ 270ಕ್ಕೂ ಹೆಚ್ಚು ಸಿಬ್ಬಂದಿ ಸಾವು..!

0
200

ಇಂಡೊನೇಷ್ಯಾ: ಹಣದ ದುರ್ಬಳಕೆ, ಸಮಯದ ಉಳಿತಾಯ ಮಾಡಲು ಇಂಡೊನೇಷ್ಯಾ ಸರ್ಕಾರ ಒಂದೇ ದಿನದಲ್ಲಿ ಅಧ್ಯಕ್ಷಿಯ ಚುನಾವಣೆ, ಸಂಸದೀಯ ಚುನಾವಣೆ ಸೇರಿದಂತೆ ಸ್ಥಳೀಯ ಚುನಾವಣೆಗಳನ್ನೂ ಏಪ್ರಿಲ್ 17 ರಂದು ನಡೆಸಿತ್ತು. ಮೇ 22 ರಂದು ಎಲ್ಲಾ ಚುನಾವಣೆಯ ರಿಸಲ್ಟ್​ ಘೋಷಣೆ ಆಗಲಿದ್ದು,  ಮತ ಎಣಿಕೆ ಕಾರ್ಯದಲ್ಲಿ ತೊಡಗಿದ ಅಧಿಕಾರಿಗಳ ಪೈಕಿ 270ಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿಗಳು ಮೃತಪಟ್ಟಿರುವ ಘಟನೆ ಇಂಡೊನೇಷ್ಯಾ ದೇಶದಲ್ಲಿ ನಡೆದಿದೆ.

ಸುಮಾರು 8 ಲಕ್ಷ ಪೋಲಿಂಗ್ ಬೂತ್​ಗಳಲ್ಲಿ, ಶೇಕಡ 80% ರಷ್ಟು ಮತದಾನ ಆಗಿದೆ.  ಏಕಕಾಲಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷಿಯ ಚುನಾವಣೆ, ಸಂಸದೀಯ ಚುನಾವಣೆ ಸೇರಿದಂತೆ ಸ್ಥಳೀಯ ಚುನಾವಣೆಗಳಿಗೂ ಸೇರಿ 5 ರೀತಿಯ ಚುನಾವಣೆಗಳಿಗೆ ಮತದಾರರು ಮತ ಹಾಕಿದ್ದಾರೆ. ಮತದಾನಕ್ಕೆ ವೋಟಿಂಗ್​ಗೆ ಮತಪತ್ರಗಳನ್ನ ಬಳಸಲಾಗಿದೆ. ಈ ಮತಗಳನ್ನು ಅಧಿಕಾರಿಗಳು ಖುದ್ದು ಕೈಯಿಂದ ಎಣಿಸಬೇಕು ಮತ್ತು ವಿಂಗಡಿಸಬೇಕು. ಈ ಪ್ರಕ್ರಿಯೆಗಾಗಿ ಸಾವಿರಾರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

Contact Your\'s Advertisement; 9902492681

ಅಧಿಕಾರಿಗಳು ಮತದಾನವಾಗಿರುವ ಮತಗಳನ್ನು ಕೈನಿಂದಲೇ ಮತಗಳನ್ನ ಎಣಿಸಬೇಕಾಗಿದ್ದು, ನಿನ್ನೆಯಿಂದ ಸತತವಾಗಿ ಮತ ಎಣಿಕೆ ನಡಿಯುತ್ತಿದೆ. ಆದರೆ ಮತ ಎಣಿಕೆಯ ಸ್ಟ್ರೆಸ್ ತಡೆಯಲಾಗದೆ ಇಲ್ಲಿವರೆಗೂ 270ಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿಗಳು ಮೃತಪಟ್ಟಿದ್ದಾರೆಂದು ತಿಳಿದುಬಂದಿದ್ದು, ಇನ್ನೂ ಮತ ಎಣಿಕೆ ಕಾರ್ಯ ಬಾಕಿ ಇದೆ.

ಮೃತಪಟ್ಟ ಅಧಿಕಾರಿಗಳ ಕುಟುಂಬಕ್ಕೆ ಪರಿಹಾರ ನೀಡಲು ಆರ್ಥಿಕ ಸಚಿವಾಲಯ ಕಾರ್ಯಪ್ರವೃತ್ತವಾಗಿದ್ದು, ಇನ್ನೂ ಕರ್ತವ್ಯ ನಿರತ ಅಧಿಕಾರಿಗಳ ಆರೋಗ್ಯದ ಬಗ್ಗೆ ಗಮನಹರಿಸಲು ತಜ್ಞ ವೈದ್ಯರನ್ನೂ ನೇಮಿಸಿ ವ್ಯವಸ್ಥೆಯು ಮಾಡಲಾಗಿದೆಂದು ಮಾಹಿತಿ ಇದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here