ಕಲಬುರಗಿ/ಸೇಡಂ: ಕಾರ್ಮಿಕರಿಗೆ ವೇತನದ ದಾನ ಧರ್ಮ ಬೇಕಾಗಿಲ್ಲ, ದುಡಿದಿರುವ ಕೆಲಸಕ್ಕೆ ಸರಿಯಾಗಿ ವೇತನವನ್ನು ಗೌರವದಿಂದ ಪಾವತಿಸಿ ಎಂದು ಎ.ಐ.ಯು.ಟಿ.ಯು.ಸಿ ರಾಜ್ಯ ಕಾರ್ಯದರ್ಶಿಗಳು ಕೆ. ಸೋಮಶೇಖರ ಬಳ್ಳಾರಿ ಹೇಳಿದರು.
ಸೇಡಂ ನಲ್ಲಿ ನಡೆದ ಪ್ರಥಮ ಕಾರ್ಮಿಕ ಸಮ್ಮೇಳನಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಹಿರಿಯರೂ, ಸಾಹಿತಿಗಳೂ ಆಗಿರುವ ಶ್ರೀ ಲಿಂಗಾರೆಡ್ಡಿ ಶೇರಿಕರ್ ರವರು ಮಾತನಾಡುತ್ತಾ – ನಮ್ಮ ಸಮಯಕ್ಕೆ ತಕ್ಕ ಬೆಲಯನ್ನು ಸರ್ಕಾರಗಳು ಕೊಡದೇ ಇರುವುದು ದುಃಖಕರ ವಿಷಯವಾಗಿದೆ. ಕಾರ್ಮಿಕರನ್ನು ಕನಿಷ್ಠವಾಗಿ ನೋಡಕೊಳ್ಳಲಾಗುತ್ತಿದೆ. ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳುವ ಕೆಲಸಕ್ಕೆ ಜೀವನ ಭದ್ರತೆಯೇ ಇಲ್ಲ. ಆದ್ದರಿಂದಲೇ ಸಮಾನವಾದ ಬಾಳಿಗಾಗಿ ಹೋರಾಡಬೇಕಾಗಿದೆ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸಂಘಟನೆಯ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಕೆ. ಸೋಮಶೇಖರ್ ಬಳ್ಳಾರಿ ಯವರು ಮಾತನಾಡುತ್ತಾ _ ದೇಶದಲ್ಲಿ ಕಾರ್ಮಿಕರ ಪರಿಸ್ಥಿತಿ ಭೀಕರವಾಗಿದೆ. ನಿನ್ನೆಯಷ್ಟೇ ಹಸಿವೆಯನ್ನು ತಾಳದೆ ತಮಿಳುನಾಡಿನಲ್ಲಿ ಒಂದು ಮಗು ಮಣ್ಣು ತಿಂದು ಹೊಟ್ಟೆ ತುಂಬಿಸಿಕೊಂಡಿದೆ. ದಿನವಿಡೀ ಕೆಲಸಮಾಡುವ ಎಲ್ಲರಿಗೂ ನೌಕರರಿಗೆ ಸರ್ಕಾರಿ ನೌಕಕರೆಂದು ಪರಿಗಣಿಸಬೇಕು. ಈಗಿರುವ ವೇತನದಲ್ಲಿಯೇ ತಿಂಗಳ ಜೀವನ ನಡೆಸಲು ಆಗುವುದಿಲ್ಲ. ಕೇವಲ ೮೫ ಮನೆತನಗಳು ದೇಶದ ಸಂಪತ್ತು ಅವರ ಕೈಯಲ್ಲಿಟ್ಟುಕೊಂಡಿದ್ದಾರೆ. ಬೆಲೆಏರಿಕೆಯ ಈ ದಿನಗಳಲ್ಲಿ ಈಗ ಕಾರ್ಮಿಕರಿಗೆ ಕನಿಷ್ಠ ೨೧,೦೦೦ ರೂ. ವೇತನ ನೀಡಬೇಕೆಂದು ದೇಶದಾದ್ಯಂತ ಕಾರ್ಮಿಕರು ಹೋರಾಡಿದರೂ ಸರ್ಕಾರಗಳು ಮನಸ್ಸು ಮಾಡುತ್ತಿಲ್ಲ. ಏಕೆಂದರೆ ಆಳುವ ಎಲ್ಲಾ ಸರ್ಕಾರಗಳು ಕಾಂಇಕ ವಿರೋಧಿಯಾಗಿವೆ. ಬಂಡವಾಳಶಾಹಿಗಳ ಪರವಾಗಿ ಕಾನೂನುಗಳನ್ನು ಜಾರಿಗೊಳಿಸುತ್ತಿವೆ.
ಈ ಕಾನೂನುಗಳನ್ನು ಕಾರ್ಮಿಕರು ರಕ್ತ ಹರಿಸಿದ್ದರಿಂದ ರಚಿಸಲಾಗಿದೆ. ಆದರೆ, ಮೋದಿಯವರ ಜಿ.ಎಸ್.ಟಿ. ಜಾರಿಗೊಳಿಸಿದಾಗಿನಿಂದಲೂ ಲಕ್ಷಾಂತರ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ. ದಿನಗೂಲಿ ಗುತ್ತಿಗೆಯ ಹೆಸರಿನಲ್ಲಿ ಜುಜುಬಿ ಹಣವನ್ನು ನೀಡಿ ಮೋಸ ಮಾಡಿ ದುಡಿಸಿಕೊಳ್ಳಲಾಗುತ್ತಿದೆ. ಅಂಬಾನಿ ಅದಾನಿಗಳಿಗಾಗಿ ದೇಶದ ಬೊಕ್ಕಸವನ್ನೇ ದಾರೆಯೆರುಯುತ್ತಿದ್ದಾರೆ. ಆದರೆ ಜನತೆಗಾಗಿ ಮಾತ್ರ ಏನು ಇಲ್ಲ. ಯಾವ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಈ ಅನ್ಯಾಯ ಶೋಷಣೆಗಳನ್ನು ಸರಿಪಡಿಸಲಿಕ್ಕಾಗುವುದಿಲ್ಲ. ಆದ್ದರಿಂದಲೇ, ಆಮೂಲಾಗ್ರ ಕಾರ್ಮಿಕರ ಹೋರಾಟವನ್ನು ಬೆಳೆಸಿ ಕಾರ್ಮಿಕರ ಸಮಾಜ ಬರುವವರೆಗೂ ಮುಂದುವರೆಸಬೇಕು. ಅಲ್ಲಿ ಶೋಷಣೆ, ಅನ್ಯಾಯ ಇರದ ಸಮಾಜಕ್ಕಾಗಿ ಹೋರಾಡಬೇಕಾಗಿದೆ. ಈ ಸಮ್ಮೇಲನವು ಅನ್ಯಾಯದ ವಿರುದ್ಧ ಹೋರಾಡಲು, ಸಂಘಟನೆಯನ್ನು ಬಲಪಡಿಸಲು ಇರುವುದರಿಂದ ಎಲ್ಲರೂ ಜವಾಬ್ದಾರಿಗಳನ್ನು ತೆಗೆದುಕೊಂಡು ಜಿಲ್ಲೆಯಲ್ಲಿ ಬಲಿಷ್ಠ ಕಾರ್ಮಿಕ ಹೋರಾಟಕ್ಕೆ ಸಜ್ಜಾಗಬೇಕೆಂದು ಕರೆ ನೀಡಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಎಸ್.ಯು.ಸಿ.ಐ.(ಸಿ) ನ ಜಿಲ್ಲಾ ಸಮಿತಿಯ ಸೆಕ್ರೆಟ್ರಿಯೇಟ್ ಸದಸ್ಯರಾದ ಆರ್. ಕೆ. ವೀರಭದ್ರಪ್ಪ ರವರು ಮಾತನಾಡುತ್ತಾ – ಗೌರವಧನ, ಸಹಾಯಧನ, ಹೊರಗುತ್ತಿಗೆ ಹೆಸರಿನಲ್ಲಿ ಕಾರ್ಮಿಕರನ್ನು ಹೀನಾಯವಾಗಿ ದುಡಿಸಿಕೊಳ್ಳುತ್ತಿದೆ. ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಸರ್ಕಾರಗಳು ಇಂತಹ ದುರ್ನೀತಿಗಳನ್ನು ತರುತ್ತಿದೆ. ನೀತಿ ಆಯೋಗದ ಪ್ರಕಾರ ಈಗಾಗಲೇ ೪೨ ದೊಡ್ಡ ಕೈಗಾರಿಕೆಗಳನ್ನು ಖಾಸಗೀಯವರಿಗೆ ಒಪ್ಪಿಸಲು ಸರ್ಕಾರವು ಸಿದ್ಧವಾಗಿದೆ. ಅಚ್ಛೇ ದಿನ ಹೆಸರಿನಲ್ಲಿ ಕಾರ್ಮಿಕರನ್ನು ಶೋಷಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿಯಾಗಿವೆ. ಹಿಗಾಗಿ ಕಾರ್ಮಿಕರ ಹತ್ತಿರ ಕೇವಲ ಮಾಂಸಖಂಡ ಮತ್ತು ಎಲುಬುಗಳ ಹೊರತು ಇನ್ನೇನು ಉಳಿದಿಲ್ಲ ಎಂದರು.
ಭಾಷಣಕಾರರಾಗಿ ಆಗಮಿಸಿದ್ದ ಕಾಂಇಕ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕಾಮ್ರೇಡ್ ಕೆ. ಸೋಮಶೇಖರ್ ಯಾದಗಿರಿ, ಅಂಗನವಾಡಿ ನೌಕರರ ಸಂದ ರಾಜ್ಯ ಉಪಾಧ್ಯಕ್ಷರಾದ ಕಾಮ್ರೇಡ್ ಡಿ. ಉಮಾದೇವಿಯವರು, ಕಾಮ್ರೇಡ್ ಎಸ್.ಎಂ. ಶರ್ಮಾ ರವರು ಮಾತನಾಡಿದರು.
ಸಮ್ಮೇಳನದ ಬೇಡಿಕೆಗಳನ್ನು ತೆಗೆದುಕೊಂಡು ನಗರದಾದ್ಯಂತ ಮುಖ್ಯರಸ್ತೆಯಲ್ಲಿ ಮೆರವಣಿಗೆಯನ್ನು ಮಾಡಿ ನಗರದ ಕೆ.ಎನ್.ಝಡ್. ಹಾಲ್ ನಲ್ಲಿ ಬಹಿರಂಗ ಸಭೆಯನ್ನು ನಡೆಸಲಾಯಿತು. ನಂತರ ಮೊದಲಿಗೆ ಇತ್ತೀಚೆಗೆ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣಗಳನ್ನು ಖಂಡಿಸಿ ಖಂಡನಾಪತ್ರವನ್ನು ಮಂಡಿಸಲಾಯಿತು. ಸಂಯುಕ್ತ ಅಂಗನವಾಡಿ ಸಂಘಟನೆಯ ಸೇಡಂ ತಾಲ್ಲೂಕಿನ ಅಧ್ಯಕ್ಷರಾದ ಕಾಮ್ರೇಡ್ ನಾಗಮಣಿಯವರು ಮಂಡಿಸಿದರು.
ವೇದಿಕೆಯ ಮೇಲೆ ಜಿಲ್ಲಾ ಸಮಿತಿಯ ವಿ.ಜಿ. ದೇಸಾಯಿ, ಮಹೇಶ ನಾಡಗೌಡ, ಸಂತೋಷ್ ಕುಮಾರ್ ಹಿರವೆ, ಭಾಗಣ್ಣ ಬುಕ್ಕಾರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಧ್ಯಕ್ಷರಾದ ಕಾಮ್ರೇಡ್ ರಾಘವೇದ್ರ ಎಂ.ಜಿ. ಯವರು ಅಧ್ಯಕ್ಷತೆ ವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…