ಬಿಸಿ ಬಿಸಿ ಸುದ್ದಿ

ಜೇವರ್ಗಿ: ತಾಪಂ ಕಾಂಗ್ರೆಸ್ ಸದಸ್ಶನನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ

ಜೇವರ್ಗಿ: ದಲಿತರಿಗೆ ಮನೆಹೊಕ್ಕು ಹೊಡೆಯುತ್ತೇವೆಂದು ಭಾಷಣ ಮಾಡಿದ ಕುರಳಗೇರ ತಾಲೂಕ ಪಂಚಾಯತ ಸದಸ್ಶ ಮಲ್ಲಣಗೌಡ ಪಾಟೀಲ್ ಅವರನ್ನು ಬಂಧಿಸಬೇಕು. ದಲಿತ ಯುವಕನನ್ನು ಪ್ರೀತಿಸುತಿದ್ದ ಕುರಳಗೇರ ಗ್ರಾಮದ ಗುರುಬಾಯಿ ಎಂಬ ವಿದ್ಶಾರ್ಥಿನಿಯನ್ನು ಮರ್ಯಾದೆ ಹತ್ಶೆ ಹೆಸರಿನಲ್ಲಿ ಕೊಲೆ ಮಾಡಿದ ಕುಟುಂಬದವರಿಗೆ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ದಲಿತ ಸಮನ್ವಯ ಸಮಿತಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ತಹಸೀಲ ಹಳೆ ಕಚೇರಿಯಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನೆ ನಡೆಸಿದ ದಲಿತ ಸಮನ್ವಯ ಸಮಿತಿ ಮುಖಂಡರು ತಹಸೀಲ್ದಾರ ಸಿದ್ದರಾಯ ಬೋಸಗಿ ಅವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಮುಖಂಡರುˌ ಕುರಳಗೇರಿ ಗ್ರಾಮದಲ್ಲಿ ಯುವತಿಗೆ ಚುಡಾಯಿಸುತ್ತಿದ್ದ ಎನ್ನುವ ಕಾರಣಕ್ಕೆ ಜುಮ್ಮಣ್ಣನನ್ನು ಮತ್ತು ಇತರರನ್ನು ವಿನ: ಕಾರಣ ಬಂಧಿಸಲಾಗಿದೆ. ಯುವತಿಯ ಕುಟುಂಬದವರೆ ಮರ್ಯಾದೆ ಹತ್ಶೆ ಹೆಸರಿನಲ್ಲಿ ಕೊಲೆ ಮಾಡಲಾಗಿದೆ. ಯುವತಿಯ ಮರಣೋತ್ತರ ಪರೀಕ್ಷೆಯಲ್ಲಿ ಪ್ರಭಾವಿಗಳು ಒತ್ತಡ ಹಾಕಿ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಯುವತಿಯ ಶವ ಹೊರತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ಮಾಡಬೇಕು. ದಲಿತರಿಗೆ ಅವಮಾನಿಸುವ ರೀತಿಯಲ್ಲಿ ಮಾತನಾಡಿದ ತಾಪಂ ಸದಸ್ಶ ಮಲ್ಲಣಗೌಡ ಪಾಟೀಲ ಅವರ ಮೇಲೆ ದಲಿತ ದೌರ್ಜನ್ಶ ಪ್ರಕರಣದಡಿಯಲ್ಲಿ ಕೇಸ್ ದಾಖಲಿಸಬೇಕು. ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮ್ರತ ಗುರುಬಾಯಿ ಆತ್ಮಕ್ಕೆ ಶಾಂತಿ ಕೋರಿ ಮೌನವ್ರತ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಶ ಚಂದ್ರಶೇಖರ ಹರನಾಳˌ ಮಲ್ಲಣ್ಣ ಕೊಡಚಿˌ ಭೀಮರಾಯ ನಗನೂರˌ ದವಲಪ್ಪ ಮದನˌ ಶ್ರೀಮಂತ ಧನಕರˌ ಶ್ರೀಹರಿ ಕರಕಿಹಳ್ಳಿˌ ರವಿ ಕುಳಗೇರಿˌ ಸಿದ್ದಪ್ಪ ಆಲೂರˌ ಸಿದ್ರಾಮ ಕಟ್ಟಿˌ ಸಂಗಣ್ಣ ಗುಡೂರˌ ದೇವೇಂದ್ರ ವರ್ಮಾˌ ಸಂಗು ಕಟ್ಟಿಸಂಗಾವಿˌ ಗುರಣ್ಣ ಐನಾಪುರˌ ಶ್ರೀಕುಮಾರ ಕಟ್ಟಿಮನಿˌ ರಾಜು ಹಾಲಗಡ್ಲಾˌ ಬಸವರಾಜ ಹೆಗಡೆˌ ಬಸವರಾಜ ಕೋಳಕೂರˌ ಮಹೇಶ ಕೋಕಿಲೆˌ ಮಹಾದೇವ ಕೋಳಕೂರˌ ಸಿದ್ದು ಶರ್ಮಾˌ ಭೀಮರಾಯ ಬಳಬಟ್ಟಿˌ ವಿಶ್ವರಾಧ್ಶ ಮಾಯಾˌ ಭಾಗಣ್ಣ ಸಿದ್ನಾಳˌ ಭಾಗಣ್ಣ ಕೋಳಕೂರ ಸೇರಿದಂತೆ ಇದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

11 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago