ಬಿಸಿ ಬಿಸಿ ಸುದ್ದಿ

ಕವಿತಾಳ ಪಟ್ಟಣ ಪಂಚಾಯತಿಯಲ್ಲಿ ಅವ್ಯವಹಾರ ತನಿಖೆಗೆ ಎಸ್.ಎಫ್.ಐ ಹಾಗೂ DYFI ಸಂಘಟನೆ ಆಗ್ರಹ

ರಾಯಚೂರು: ಕವಿತಾಳ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸದಸ್ಯರು ಮತ್ತು ಅಧಿಕಾರಿಗಳಿಂದ ಶೌಚಾಲಯ ನಿರ್ಮಾಣದಲ್ಲಾದ ಭ್ರಷ್ಟಾಚಾರವನ್ನು ಸೂಕ್ತ ತನಿಖೆಗೆ ಒತ್ತಾಯಿಸಿ ಹಾಗೂ ರಸ್ತೆ ಆಗಲೀಕರಣ ಕಾಮಗಾರಿ ಪ್ರಾರಂಭಕ್ಕೆ ಆಗ್ರಹಿಸಿ ಮತ್ತು ಪಟ್ಟಣಕ್ಕೆ ಇತರ ಆಗತ್ಯ ಮೂಲಭೂತ ಸಾರ್ವಜನಿಕ ಸೌಕರ್ಯಗಳ ಈಡೇರಿಕೆಗಾಗಿ ಕವಿತಾಳ ಪಟ್ಟಣ ಪಂಚಾಯತಿ ಮುಂಭಾಗದಲ್ಲಿ DYFI, SFI ಜೈ ಭಾರತ್ ಸಂಘ, ಕವಿತಾಳ ನವ ನಿರ್ಮಾಣ ವೇದಿಕೆ, ವಾಲ್ಮೀಕಿ ಸಂಘಟನೆ ಸೇರಿದಂತೆ ಇತರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಹೋರಾಟ ನಡೆಯಿತು.

ಹೋರಾಟವನ್ನು ಉದ್ದೇಶಿಸಿ SFI  ಸಂಘಟನೆ ಜಿಲ್ಲಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ ಪಟ್ಟಣವು ಶುದ್ಧ ಕುಡಿಯುವ ನೀರು, ರಸ್ತೆ ಅಗಲೀಕರಣ, ಶೌಚಾಲಯ, ಹಕ್ಕುಪತ್ರ, ಮುಟೇಷನ್ ಸಮಸ್ಯೆ, ವಿದ್ಯುತ್ ದೀಪ, ಜನತಾ ಮನೆ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಇದಕ್ಕೆ ಪರಿಹಾರ ಹುಡಬೇಕಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ಜವಾಬ್ದಾರಿ ಯನ್ನು ಮರೆತು ಭ್ರಷ್ಟಾಚಾರ ದಲ್ಲಿ ತೊಡಗಿದ್ದಾರೆ. ಇಂತಹ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಜನತೆ ಪಾಠ ಕಲಿಸಬೇಕಿದೆ ಶೌಚಾಲಯ ನಿರ್ಮಾಣದಲ್ಲಿ ಸ್ವತಃ ಸದಸ್ಯರೆ ನೇರ ಫಲಾನುಭವಿಗಳಾಗಿ ಮತ್ತು ಕುಟುಂಬಸ್ಥರನ್ನು ಬಳಕೆ ಮಾಡಿ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡುವುದರ ಜೊತೆಗೆ ಇತರ ಕಾಮಗಾರಿಯಲ್ಲೂ ಸಾರ್ವಜನಿಕರ ಲಕ್ಷಾಂತರ ರೂಪಾಯಿ ಹಣವನ್ನು ಲಪಟಾಯಿಸಿದ್ದಾರೆ. ಇದರ ಬಗ್ಗೆ ನಾವು ಈಗಾಗಲೇ ಜಿಲ್ಲೆಯ ಮೇಲಾಧಿಕಾರಿಗಳಾದ ಪಿ.ಡಿ ಮತ್ತು ಡಿ.ಸಿ ಯವರಿಗೆ ದಾಖಲೆ ಸಮೇತವಾಗಿ ದೂರು ಕೊಟ್ಟರು ಕ್ರಮಕ್ಕೆ ಮುಂದಾಗಿರುವುದು ಅವರ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುತ್ತದೆ ಈ ಕೂಡಲೇ ಇವರು ಎಚ್ಚತ್ತುಕೊಂಡು ಸೂಕ್ತ ತನಿಖೆಗೆ ಮುಂದಾಗಬೇಕು ಜೊತೆಗೆ ಭ್ರಷ್ಟಾಚಾರ ದಲ್ಲಿ ಭಾಗಿಯಾದ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡಬೇಕು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನಿನ ಶಿಕ್ಷೆಗೆ ಒಳಪಡಿಸಿ ಪಟ್ಟಣಕ್ಕೆ ಬೇಕಾದ ಎಲ್ಲಾ ಆಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಬೇಕು ನಿರ್ಲಕ್ಷ್ಯ ತೋರಿದಲ್ಲಿ ಮುಂದೆ ಕವಿತಾಳ ಬಂದ್ / ರಸ್ತೆ ತಡೆ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದರು.

ಈ ಸಂಧರ್ಭದಲ್ಲಿ DYFI ರಾಜ್ಯ ಸಮಿತಿ ಸದಸ್ಯರಾದ ಶಿವಪ್ಪ ಬ್ಯಾಗವಾಟ್, DYFI ಅಧ್ಯಕ್ಷರಾದ ರಫೀ ಬೋದೆಲ್, ಜೈ ಭಾರತ್ ಸಂಘಟನೆಯ ಅಧ್ಯಕ್ಷರಾದ ಜಹಾಂಗೀರ್ ಪಾಷ. ಪಟ್ಟಣದ ಮುಖಂಡರಾದ ಭೀಮನಗೌಡ ವಂದ್ಲಿ, ಶಿವಣ್ಣ ವಕೀಲ, ವಾಲ್ಮೀಕಿ ಸಂಘಟನೆಯ ಹನುಮನಗೌಡ ನಾಯಕ, ಜಾವೀದ್ ಎಂ.ಎಸ್. ಲಿಂಗರಾಜ ಕಂದಗಲ್, ಶೇಖರಪ್ಪ ಸಾಹುಕಾರ್, ಎಂ.ಡಿ ಮೈಬೂಬ್ ಸಾಬ್, ಕಿರಿಲಿಂಗ ಮ್ಯಾಗಳಮನಿ, ಪ್ರದೀಪ್ ಕುಮಾರ್ ಜಗ್ಲಿ, ಕೀಶನ್ ಸಿಂಗ್, ಸೈಯದ್ ಮುನ್ನಾವರ್, ಮಲ್ಲಪ್ಪ ಬಸ್ಸಾಪುರ, ರಮೇಶ ಚಿಕ್ಕಬಾದರದಿನ್ನಿ, ಇರ್ಷಾದ್ ಅಂಜುಮನ್, ಸುರೇಶ, ಬಾಬು,  ಮೈಬೂಬ್ ಪಾಷ ಸೇರಿದಂತೆ ಅನೇಕರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

13 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

23 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

23 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

23 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago